ಅಭಿಪ್ರಾಯ / ಸಲಹೆಗಳು

ಕ್ರಿಶ್ಚಿಯನ್ ಸಮುದಾಯ ಭವನ

ಕ್ರೈಸ್ತರ ಅಭಿವೃದ್ದಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಿಶ್ಚಿಯನ್ ಜನಾಂಗದವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಉತ್ತೇಜನ ನೀಡಲು ಸದರಿ ಸಮುದಾಯಗಳಿಗೆ ಸಂಘ ಸಂಸ್ಥೆಗಳು /ಟ್ರಸ್ಟ್‍ಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುದಾನದ ಗರಿಷ್ಟ ಮಿತಿಯನ್ನು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ರೂ.01.00 ಕೋಟಿ ಮತ್ತು ಇತರೆ ಸ್ಥಳಗಳಲ್ಲಿ ರೂ.50.00 ಲಕ್ಷಗಳಿಗೆ ಮೀರದಂತೆ ಅನುದಾನ ಮಂಜೂರು ಮಾಡಲಾಗುವುದು.

 

ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

  1. ನಿಗಧಿತ ನಮೂನೆಯಲ್ಲಿ ಅರ್ಜಿ
  2. ನೊಂದಾಯಿತ ಬೈಲಾ
  3. ನೊಂದಾಯಿತ ಅಲ್ಪಸಂಖ್ಯಾತರ ಸರ್ಕಾರಿ ಸ್ವಾಮ್ಯದ ಬೋರ್ಡು ಮತ್ತು ಕಾಪೋರೇಷನ್‍ಗಳು/ ಖಾಸಗಿ ಸಂಘ, ಸ್ವಯಂ ಸೇವಾ ಸಂಸ್ಥೆಗಳು/ಟ್ರಸ್ಟ್‍ಗಳು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ಅಥವಾ ಟ್ರಸ್ಟ್ ಕಾಯ್ದೆಯನ್ವಯ ಅಥವ ಇತರೆ ಸಂಬಂಧಪಟ್ಟ ಕಾಯ್ದೆಯಡಿಯಲ್ಲಿ ನೊಂದಣಿಯಾಗಿ 3 ವರ್ಷಗಳಾಗಿರಬೇಕು.(ದೃಢೀಕರಿಸಿ ಸಲ್ಲಿಸುವುದು)
  4. ವರ್ಷಗಳ ಆಡಿಟ್ ವರದಿಗಳನ್ನು ಚಾರ್ಟೆಡ್ ಅಕೌಂಟೆಂಟ್‍ರವರಿಂದ ಆಡಿಟ್ ವರದಿ
  5. ಆಡಳಿತ ಮಂಡಳಿಯ ಸದಸ್ಯರ ಪಟ್ಟಿ (ನೊಂದಣಿಯಾಗಿರಬೇಕು) (ಸದಸ್ಯರ ಭಾವಚಿತ್ರ, ಆಧಾರ್ ಸಂಖ್ಯೆ/ವೋಟರ್ ಐಡಿಯೊಂದಿಗೆ ಪೂರ್ಣವಿವರ ಸಲ್ಲಿಸುವುದು)
  6. ಸಂಸ್ಥೆಯ ಹೆಸರಿನಲ್ಲಿ ನಿವೇಶನದ ದಾಖಲಾತಿಗಳು.
  7. ನಿವೇಶನವು ಭೂ ಪರಿವರ್ತನೆಯಾಗಿದ್ದಲ್ಲಿ ನಿವೇಶನವು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿತವಾಗಿರುವ ಬಗ್ಗೆ ದಾಖಲಾತಿ
  8. ನಿವೇಶನಕ್ಕೆ ಸಂಬಂಧಿಸಿದ ಋಣಭಾರ ಪ್ರಮಾಣ ಪತ್ರ.
  9. ಜಿಲ್ಲಾ ಕೇಂಧ್ರಗಳಲ್ಲಿ 500 ಜನರು ಒಟ್ಟಿಗೆ ಕೂರುವಂತಹ ಹಾಲ್ ಗಳನ್ನು ಹಾಗೂ ಇತರೆ ಸ್ಥಳಗಳಲ್ಲಿ 200 ಜನರು ಒಟ್ಟಿಗೆ ಕೂರುವಂತಹ ಹಾಲ್‍ಗಳನ್ನು ಹೊಂದಿರಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯ, ವಿದ್ಯುಚ್ಛಕ್ತಿ, ಪಾರ್ಕಿಂಗ್ ಸೌಲಭ್ಯ, ಅಗತ್ಯ ಕೊಠಡಿಗಳು, ಸ್ನಾನದ ಕೊಠಡಿಗಳು, ಲಾಕರ್ ಸೌಲಭ್ಯ, ಆದರ್ಶ ಮಾದರಿಯ ಅಡುಗೆ ಕೋಣೆ, ಊಟದ ಹಾಲ್ ಇತ್ಯಾದಿ ಈ ಎಲ್ಲಾ ಸೌಲಭ್ಯಗಳುಳ್ಳ ಕಟ್ಟಡದ ನಕ್ಷೆಯನ್ನು ತಯಾರಿಸಿ ಸ್ಥಳಿಯ, ನಗರಸಭೆ, ಪುರಸಭೆ, ಪಂಚಾಯತ್ ನಿಂದ ಅನುಮೋದನೆ ಆಗಿರಬೇಕು.
  10. ಕಟ್ಟಡದ ಪರವಾನಗಿಯನ್ನು ಪಡೆದಿರಬೇಕು.
  11. ಕಟ್ಟಡದ ಅಂದಾಜು ವೆಚ್ಚವನ್ನು ಸರ್ಕಾರಿ ಸಂಸ್ಥೆಗಳಲ್ಲಿನ/ಅನುಮೋದಿತ ಕಾರ್ಯಪಾಲಕ/ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಧೃಢೀಕರಿಸಿ ಸಲ್ಲಿಸುವುದು.
  12. ಲಗತ್ತಿಸಿರುವ ನಮೂನೆಯಲ್ಲಿ ರೂ.100/- ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ. (ರೂ.100 ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸುವಾಗ ಅಧ್ಯಕ್ಷರು/ಚರ್ಚ್ ಫಾದರ್‍ರವರ ಹೆಸರು ಮತ್ತು ವಿಳಾಸವನ್ನು ನಮೂದಿಸಿ ನೋಟರಿ ಮಾಡತಕ್ಕದ್ದು)
  13. ಜನಸಂಖ್ಯೆ ವಿವರ.
  14. ಸಂಸ್ಥೆಯವರು ಇದೇ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿರುವುದಿಲ್ಲ ಎಂದು ಮುಚ್ಚಳಿಕೆ ಪ್ರಮಾಣ ಪತ್ರ ನೀಡುವುದು

 

 

ಇತ್ತೀಚಿನ ನವೀಕರಣ​ : 04-08-2021 04:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080