Feedback / Suggestions

Christian Development Scheme

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ,ಚಿಕ್ಕಮಗಳೂರು

ಕ್ರಿಶ್ಚಿಯನ್   ಸಮುದಾಯಭವನ

ಕ್ರೈಸ್ತರ ಅಭಿವೃದ್ದಿ ಯೇಜನೆಯಡಿ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಿಶ್ಚಿಯನ್ ಜನಾಂಗದವರು ಸಾಮಾಜಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಉತ್ತೇಜನ ನೀಡಲು ಸದರಿ ಸಮುದಾಯಗಳಿಗೆ ಸಂಘ ಸಂಸ್ಥೆಗಳು /ಟ್ರಸ್ಟ್‍ಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುದಾನದ ಗರಿಷ್ಟ ಮಿತಿಯನ್ನು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ರೂ. 1.00 ಕೋಟಿ ಮತ್ತು ಇತರೆ ಸ್ಥಳಗಳಲ್ಲಿ ರೂ. 50.00 ಲಕ್ಷಗಳಿಗೆ ಮೀರದಂತೆ ಅನುದಾನ ಮಂಜೂರು ಮಾಡಲಾಗುವುದು.

ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

1.ನಿಗಧಿತ ನಮೂನೆಯಲ್ಲಿ ಅರ್ಜಿ

2.ನೊಂದಾಯಿತ ಬೈಲಾ

3.ನೊಂದಾಯಿತ ಮತೀಯ ಅಲ್ಪಸಂಖ್ಯಾತರ ಸರ್ಕಾರಿ ಸ್ವಾಮ್ಯದ ಬೋರ್ಡು ಮತ್ತು ಕಾಪೋರೇಷನ್‍ಗಳು/ ಖಾಸಗಿ ಸಂಘ, ಸ್ವಯಂ ಸೇವಾ ಸಂಸ್ಥೆಗಳು/ಟ್ರಸ್ಟ್‍ಗಳು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ಅಥವಾ ಟ್ರಸ್ಟ್ ಕಾಯ್ದೆಯನ್ವಯ ಅಥವ ಇತರೆ ಸಂಬಂಧಪಟ್ಟ ಕಾಯ್ದೆಯಡಿಯಲ್ಲಿ ನೊಂದಣಿಯಾಗಿ 3 ವರ್ಷಗಳಾಗಿರಬೇಕು.(ದೃಢೀಕರಿಸಿ ಸಲ್ಲಿಸುವುದು)

  1. ವರ್ಷಗಳ ಆಡಿಟ್ ವರದಿಗಳನ್ನು ಚಾರ್ಟೆಡ್ ಅಕೌಂಟಂಟ್‍ರವರಿಂದ ಆಡಿಟ್ ವರದಿ

5.ಆಡಳಿತ ಮಂಡಳಿಯ ಸದಸ್ಯರ ಪಟ್ಟಿ (ನೊಂದಣಿಯಾಗಿರಬೇಕು) (ಸದಸ್ಯರ ಭಾವಚಿತ್ರ, ಆಧಾರ್ ಸಂಖ್ಯೆ/ವೋಟರ್ ಐಡಿಯೊಂದಿಗೆ ಪೂರ್ಣವಿವರ ಸಲ್ಲಿಸುವುದು)

6.ಸಂಸ್ಥೆಯ ಹೆಸರಿನಲ್ಲಿ ನಿವೇಶನದ ದಾಖಲಾತಿಗಳು.

7.ನಿವೇಶನವು ಭೂ ಪರಿವರ್ತನೆಯಾಗಿದ್ದಲ್ಲಿ ನಿವೇಶನವು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿತವಾಗಿರುವ ಬಗ್ಗೆ ದಾಖಲಾತಿ

8.ನಿವೇಶನಕ್ಕೆ ಸಂಬಂಧಿಸಿದ ಋಣಭಾರ ಪ್ರಮಾಣ ಪತ್ರ.

9.ಜಿಲ್ಲಾ ಕೇಂಧ್ರಗಳಲ್ಲಿ 500 ಜನರು ಒಟ್ಟಿಗೆ ಕೂರುವಂಥಹ ಹಾಲ್ ಗಳನ್ನು ಹಾಗೂ ಇತರೆ ಸ್ಥಳಗಳಲ್ಲಿ 200 ಜನರು ಒಟ್ಟಿಗೆ ಕೂರುವಂಥಹ ಹಾಲ್‍ಗಳನ್ನು ಹೊಂದಿರಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯ, ವಿದ್ಯುಚ್ಛಕ್ತಿ, ಪಾರ್ಕಿಂಗ್ ಸೌಲಭ್ಯ, ಅಗತ್ಯ ಕೊಠಡಿಗಳು, ಸ್ನಾನದ ಕೊಠಡಿಗಳು, ಲಾಕರ್ ಸೌಲಭ್ಯ, ಆದರ್ಶ ಮಾದರಿಯ ಅಡುಗೆ ಕೋಣೆ, ಊಟದ ಹಾಲ್ ಇತ್ಯಾದಿ ಈ ಎಲ್ಲಾ ಸೌಲಭ್ಯಗಳುಳ್ಳ ಕಟ್ಟಡದ ನಕ್ಷೆಯನ್ನು ತಯಾರಿಸಿ ಸ್ಥಳಿಯ, ನಗರ ಸಭೆ, ಪುರಸಭೆ, ಪಂಚಾಯ್ತಿತಿಗಳಿಂದ ಅನುಮೋದನೆ ಆಗಿರಬೇಕು.

