ಅಭಿಪ್ರಾಯ / ಸಲಹೆಗಳು

ಮುಸ್ಲಿಂ

ಶಾದಿಮಹಲ್/ಸಮುದಾಯ ಭವನಗಳ ನಿರ್ಮಾಣ

 

     ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತರ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಶಾದಿಮಹಲ್/ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಮುಂದೆ ಬಂದಲ್ಲಿ ಪ್ರತಿ ಶಾದಿಮಹಲ್ ನಿರ್ಮಾಣಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಗರಿಷ್ಠ ರೂ. 2 ಕೋಟಿಗೆ ಮೀರದಂತೆ ಮತ್ತು ಇತರೆ ಸ್ಥಳಗಳಲ್ಲಿ ಗರಿಷ್ಠ ರೂ. 1 ಕೋಟಿಗೆ ಮೀರದಂತೆ ಅನುದಾನವನ್ನು ಮಂಜೂರು ಮಾಡಲಾಗುವುದು.

 

ಷರತ್ತುಗಳು

 1. ಈ ಆದೇಶ ಕೇವಲ ಮುಸ್ಲಿಂ ಸಮುದಾಯದ ಶಾದಿಮಹಲ್/ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನ್ವಯಿಸುವುದು. ಉಳಿದ ಸಮುದಾಯದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅದೇಶ ಸಂಖ್ಯೆ : MWD357 MDS 2013, ದಿನಾಂಕ: 06-09-2013 ಮತ್ತು 25-10-2013 ಆದೇಶವು ಮುಂದುವರೆಯುವುದು ಹಾಗೂ ಸಮುದಾಯಭವನಗಳನ್ನು ಜನಸಂಖ್ಯಾ ಅನುಪಾತದನ್ವಯ ಮಂಜೂರು ಮಾಡಲಾಗುವುದು.
 2. ಸಮುದಾಯ ಭವನ ಕಟ್ಟಡ ನಿರ್ಮಣಕ್ಕೆ ಅರ್ಜಿ ಸಲ್ಲಿಸುವ ಸಂಸ್ಥೆಯು ವಕ್ಫ್ ಅಥವಾ ಅರೆ ಸರ್ಕಾರಿ ಸಂಸ್ಥೆಗಳಾಗಿರತಕ್ಕದ್ದು.
 3. ವಕ್ಫ್ ಸಂಸ್ಥೆ ಸಲ್ಲಿಸುವ ಅರ್ಜಿಯನ್ನು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪರಿಶೀಲಿಸಿ, ಸಮುದಾಯಭವನಗಳ ರಜಿಸ್ಟಾರ್ ನಿರ್ವಹಿಸಿ ಅದರಲ್ಲಿ ವಿವರ ಪಡೆದ ಮೊತ್ತ ದಿನಾಂಕ, ಇವುಗಳನ್ನು ಕ್ರಮಬದ್ಧವಾಗಿ ನಮೂದಿಸತಕ್ಕದ್ದು. ಇದನ್ನು ಜಿಲ್ಲಾ ಅಧಿಕಾರಿಯವರು ಆಗಿಂದಾಗೆ ಪರಿಶೀಲಿಸತಕ್ಕದ್ದು, ಸ್ಥಳ ಪರಿಶೀಲನೆ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹವಿದ್ದಲ್ಲಿ, ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಸೂಕ್ತ ಶಿಫಾರಸ್ಸಿನೊಂದಿಗೆ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ ಇವರಿಗೆ ಕಳುಹಿಸತಕ್ಕದ್ದು.
 4. ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ ಇವರ ಪ್ರಸ್ತಾವನೆಯನ್ನು ಮಾರ್ಗಸೂಚಿಗಳಂತೆ ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸತಕ್ಕದ್ದು.
 5. ಸಂಸ್ಥೆಯವರು ತಮ್ಮ ನಿವೇಶನದ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹಾಗೂ ಜಿಲ್ಲಾ ಅಧಿಕಾರಿಯವರು ಕೋರುವ ಎಲ್ಲಾ ಮಾಹಿತಿಗಳನ್ನು ಸಲ್ಲಿಸುವುದು.
 6. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಸರ್ಕಾರಿ ಏಜನ್ಸಿಯನ್ನು ಗುರುತಿಸುವುದು. ಸದರಿ ಏಜನ್ಸಿಯಿಂದ ಕಟ್ಟಡದ ಅಂದಾಜು ಪಟ್ಟಿ, ಕಟ್ಟಡ ನೀಲಿ ನಕಾಶೆಯನ್ನು ಪಡೆಯುವುದು ಕೆಟಿಟಿಪಿ ಪಾರದರ್ಶಕ ಕಾಯ್ದೆಯಂತೆ ಕಾಮಗಾರಿ ಅನುಷ್ಠಾನಗೊಳಿಸುವುದು.
 7. ಸದರಿ ಅಂದಾಜು ಪಟ್ಟಿಗೆ Delegation of Power ರಂತೆ ನಿರ್ದೇಶನಾಲಯದಿಂದ/ಸರ್ಕಾರದಿoದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯುವುದು.
 8. ಅನುದಾನವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವುದು. ಜಿಲ್ಲಾಧಿಕಾರಿಗಳು ನಿಗಧಿಪಡಿಸಿರುವ ಏಜನ್ಸಿಯಿಂದ ಕಟ್ಟಡ ಕಾಮಗಾರಿಯನ್ನು ಕೆಟಿಟಿಪಿ ಪಾರದರ್ಶಕ ಕಾಯ್ದೆಯಂತೆ 18 ತಿಂಗಳ ಒಳಗಾಗಿ ಪೂರ್ಣಗೊಳಿಸಿ ಸಂಬಂಧಪಟ್ಟ ಸಂಸ್ಥೆಗೆ ಹಸ್ತಾಂತರಿಸುವುದು.
 9. ಸದರಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಬಧಪಟ್ಟ ಸಂಸ್ಥೆಗೆ ಹಸ್ತಾಂತರಿಸಿದ ನಂತರ ಸದರಿ ಸಂಸ್ಥೆಯು ಯಾವುದೇ ಹೆಚ್ಚುವರಿ ಅನುದಾನವನ್ನು ಅಪೇಕ್ಷಿಸುವಂತಿಲ್ಲ.
 10. ನಿರ್ದೇಶಕರು, ಸದರಿ ವಕ್ಫ್ ಮಂಡಳಿ/ಅರೆ ಸರ್ಕಾರಿ ಸಂಸ್ಥೆಯವರು ಸಮುದಾಯಭವನ ಕಟ್ಟಡ ನಿರ್ಮಾಣಕ್ಕಾಗಿ ಒಂದು ಕಮಿಟಿ/ಸಮಿತಿಯನ್ನು ರಚಿಸಿ ಅದರ ನಿರ್ವಹಣೆಯನ್ನು ನಡೆಸುವುದು. ಸದರಿ ಸಮಿತಿಯಲ್ಲಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆರವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸುವುದು.
 11. ಸರ್ಕಾರದ ಹಂತದಲ್ಲಿ ಮಂಜೂರಾದ ಒಟ್ಟು ಅನುದಾನವನ್ನು ನಿರ್ದೇಶನಾಲಯದಿಂದ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.
 12. ಸಮುದಾಯಭವನಗಳನ್ನು ಇತರೆ ಅಲ್ಪಸಂಖ್ಯಾತರ ಇಲಾಖೆಯ ಸರ್ಕಾರಿ ಕಾರ್ಯಕ್ರಮ/ಸಮಾರಂಭಗಳಿಗೆ ಉಚಿತವಾಗಿ ನೀಡತಕ್ಕದ್ದು.
 13. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಇದನ್ನು ಒಳಸಿಕೊಂಡಲ್ಲಿ, ಆಯಾ ವಕ್ಫ್ ಸಂಸ್ಥೆ/ಅರೆ ಸರ್ಕಾರಿ ಸಂಸ್ಥೆಗಳ ಮೇಲೆ ನಿಯಮಾನುಸಾರ ಕ್ರಮ ಜರುಗಿಸತಕ್ಕದ್ದು ಹಾಗೂ ಇಂತಹ ಸಂದರ್ಭಗಳಲ್ಲಿ ಈ ಸಮುದಾಯಭವನ ಕಟ್ಟಡಗಳನ್ನು ಯಾವುದೇ ಷರತ್ತಿಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ತನ್ನ ವಶಕ್ಕೆ ತೆಗೆದುಕೊಳ್ಳತಕ್ಕದ್ದು. ಈ ಬಗ್ಗೆ ವಕ್ಫ್ ಸಂಸ್ಥೆ/ಅರೆ ಸರ್ಕಾರಿ ಸಂಸ್ಥೆಗಳಿಂದ ಪ್ರಮಾಣ ಪತ್ರ ಪಡೆಯತಕ್ಕದ್ದು.
 14. ಎಲ್ಲಾ ಜಿಲ್ಲೆ /ತಾಲ್ಲೂಕುಗಳಿಗೆ ಹಾಗೂ ಅಲ್ಪಸಂಖ್ಯಾತರ ಸಮುದಾಯದ ಜನಸಂಖ್ಯೆ ಹೆಚ್ಚಾಗಿರುವ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿದ್ದಲ್ಲಿ ಮಾತ್ರ ಪ್ರತಿನಿಧ್ಯ ಸಿಗುವಂತೆ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದು.
 15. ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮದಾಯಭವನಗಳನ್ನು ಮಂಜೂರು ಮಾಡಿದಲ್ಲಿ ಅಂತಹ ಪ್ರದೇಶಗಳನ್ನು ಹೊರತುಪಡಿಸಿ, ಸಮುದಾಯಭವನ ಇಲ್ಲದೇ ಇರುವ ಸ್ಥಳಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.
 16. ಪ್ರಸ್ತಾಪಿತ ಸಮುದಾಯಭವನದಿಂದ 2 ಕಿ.ಮೀ ದೂರದಲ್ಲಿ ಯಾವುದೇ ಸಮುದಾಯಭವನ ಕಟ್ಟಡವಿರಬಾರದು. ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಧೃಢಿಕೃತ ಪ್ರಮಾಣ ಪತ್ರವನ್ನು ಒದಗಿಸತಕ್ಕದ್ದು.
 17. ಕಡು ಬಡವರಿಗೆ ಕನಿಷ್ಠ ಮೊತ್ತ ಹಾಗೂ ಇತರೆಯವರಿಂದ ಪಡೆಯಬಹುದಾದ ಮೊತ್ತವನ್ನು ನಿಗದಿಪಡಿಸತಕ್ಕದ್ದು.
 18. ಸಮುದಾಯಭವನ ಮಂಜೂರಾದ ನಂತರ ಸಮುದಾಯಭವನದಿಂದ ಬರುವ ಆದಾಯವನ್ನು ಸಮಾಜದ ಬಡ ಕುಟುಂಬಗಳ ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ವಕ್ಫ್ ಸಂಸ್ಥೆಯ ಅಭಿವೃದ್ಧಿಗಾಗಿ ಉಪಯೋಗಿಸತಕ್ಕದ್ದು.
 19. ಸಾಮೂಹಿಕ ಮದುವೆಗಳಿಗೆ ಸಮುದಾಯಭವನ ಕಟ್ಟಡವನ್ನು ಉಚಿತವಾಗಿ ನೀಡತಕ್ಕದ್ದು.
 20. ಸಮುದಾಯಭವನ ಕಟ್ಟಡದ ಮುಂಭಾಗದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಿಂದ ನಿರ್ಮಿಸಲಾಗಿದೆ ಎಂಬ ಫಲಕವನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು.

