ಅಭಿಪ್ರಾಯ / ಸಲಹೆಗಳು

ಜಿಲ್ಲಾ ಕಛೇರಿಯ ಬಗ್ಗೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರಗಿ.

 

ಮತೀಯ ