ಅಭಿಪ್ರಾಯ / ಸಲಹೆಗಳು

ವಿದ್ಯಾಸಿರಿ ಯೋಜನೆ

ವಿದ್ಯಾಸಿರಿ ಯೋಜನೆ 

ಈ ಯೋಜನೆಯು ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಈ ಯೋಜನೆಯು  ಹಾಸ್ಟೆಲ್ ಸೌಲಭ್ಯ ಸಿಗದೆ ಇರುವ ಮೆಟ್ರಕ್ ನಂತರದ (ಪಿ.ಯು.ಸಿ. ಯಿಂದ ಪಿ.ಹೆಚ್.ಡಿ ವರೆಗೆ) ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಷರತ್ತುಗಳು:

 • ಕರ್ನಾಟಕದ ನಿವಾಸಿಯಾಗಿರಬೇಕು.

 • ಕುಟುಂಬದ ವಾರ್ಷಿಕ ವರಮಾನ ರೂ. 2 ಲಕ್ಷಕಿಂತ ಕಡಿಮೆ ಇರಬೇಕು.

 • ಪ್ರವರ್ಗ-1 ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ. 2.50 ಲಕ್ಷಕ್ಕಿಂತ ಕಡಿಮೆ ಇರಬೇಕು.

 • ವಿದ್ಯಾರ್ಥಿಯು ಗ್ರಾಮೀಣ ಪ್ರದೇಶದವರಾಗಿದ್ದು ಅವರ ನಿಲಯದಿಂದ ಕಾಲೇಜು ಕಿ.ಮಿ ಕಿಂತ ಹೆಚ್ಚು ದೂರವಿರಬೇಕು.

 • ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ರೂ. 1500/- ಗಳಂತೆ 10 ತಿಂಗಳಿಗೆ ಗರಿಷ್ಠ ರೂ. 15,000/-ಗಳನ್ನು ಅವರ ವಿದ್ಯಾಭ್ಯಾಸದ ಅವಧಿಯಲ್ಲಿ ನೀಡಲಾಗುವುದು.

 • ಬಿ.ಬಿ.ಎಂ.ಪಿ. ಕಾರ್ಪೊರೇಷನ, ಟೌನ್, ಮುನ್ಸಿಪಲ್ ಹಾಗೂ ಪಟ್ಟಣ ಪ್ರದೇಶದಲ್ಲಿ ನಿವಾಸಿಯಾದ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ.

ಲಗತ್ತಿಸಬೇಕಾದ ದಾಖಲಾತಿಗಳು:

1) ಅರ್ಜಿ ನಮೂನೆ.

2) ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

3) ವಿದ್ಯಾರ್ಥಿಯ ಆಧಾರ್ ಕಾರ್ಡ್ (ಝರಾಕ್ಸ್ ಪ್ರತಿ)

4) ಎಸ್.ಎಸ್.ಎಲ್.ಸಿ. ಅಂಕ ಪಟ್ಟಿ (ಝರಾಕ್ಸ್ ಪ್ರತಿ)

5) ವಿದ್ಯಾರ್ಥಿಯ ಹಿಂದಿನ ವರ್ಷದ (SEM) ಅಂಕ ಪಟ್ಟಿ (ಝರಾಕ್ಸ್ ಪ್ರತಿ)

6) ಕಾಲೇಜಿಗೆ ಕಟ್ಟಿರುವ ಶುಲ್ಕದ ಝರಾಕ್ಸ್ ಪ್ರತಿ.

7) ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿ.

8) ಸ್ವಂತ ಸ್ಥಳದಿಂದ ಕಾಲೇಜಿಗೆ ಇರುವ ದೂರದ ಪ್ರಮಾಣ ಪತ್ರ.

9) ಪಡಿತರ ಚೀಟಿ/ಗುರುತಿನ ಚೀಟಿ ಝರಾಕ್ಸ್ ಪ್ರತಿ.

10) 2-ಭಾವಚಿತ್ರಗಳು.  (Photos-2).

 

 

ಇತ್ತೀಚಿನ ನವೀಕರಣ​ : 06-08-2021 04:23 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080