ಅಭಿಪ್ರಾಯ / ಸಲಹೆಗಳು

ಇಲಾಖೆಯ ಬಗ್ಗೆ

ಮತೀಯ ಅಲ್ಪಸಂಖ್ಯಾತರ ಜನಸಂಖ್ಯೆಯು ಜಿಲ್ಲೆಯಲ್ಲಿ ಶೇಕಡ 11.24% ರಷ್ಟು ಇರುತ್ತದೆ.

ಕರ್ನಾಟಕದಲ್ಲಿ ಮುಸಲ್ಮಾನರು, ಕ್ರಿಶ್ಚಿಯನ್ನರು,  ಜೈನರು,  ಭೌದ್ಧರು, ಸಿಖ್ಖರು ಮತ್ತು ಪಾರ್ಸಿಗಳನ್ನು ಮತೀಯ ಅಲ್ಪಸಂಖ್ಯಾತರೆಂದು ಗುರುತಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ :- ಎಸ್‍ಡಬ್ಲ್ಯೂಡಿ-ಬಿಸಿಎ 94 ದಿನಾಂಕ: 17.09.1994ರಲ್ಲಿ ಈ ಕೆಳಕಂಡ ಮತೀಯ ಅಲ್ಪಸಂಖ್ಯಾತರನ್ನು ವಿವಿಧ ಹಿಂದುಳಿದ ಗುಂಪುಗಳಲ್ಲಿ ವರ್ಗೀಕರಿಸಿ ಸಂವಿಧಾನದ ಅನುಚ್ಛೇದ 15 (4) ಮತ್ತು 16 (4) ರಡಿಯಲ್ಲಿ ಅಲ್ಪಸಂಖ್ಯಾತರ ವರ್ಗಗಳ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಒದಗಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿಕ್ಕಮಗಳೂರು ಇಲ್ಲಿ 1999-2000 ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬೇರ್ಪಟ್ಟು, ಸ್ವಾಯತ್ತ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದಿಂದ ಹಲವು ಯೋಜನೆಗಳಾದ ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಕಾನೂನು ಪದವೀಧರರಿಗೆ ಶಿಷ್ಯವೇತನ, ವಿದ್ಯಾರ್ಥಿನಿಲಯಗಳು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳ ಆರಂಭ, ಅಲ್ಪಸಂಖ್ಯಾತರ ಕಾಲೋನಿಗಳಿಗೆ ಮೂಲಭೂತ ಸೌಕರ್ಯ, ಚರ್ಚ್ ದುರಸ್ತಿ ಮತ್ತು ನವೀಕರಣ, ಸ್ಮಶಾನ ಆವರಣ ಗೋಡೆ ನಿರ್ಮಾಣ, ಅನಾಥಾಶ್ರಮ/ವೃದ್ಧಾಶ್ರಮಗಳಿಗೆ ಸಹಾಯಾನುಧಾನ, ಶಾದಿಮಹಲ್/ಸಮುದಾಯಭವನ ನಿರ್ಮಾಣ, ಜೈನ್ ಸಮುದಾಯದ ಅಭಿವೃದ್ಧಿ, ಬೌದ್ಧ ವಿಹಾರ (ದೇವಾಲಯ) ದುರಸ್ತಿ ಮತ್ತು ನವೀಕರಣ, ಕೌಶಲ್ಯ ಅಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ, ಮದರಸಾಗಳಲ್ಲಿ ಔಪಚಾರಿಕ ಮತ್ತು ಆಧುನಿಕ ಶಿಕ್ಷಣಕ್ಕೆ ಸಹಾಯಧನ, ಜರ್ನಲಿಸಮ್ (ಪತ್ರಿಕೋದ್ಯಮ) ತರಬೇತಿಗೆ ಪ್ರೋತ್ಸಾಹಧನ, ಇತ್ಯಾದಿ ಯೋಜನೆಗಳನ್ನು ನೇರವಾಗಿ ಅರ್ಹ ಪಲಾನುಭವಿಗಳಿಗೆ ಸೌಲಭ್ಯ ಪಡೆಯುವಂತೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರುರವರು ಮೇಲ್ಕಂಡ ಎಲ್ಲಾ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಶ್ರಮಿಸಿರುತ್ತಾರೆ ಹಾಗೂ ನಮ್ಮೆಲ್ಲರಿಗೂ ಸೂಕ್ತ ಮಾರ್ಗದರ್ಶಕರಾಗಿದ್ದು ಇವರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.               

ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಸಹಾಯ ಪಡೆಯದೆ ಹಣವನ್ನು ದುಂದು ವೆಚ್ಚ ಮಾಡದೆ ನೇರವಾಗಿ ಕಛೇರಿಗೆ ಅರ್ಜಿಗಳನ್ನು ಸಲ್ಲಿಸುವುದು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಛೇರಿಗಳನ್ನು ಚಿಕ್ಕಮಗಳೂರು ವಿಭಾಗ ಮತ್ತು ತರೀಕೆರೆ ವಿಭಾಗಗಳಲ್ಲಿ ತೆರಲಾಗಿದೆ. ಮುಂದುವರಿದು ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಕಡೂರು, ತರೀಕೆರೆ ತಾಲ್ಲೂಕುಗಳಲ್ಲಿ ಅರಿವು ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸದರಿ ಕಛೇರಿಗಳಲ್ಲಿ ಇಲಾಖಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

                                                                                

ಅಲ್ಪಸಂಖ್ಯಾತರ  ಕಲ್ಯಾಣ ಇಲಾಖೆ, ಚಿಕ್ಕಮಗಳೂರು ಇಲ್ಲಿ ಕಾರ್ಯನಿರ್ವಹಿಸಿದ ಜಿಲ್ಲಾ ಅಧಿಕಾರಿಗಳ ವಿವರ

ಕ್ರ.ಸಂ

       ಜಿಲ್ಲಾ ಅಧಿಕಾರಿಗಳ ಹೆಸರು

                       ಅವಧಿ 

ಎಲ್ಲಿಂದ

ಎಲ್ಲಿಯವರೆಗೆ

1

ಶ್ರೀ ನಜೀಬುಲ್ಲಾ ಖಾನ್ (ಪ್ರಭಾರ)

16-08-2011

26-07-2012

2

ಶ್ರೀ ಸಿ.ಕೆ ಜಗದೀಶಕುಮಾರ್ (ಪ್ರಭಾರ)

26-07-2012

03-07-2013

3

ಶ್ರೀ ಮೊಹಮ್ಮದ್ ಸಿಯಾರ್ (ಪ್ರಭಾರ) 

03-07-2013

26-09-2013

4

ಶ್ರೀ ಲಕ್ಷ್ಮಾನಾಯ್ಕ್ (ಪ್ರಭಾರ)

26-09-2013

10-03-2015

5

ಶ್ರೀ ಪ್ರಮೋದ್ ಹೆಚ್.ಪಿ (ಪ್ರಭಾರ)

10-03-2015

01-03-2016

6

ಶ್ರೀ ಮಂಜುನಾಥ್ ಎಸ್ ಆರ್ (ಪ್ರಭಾರ)

01-03-2016

01-04-2017

7

ಕುಮಾರಿ ಬಿಂದುಮಣಿ  ಎಂ.ಎಲ್  ಬಿ,ಇ ಎಂ.ಟೆಕ್

01-04-2017

03-02-2020

8

ಶ್ರೀ ತಿಪ್ಪೇಸ್ವಾಮಿ ಎನ್ (ಪ್ರಭಾರ)

04-02-2020

18-02-2020

9

ಶ್ರೀ ಪ್ರದೀಪ ಸಿಂಹ.ಎಂ ಬಿ.ಟೆಕ್

19-02-2020

13-11-2020

10

ಜಿನೇಂದ್ರ ಎಂ (ಪ್ರಭಾರ)

13-11-2020

07-12-2020

11

ಶ್ರೀಮತಿ ಸಂಧ್ಯಾ ಕೆ.ಎಂ ಎಂ.ಎಸ್ಸಿ, ಬಿ'ಇಡಿ (ಪ್ರಭಾರ)

07-12-2020    

 30-07-2021

12

ಶ್ರೀ ಸಂಗಮೇಶ್ವರ. (ಬಿ.ಇ)

30-07-2021

 24-6-2022

13

ಶ್ರೀ ಆಂಜನಪ್ಪ ಏಸ್ (ಪ್ರಭಾರ)
 24-6-2022  08-08-2022

14

ಶ್ರೀ ಸಂಗಮೇಶ್ವರ. (ಬಿ.ಇ) 08-08-2022  

                                                                                                                                   

 

 

                       

 

ಇತ್ತೀಚಿನ ನವೀಕರಣ​ : 27-09-2022 05:15 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿಕ್ಕಮಗಳೂರು ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080