10.ಕಟ್ಟಡದ ಪರವಾನಗಿಯನ್ನು ಪಡೆದಿರಬೇಕು.

  1. ಕಟ್ಟಡದ ಅಂದಾಜು ವೆಚ್ಚವನ್ನು ಸರ್ಕಾರಿ ಸಂಸ್ಥೆಗಳಲ್ಲಿನ/ಅನುಮೋದಿತ ರ್ಯಪಾಲಕ/ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಧೃಢೀಕರಿಸಿ ಸಲ್ಲಿಸುವುದು.
  2. ಲಗತ್ತಿಸಿರುವ ನಮೂನೆಯಲ್ಲಿ ರೂ 100/- ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ. (ರೂ 100 ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸುವಾಗ ಅಧ್ಯಕ್ಷರು/ಚರ್ಚ್ ಫಾದರ್‍ರವರ ಹೆಸರು ಮತ್ತು ವಿಳಾಸವನ್ನು ನಮೂದಿಸಿ ನೋಟರಿ ಮಾಡತಕ್ಕದ್ದು)
  3. ಜನಸಂಖ್ಯೆ ವಿವರ.
  4. ಸಂಸ್ಥೆಯವರು ಇದೇ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿರುವುದಿಲ್ಲ ಎಂದು ಮುಚ್ಚಳಿಕೆ ಪ್ರಮಾಣ ಪತ್ರ ನೀಡುವುದು

 

ಚರ್ಚ್ ದುರಸ್ಥಿ ಮತ್ತು ಜೀರ್ಣೋದ್ಧಾರಕ್ಕಾಗಿ ಸಹಾಯಧನ

ಸರ್ಕಾರಿ ಆದೇಶ ಸಂಖ್ಯೆ: ಅಸಂಕಇ 70 ಎಂಡಿಎಸ್ 2011, ಬೆಂಗಳೂರು ದಿನಾಂಕ:19.09.2011ರ ಆದೇಶದಲ್ಲಿ ಕರ್ನಾಟಕ ರಾಜ್ಯದ ಚರ್ಚ್ ದುರಸ್ಥಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಅನುದಾನವನ್ನು ಚರ್ಚುಗಳ ಕಟ್ಟಡ ನಿರ್ಮಾಣದ ವರ್ಷಗಳ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಲಾಗುವುದು.

 

ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

1.ನಿಗದಿತ ನಮೂನೆಯಲ್ಲಿ ಅರ್ಜಿ

2.ಚರ್ಚ್ ನೊಂದಣಿ ಪ್ರಮಾಣ ಪತ್ರ (ಭಾರತಿಯ ನ್ಯಾಸ ಅಧಿನಿಯಮ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಣಿ ಮಾಡಿಸಿರಬೇಕು/ಡಯಾಸಿಸ್‍ನ ನೊಂದಣಿ ಪತ್ರ)

3.ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ಸಂಬಂಧಪಟ್ಟ ಬಿಷಪ್ /ಡಿ,ಎಸ್ ಇವರಿಂದ ಶಿಫಾರಸ್ಸು ಪತ್ರ

4.ಸಂಸ್ಥೆಯ ಬೈಲಾ ಪ್ರತಿ (ಧೃಡೀಕರಿಸಿ ಸಲ್ಲಿಸುವುದು)

5.ಕಟ್ಟಡ ನಕ್ಷೆ (ಮೂಲ ಪ್ರತಿ) ಕಾರ್ಯಪಾಲಕ ಅಭಿಯಂತರವರಿಂದ ದೃಢೀಕತವಾಗಿರಬೇಕು (ಸ್ಥಳಿಯ, ನಗರ ಸಭೆ, ಪುರಸಭೆ, ಪಂಚಾಯ್ತಿತಿಗಳಿಂದ ಅನುಮೋದನೆ ಆಗಿರಬೇಕು)