 

ಒದಗಿಸಬೇಕಾದ ದಾಖಲಾತಿಗಳು

 1. ನಿಗದಿತ ನಮೂನೆಯಲ್ಲಿ ಅರ್ಜಿ.
 2. ನೊಂದಣಿ ಪ್ರಮಾಣ ಪತ್ರ.
 3. ಮೂರು ವರ್ಷಗಳ ಆಡಿಟ್ ವರದಿಗಳನ್ನು ಚಾರ್ಟೆಡ್ ಅಕೌಂಟಂಟ್ ರವರಿಂದ ಆಡಿಟ್ ವರದಿ.
 4. ಆಡಳಿತ ಮಂಡಳಿಯ ಸದಸ್ಯರ ಪಟ್ಟಿ (ನೊಂದಣಿಯಾಗಿರಬೇಕು)
 5. ಸಂಸ್ಥೆಯ ಹೆಸರಿನಲ್ಲಿ ನಿವೇಶನದ ದಾಖಲಾತಿಗಳು
 6. ನಿವೇಶನಕ್ಕೆ ಸಂಬಂಧಿಸಿದ ಋಣಭಾರ ಪ್ರಮಾಣ ಪತ್ರ
 7. ರೂ. 100/-ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ
 8. ಜಿಲ್ಲಾಧಿಕಾರಿಗಳ ಸ್ಪಷ್ಟ ಶಿಫಾರಸ್ಸು ಪತ್ರ
 9. ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರ ಸ್ಥಳ ತನಿಖಾ ವರದಿ.

ಇತ್ತೀಚಿನ ನವೀಕರಣ​ : 18-02-2022 05:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080