ಅಭಿಪ್ರಾಯ / ಸಲಹೆಗಳು

ಮೆಟ್ರಿಕ್ ಪೂರ್ವ ವಸತಿ ನಿಲಯಗಳು

ಅಲ್ಪಸಂಖ್ಯಾತರ ಮೆಟ್ರಿಕ್-ಪೂರ್ವ ವಿದ್ಯಾರ್ಥಿ ನಿಲಯಗಳು

 

ಅಲ್ಪಸಂಖ್ಯಾತರ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸುವ ಸಲುವಾಗಿ ಮೆಟ್ರಿಕ್ ಪೂರ್ವ ಬಾಲಕರ/ ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿ, ನಿರ್ವಹಿಸಲಾಗುತ್ತಿದೆ.ಬೀದರ್ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 01 ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯವಿದ್ದು 50 ಬಾಲಕರು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.

1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1500/- ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ ಪೂರೈಕೆ.
4.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.300/-ರಂತೆ 10 ತಿಂಗಳ ಅವಧಿಗೆ ಇತರೆ ವೆಚ್ಚ .
5.ಪ್ರತಿ ಬಾಲಕ ವಿದ್ಯಾರ್ಥಿಗೆ ರೂ.50/-ರಂತೆ 10 ತಿಂಗಳಿಗೆ ಕ್ಷೌರದ ವೆಚ್ಚ ನೀಡಿಕೆ.
6.ಪ್ರತಿ ವಿದ್ಯಾರ್ಥಿಗೆ ರೂ.200/-ರ ವೆಚ್ಚದಲ್ಲಿ ವರ್ಷಕ್ಕೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.
7.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.500/- ರಂತೆ 10 ತಿಂಗಳ ಅವಧಿಗೆ ವೈದ್ಯಕೀಯ ವೆಚ್ಚ ನೀಡಿಕೆ.
8.ಪ್ರತಿ ವಿದ್ಯಾರ್ಥಿಗೆ 3 ವರ್ಷಕ್ಕೊಮ್ಮೆ ಹಾಸಿಗೆ ಹೊದಿಕೆ ಸರಬರಾಜು.
9.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ.600/-ರಂತೆ ಹಾಗೂ ಮಂಜೂರಾತಿ ಸಂಖ್ಯೆ
50ಕ್ಕಿಂತ ಹೆಚ್ಚಾಗಿ ಇರುವ ನಿಲಯಕ್ಕೆ ರೂ.1000/-ದಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸಲಾಗುತ್ತದೆ.
10.ಮೂವರು ಅಲ್ಪಕಾಲಿಕ ಬೋಧಕರನ್ನು ಮಾಹೆಯಾನ ರೂ.2000/-ದಂತೆ ಗೌರವಧನ ಕೊಡುವುದರೊಂದಿಗೆ
ಕಠಿಣ ವಿಷಯಗಳಲ್ಲಿ ಪಾಠ ಹೇಳಿಸುವುದು.
11.ಪ್ರತಿ ವಿದ್ಯಾರ್ಥಿನಿಲಯಕ್ಕೆ ವಾರ್ತಾ ಪತ್ರಿಕೆ ಮತ್ತು ನಿಯತಕಾಲಿಕೆ ಖರೀದಿಗಾಗಿ ವಾರ್ಷಿಕವಾಗಿ ರೂ.3000/-
12.ಶೌಚಾಲಯಗಳ ಸ್ವಚ್ಛತೆಗಾಗಿ ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000/- ದಂತೆ 10 ತಿಂಗಳಿಗೆ

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು

1.ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸರ್ಕಾರಿ / ಸರ್ಕಾರಿ ಅಂಗೀಕೃತ
ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು..
2.ಶೈಕ್ಷಣಿಕ ಸಂಸ್ಥೆಯಂದ 5 ಕಿ.ಮೀ ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶೇಕಡ 90ರಷ್ಟು ಸ್ಥಾನಗಳನ್ನು
ಹಾಗೂ ಉಳಿದ 10ರಷ್ಟು ಸ್ಥಾನಗಳನ್ನು 5 ಕಿ.ಮೀ.ಗಳಿಗಿಂತ ಕಡಿಮೆ ದೂರದ ಸ್ಥಳಗಳ ವಿದ್ಯಾರ್ಥಿಗಳಿಗೆ
ನೀಡಲಾಗುವುದು.

3.ಬೇಸಿಗೆ ರಜಾ ನಂತರ ಎಲ್ಲಾ ನಿಲಯಗಳನ್ನು ಜೂನ್ 1ರಂದು ತೆರೆಯಲಾಗುತ್ತದೆ.ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ನಿಲಯಾರ್ಥಿಗಳನ್ನು ಮಾತ್ರ ನವೀಕರಣ ವಿದ್ಯಾರ್ಥಿಗಳೆಂದು ಪರಿಗಣಿಸಿ ಆಯ್ಕೆ
ಸಮಿತಿಯ ಅನುಮೋದನೆಗೆ ಒಳಪಟ್ಟು ವಿದ್ಯಾರ್ಥಿಗಳನ್ನು ನವೀಕರಿಸಲಾಗುವುದು.
4.ನವೀಕರಣ ವಿದ್ಯಾರ್ಥಿಗಳ ಪ್ರವೇಶಾತಿಯ ಬಳಿಕ ಉಳಿದ ಸ್ಥಾನಗಳಿಗೆ ಆಯ್ಕೆ ಸಮಿತಿಯು ಆಯ್ಕೆ
ಮಾಡಿದ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದು.

 

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.

1

ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು

ಅಧ್ಯಕ್ಷರು

 

2

ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು

ಸದಸ್ಯರು

 

3

ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರು

ಸದಸ್ಯರು

 

4

ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು

ಸದಸ್ಯರು

 

5

ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ)

ಸದಸ್ಯರು

 

6

ಆಯಾ ತಾಲ್ಲೂಕಿನ ತಹಶೀಲ್ದಾರರು

ಸದಸ್ಯರು

 

7

ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು

ಸದಸ್ಯರು

 

8

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳು

ಸದಸ್ಯ ಕಾರ್ಯದರ್ಶಿ

 

ಇತ್ತೀಚಿನ ನವೀಕರಣ​ : 10-05-2021 03:12 AM ಅನುಮೋದಕರು: BALIRAM KUSHALRAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೀದರ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080