6.ಕಾಮಗಾರಿಯ ಅಂದಾಜು ಪಟ್ಟಿ  (ಮೂಲ ಪ್ರತಿ) ಕಾರ್ಯಪಾಲಕ ಅಭಿಯಂತರವರಿಂದ ದೃಢೀಕತವಾಗಿರಬೇಕು

7.ಮೂರು ವರ್ಷದ ಆಡಿಟ್ ರಿಪೋರ್ಟ್ (ಚಾರ್ಟೆಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು)

8.ಅನುದಾನ ಪಡೆಯುವ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರ  (ರೂ 100 ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸುವಾಗ ಅಧ್ಯಕ್ಷರು/ಚರ್ಚ್ ಫಾದರ್‍ರವರ ಹೆಸರು ಮತ್ತು ವಿಳಾಸವನ್ನು ನಮೂದಿಸಿ ನೋಟರಿ ಮಾಡತಕ್ಕದ್ದು)

9.ಕಾಮಗಾರಿಯ ಅಂದಾಜು ವೆಚ್ಚದ ಶೇ 50 ರಷ್ಟು ಸಂಸ್ಥೆಯಿಂದ ಭರಿಸುವ ಬಗ್ಗೆ ದೃಢೀಕರಣ ಪತ್ರ

10.ಕಟ್ಟಡವನ್ನು ನಿರ್ಮಿಸಲು ಅಧಿಕೃತ ಪರವಾನಿಗೆ.

11.ಚರ್ಚ್ ಹೆಸರಿನಲ್ಲಿ ನಿವೇಶನ ಪತ್ರ.

12.ಚರ್ಚ್ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ. (ಸದಸ್ಯರ ಭಾವಚಿತ್ರ, ಆಧಾರ್ ಸಂಖ್ಯೆ/ವೋಟರ್ ಐಡಿಯೊಂದಿಗೆ ಪೂರ್ಣವಿವರ ಸಲ್ಲಿಸುವುದು)

13.ಆಡಳಿತ ಮಂಡಳಿಯ ಸಭಾ ನಡವಳಿಕೆಗಳು

14.ಕಟ್ಟಡ ನಿರ್ಮಾಣವಾದ ವರ್ಷದ/ಅವಧಿಯ ಬಗ್ಗೆ ಮಾಹಿತಿ.

15.ಜನಸಂಖ್ಯಾ ವಿವರ

16.ಸಂಸ್ಥೆಯವರು ಇದೇ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿರುವುದಿಲ್ಲ ಎಂದು ಮುಚ್ಚಳಿಕೆ ಪ್ರಮಾಣ ಪತ್ರ ನೀಡುವುದು.

 

 

ಸ್ಮಶಾನ ಅಭಿವೃದ್ಧಿ ಯೋಜನೆ:-

ಈ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನಗಳಿಗೆ ಆವರಣ ಗೋಡೆ ನಿರ್ಮಾಣ ಮತ್ತು ಈ ಸ್ಮಶಾನಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಸಹಾಯಧನ ನೀಡಲಾಗುವುದು.

ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

1.ನಿಗದಿತ ನಮೂನೆಯಲ್ಲಿ ಅರ್ಜಿ

2.ಚರ್ಚ್/ಸಂಸ್ಥೆ ನೊಂದಣಿ ಪ್ರಮಾಣ ಪತ್ರ (ಭಾರತಿಯ ನ್ಯಾಸ ಅಧಿನಿಯಮ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಣಿ ಮಾಡಿಸಿರಬೇಕು/ಡಯಾಸಿಸ್‍ನ ನೊಂದಣಿ ಪತ್ರ)

3.ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ಸಂಬಂಧಪಟ್ಟ ಬಿಷಪ್ /ಡಿ,ಎಸ್ ಇವರಿಂದ ಶಿಫಾರಸ್ಸು ಪತ್ರ

4.ಸಂಸ್ಥೆಯ ಬೈಲಾ ಪ್ರತಿ (ಧೃಡೀಕರಿಸಿ ಸಲ್ಲಿಸುವುದು)

5.ನಕ್ಷೆ (ಮೂಲ ಪ್ರತಿ) ಕಾರ್ಯಪಾಲಕ ಅಭಿಯಂತರವರಿಂದ ದೃಢೀಕತವಾಗಿರಬೇಕು. (ಸ್ಥಳಿಯ, ನಗರ ಸಭೆ, ಪುರಸಭೆ, ಪಂಚಾಯ್ತಿತಿಗಳಿಂದ ಅನುಮೋದನೆ ಆಗಿರಬೇಕು)

6.ಕಾಮಗಾರಿಯ ಅಂದಾಜು ಪಟ್ಟಿ  (ಮೂಲ ಪ್ರತಿ) ಕಾರ್ಯಪಾಲಕ ಅಭಿಯಂತರವರಿಂದ ದೃಢೀಕತವಾಗಿರಬೇಕು

7.ಕಳೆದ ಮೂರು ವರ್ಷದ ಆಡಿಟ್ ರಿಪೋರ್ಟ್ (ಚಾರ್ಟೆಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು)

