ಅಭಿಪ್ರಾಯ / ಸಲಹೆಗಳು

ಜೈನ್

ಜೈನ್ ಸಮುದಾಯದ ಅಭಿವೃದ್ಧಿ

        ರಾಜ್ಯದಲ್ಲಿನ ಜೈನ್ ಅಲ್ಪಸಂಖ್ಯಾತರ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಲ್ಲಿ ಜೈನ್ ದೇವಾಲಯ (ಬಸದಿಗಳ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಕೈಗೊಳ್ಳುವುದು ಮೂಲಕ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆಗಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಕಾಪಾಡುವುದು ಅಗತ್ಯವೆಂದು ಕಂಡು ಬಂದಿದೆ ಮತ್ತು ಈ ಉದ್ದೇಶಕ್ಕಾಗಿ ಅರ್ಹ ಜೈನ್ ದೇವಾಲಯ (ಬಸದಿ)ಗಳಿಗೆ ಸಹಾಯಾನುದಾನವನ್ನು ನೀಡಲು ರಾಜ್ಯದ ಆಯವ್ಯಯದಲ್ಲಿ ಅನುದಾನ ನಿಗಧಿಪಡಿಸಲಾಗಿದೆ. ಸದರಿ ಕಾರ್ಯಕ್ರಮದಡಿ ಇಚ್ಛೆಯುಳ್ಳ ಜೈನ್ ದೇವಾಲಯ (ಬಸದಿ)ಗಳ ವ್ಯವಸ್ಥಾಪನ/ ಜೀರ್ಣೋದ್ಧಾರ ಸಮಿತಿಯವರು ಅನುದಾನ ಪಡೆಯಲು ಮುಂದೆ ಬಂದಲ್ಲಿ ಅಂಥಹ ದೇವಾಲಯ/ ಬಸದಿಗಳಗೆ ಅನುದಾನ ಬಿಡುಗಡೆ ಮಾಡಲು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

ಅರ್ಹತೆಗಳು:

 • ನಿಗದಿತ ನಮೂನೆಯಲ್ಲಿ ಅರ್ಜಿ (ನಮೂನೆ-1).
 • ದೇವಾಲಯ/ ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ (ಭಾರತೀಯ ನ್ಯಾಸ ಅಧಿನಿಯಮ) ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಾವಣೆಯಾಗಿರಬೇಕು ಅಥವಾ ಸಂಬಂಧಪಟ್ಟ ತಾಲ್ಲೂಕಿನ ತಹಸಿಲ್ದಾರರಿಂದ ದೇವಾಲಯ/ ಬಸದಿ ಇರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. (ನಮೂನೆ-2).
 • ಒಂದು ವರ್ಷದ ಆಡಿಟ್ ರಿಪೋರ್ಟ (ಚಾಟ್ಟೇಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು) ವಾರ್ಷಿಕ ಲೆಕ್ಕ ಪತ್ರ ವರದಿ.
 • ಅಂದಾಜು ಪಟ್ಟಿ (ದೇವಸ್ಥಾನದ ವ್ಯಾಪ್ತಿಗೆ ಬರುವ ಸ್ಥಳೀಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು).
 • ದೇವಾಲಯ/ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.
 • ದೇವಾಲಯ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ.
 • ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆರವರ ಸ್ಥಳ ತನಿಖಾ ವರದಿ. (ನಮೂನೆ-3)
 • ದೇವಾಲಯದ ಛಾಯಾ ಚಿತ್ರಗಳನ್ನು ಹಿಂಬದಿಯಲ್ಲಿ ಜಿಲ್ಲಾ ಅಧಿಕಾರಿಗಳು ದೃಢೀಕರಿಸಿರಬೇಕು.
 • ಮುಚ್ಚಳಿಕೆ ಪತ್ರ.
 • ಈ ಯೋಜನೆಯಡಿ ಅನುದಾನ ಪಡೆಯುವ ದೇವಾಲಯ/ಬಸದಿ ಮುಜರಾಯಿ ಇಲಾಖೆಯಿಂದ ಇದೇ ಉದ್ದೇಶಕ್ಕೆ ಅನುದಾನ ಪಡೆಲಾಗಿದೆಯೇ/ಇಲ್ಲವೇ ಎಂಬ ಬಗ್ಗೆ ಸ್ಥಳೀಯ ತಹಸಿಲ್ದಾರ ಕಚೇರಿಯಿಂದ ದೃಢೀಕರಣ ಪಡೆದು ಸಲ್ಲಿಸುವುದು.

ಅನುದಾನದ ವಿವರ:

ಅನುದಾನದ ಲಭ್ಯತೆಯನ್ನಾಧಾರಿಸಿ ಪ್ರತಿ ಜೈನ ದೇವಾಲಯ (ಬಸದಿ)ಗೆ ಅಂದಾಜು ವೆಚ್ಚದ ಶೇ. 50% ರಷ್ಟ ಅಥವಾ ಗರಿಷ್ಠ ರೂ. 10.00 ಲಕ್ಷ ಯಾವುದು ಕಡಿಮೆಯೂ ಅನುದಾನ.

ಅರ್ಜಿ ಸಲ್ಲಿಸುವ ವಿಧಾನ :

 • ಜೈನ ದೇವಾಲಯ (ಬಸದಿ) ಮುಖ್ಯಸ್ಥರು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರಿಗೆ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
 • ಜಿಲ್ಲಾ ಅಧಿಕಾರಿಗಳು, ಸದರಿ ದೇವಾಲಯದ ಸ್ಥಳ ತನಿಖೆ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿ, ಸ್ಪಷ್ಠ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು.
 • ನಿರ್ದೇಶನಾಲಯದಿಂದ ಪ್ರಸ್ತಾವನೆಯ್ನು ಪರಿಶೀಲಿಸಿ, ಜೈನ್ ದೇವಾಲಯ (ಬಸದಿ) ಗಳಿಗೆ ಸಹಾಯಾನುದಾನ ಕಾರ್ಯಕ್ರಮದಡಿ ಸೂಕ್ತ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಅನುದಾನ ಬಿಡುಗಡೆಗಾಗಿ ಕಡತವನ್ನು ಸರ್ಕಾರಕ್ಕೆ ಸಲ್ಲಿಸುವುದು.

ಇತ್ತೀಚಿನ ನವೀಕರಣ​ : 06-08-2021 03:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080