ಅಭಿಪ್ರಾಯ / ಸಲಹೆಗಳು

ಕ್ರಿಶ್ಚಿಯನ್

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ

              ರಾಜ್ಯದಲ್ಲಿನ ಕ್ರಿಶ್ಚಿಯನ್ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸಮುದಾಯ ಭವನಗಳ ನಿರ್ಮಾಣ, ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಸಹಾಯಧನ ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ಮೂಲ ಸೌಕರ್ಯಗಳಿಗೆ ಅನುದಾನ, ಕೌಶಲ್ಯ ತರಬೇತಿ, ಸಣ್ಣ ಪ್ರಮಾಣದ ಸಾಲ ಯೋಜನೆಗಳು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರೋತ್ಸಾಹಧನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

  • ಸೌಲಭ್ಯಗಳು:

  1. ಚರ್ಚ ನವೀಕರಣ ಮತ್ತು ದುರಸ್ತಿಗಾಗಿ ಸಹಾಯಧನ ನೀಡಲಾಗುವುದು.

  2. ಸಮುದಾಯ ಭವನ ನಿರ್ಮಾಣಕ್ಕೆ ಸಹಾಯಧನ

  3. ಅನಾಥಾಶ್ರಮ/ವೃದ್ಧಾಶ್ರಮಕ್ಕೆ ಸಹಾಯಧನ

  4. ಕೌಶಲ್ಯ ಅಭಿವೃದ್ಧಿ ಯೋಜನೆ.

  5. ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಉತ್ತೇಜನ.

  6. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.

  7. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.

 

  • ಕರ್ನಾಟಕದಲ್ಲಿ ಚರ್ಚಗಳ ದುರಸ್ತಿ ಮತ್ತು ಜೀಣ್ಣೋದ್ಧಾರಕ್ಕಾಗಿ ಸಹಾಯಾನುದಾನ :-

ಕರ್ನಾಟಕ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ಚರ್ಚಗಳ ದುರಸ್ತಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಬಿಡುಗಡೆ ಮಾಡಲು ಪ್ರತ್ಯೇಕ ಸಹಾಯಾನುದಾನ ನಿಯಮಗಳನ್ನು ರಚಿಸುವುದು ಅಗತ್ಯ ಮತ್ತು ಅಪೇಕ್ಷಣೀಯವಗಿದೆ ಎಂದು ಕಂಡುಬಂದಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯವನ್ನು ಸಮಾಲೋಚಿಸಿ ತರುವಾಯ ಈ ಸಂಬಂಧದಲ್ಲಿ ಸಹಾಯಾನುದಾನ ನಿಯಮಗಳನ್ನು ಅಂತಿಮಗೊಳಿಸಿದೆ.

 

  • ಅನುದಾನದ ಸಾಮಾನ್ಯ ಷರತ್ತುಗಳು :

  1. ಯಾವ ಸಂಸ್ಥೆಯ ಪರವಾಗಿ ಸಹಾಯಾನುದಾನವನ್ನು ಕೋರಲಾಗಿದೆಯೋ ಅಂಥ ಪ್ರತಿಯೊಂದು ಸಂಸ್ಥೆಯು ವ್ಯವಸ್ಥಾಪಕ ಸಮಿತಿಯ ನಿಯಂತ್ರಣದಲ್ಲಿರತಕ್ಕದ್ದು ಮತ್ತು ವ್ಯವಸ್ಥಾಪಕ ಸಮಿತಿಯು ಸಂಸ್ಥೆಯ ನಿರ್ವಹಣೆಗೆ ಹಾಗೂ ಕಾಲಕಾಲಕ್ಕೆ ನಿಯಮಿಸಬಹುದಾದಂಥ ಸಹಾಯುದಾನದ ಎಲ್ಲ ಷರತ್ತುಗಳನ್ನು ಯುಕ್ತವಾಗಿ ಪೂರೈಸುವ ಜವಾಬ್ದಾರಿ ಹೊಂದಿರತಕ್ಕದ್ದು.

  2. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: MWD 351 MDS 2014, ದಿನಾಂಕ: 25-02-2015 ಆದೇಶದಲ್ಲಿ ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಅನುದಾನವನ್ನು ಚರ್ಚುಗಳ ಕಟ್ಟಡ ನಿರ್ಮಾಣದ ವರ್ಷಗಳಿಗೆ ಅನುಸಾರವಾಗಿ ಕೆಳಕಂಡಂತೆ ಬಿಡುಗಡೆ ಮಾಡಲಾಗುವುದು.

 

  • ಕ್ರಿಶ್ಚಿಯನ್ ಸಮುದಾಯದ ಸ್ಮಶಾನಗಳಿಗೆ ಆವರಣಗೋಡೆ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹಾಯಾನುಧನ :

  1. ಸರ್ಕಾರಿ ಆದೇಶ ಸಂಖ್ಯೆ: MWD 209 MDS 2017, ದಿನಾಂಕ: 03-06-2017ರ ನಿರ್ಮಿಸಲು ಹಾಗೂ ಈ ಸ್ಮಶಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಹಾಯಾನುದಾನ ನೀಡಲು ಮಂಜೂರಾತಿ ನೀಡಿ ಆದೇಶಿಸಿದೆ.

  2. ಕ್ರಿಶ್ಚಿಯನ್ ಸಮುದಾಯ ಸ್ಮಶಾನಗಳಿಗೆ ಆವರಣಗೋಡೆ ನಿರ್ಮಾಣ ಮತ್ತು ಈ ಸ್ಮಶಾನಗಳಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುದೀಕರಣ, ಶುದ್ಧ ಕುಡಿಯುವ ನೀರಿನ ಹಾಗೂ ಕೊಳವೆ ಬಾವಿ ಸೌಕರ್ಯ, ಶವ ಇಡುವ ಕಟ್ಟಡ ರಸ್ತೆ, ಇತ್ಯಾದಿಗಳಿಗೆ ಅಂದಾಜು ವೆಚ್ಚದ ಶೇ 90% ರಷ್ಟು ಅಥವಾ ಗರಿಷ್ಠ ರೂ. 25.00 ಲಕ್ಷ ಯಾವುದು ಕಡಿಮೆಯೋ ಅದರಂತೆ ಕ್ರಿಶ್ಚಿಯನ್ ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಲಾಗುವುದು.

  3. ಕ್ರಿಶ್ಚಿಯನ್ ಸಮುದಾಯದ ಸ್ಮಶಾನಗಳಿಗೆ ಆವರಣ ಗೋಡೆ ನಿರ್ಮಾಣ ಮತ್ತು ಈ ಸ್ಮಶಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಸಂಬಂಧಪಟ್ಟ ಮುಖ್ಯಸ್ಥರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರಿಗೆ ಮಾರ್ಗಸೂಚಿಗಳನ್ವಯ ನಿಗದಿತ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.

ಇತ್ತೀಚಿನ ನವೀಕರಣ​ : 09-08-2021 05:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಧಿಕಾರಿಗಳ ಅಲಸ್ಪಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080