8.ಅನುದಾನ ಪಡೆಯುವ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರ (ರೂ 100 ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸುವಾಗ ಅಧ್ಯಕ್ಷರು/ಚರ್ಚ್ ಫಾದರ್‍ರವರ ಹೆಸರು ಮತ್ತು ವಿಳಾಸವನ್ನು ನಮೂದಿಸಿ ನೋಟರಿ ಮಾಡತಕ್ಕದ್ದು)

9.ಕಾಮಗಾರಿಯ ಅಂದಾಜು ವೆಚ್ಚದ ಶೇ 50 ರಷ್ಟು ಸಂಸ್ಥೆಯಿಂದ ಭರಿಸುವ ಬಗ್ಗೆ ದೃಢೀಕರಣ ಪತ್ರ (ರೂ 100 ಛಾಪಾ ಕಾಗದದಲ್ಲಿ)

10.ಕಟ್ಟಡವನ್ನು ನಿರ್ಮಿಸಲು ಅಧಿಕೃತ ಪರವಾನಿಗೆ.

11.ಚರ್ಚ್/ಸಂಸ್ಥೆ ಹೆಸರಿನಲ್ಲಿ ಸ್ಮಶಾನದ ನಿವೇಶನ ಪತ್ರ.

12.ಚರ್ಚ್/ಸಂಸ್ಥೆ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ. (ಸದಸ್ಯರ ಭಾವಚಿತ್ರ, ಆಧಾರ್ ಸಂಖ್ಯೆ/ವೋಟರ್ ಐಡಿಯೊಂದಿಗೆ ಪೂರ್ಣವಿವರ ಸಲ್ಲಿಸುವುದು)

13.ಆಡಳಿತ ಮಂಡಳಿಯ ಸಭಾ ನಡವಳಿಕೆಗಳು

14.ಸ್ಮಶಾನ ನಿರ್ಮಾಣವಾದ ವರ್ಷದ/ಅವಧಿಯ ಬಗ್ಗೆ ಮಾಹಿತಿ.

17.ಜನಸಂಖ್ಯಾ ವಿವರ

18.ಸಂಸ್ಥೆಯವರು ಇದೇ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿರುವುದಿಲ್ಲ ಎಂದು ಮುಚ್ಚಳಿಕೆ ಪ್ರಮಾಣ ಪತ್ರ ನೀಡುವುದು

 

ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಅನುದಾನ

 

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲೂಡಿ 320 ಎಂಡಿಎಸ್ 2011, ದಿ: 16-01-2012ರ ಅನ್ವಯ ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಅನಾಧಶ್ರಮ ಮತ್ತು ವೃಧಾಶ್ರಮ ನಡೆಸುತಿರುವ ಕ್ರೈಸ್ತ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಾದೆ.

ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು:

  1. ಅರ್ಜಿ
  2. ನೊಂದಣಿ ಪ್ರಮಾಣ ಪತ್ರ (ಕನಿಷ್ಠ 2 ವರ್ಷ ಚಾಲ್ತಿಯಲ್ಲಿರಬೇಕು)
  3. ಬೈಲಾ of the Association.
  4. ಆಡಿಟ್ ವರದಿ
  5. ವ್ರಧ್ದರ/ಅನಾಥರ ಪ್ರವೇಶ ಮತ್ತು ಭಾವಾ ಚಿತ್ರದೊಂದಿಗೆ ಪಟ್ಟಿ
  6. ಕಟ್ಟಡದ ಬಾಡಿಗೆ ಕರಾರು ಪತ್ರ
  7. ಖಾತಾ ಪತ್ರ (25 ಮಂದಿಗೆ 2500 ಅಡಿಗಳಷ್ಟು ಕಟ್ಟಡವಿರಬೇಕು)
  8. Dimension and accommodation available in the building with photos.
  9. ಸಂಸ್ಥೆಯು ಫಲಾನುಭವಿಗಳಿಂದ ಯಾವುದೇ ದೇಣಿಗೆ, ವಂತಿಕೆಗಳನ್ನು ಪಡೆಯುವುದಿಲ್ಲವೆಂದು ಮುಚ್ಚಳಿಕೆ ಪತ್ರ.
  10. ಸರ್ಕಾರಿ ಆದೇಶದ ಅನ್ವಯ ಮುಚ್ಚಳಿಕೆ ಪತ್ರಗಳು.
  11. ಸಂಸ್ಥೆಯ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಧೃಢೀಕೃತ ಪ್ರತಿ.
  12. ಚುನಾಯಿತಗೊಂಡ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಯ ಪಟ್ಟಿ

 

 

Last Updated: 06-07-2021 01:27 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : MINORITY WELFARE DEPARTMENT CHIKKAMAGALORE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080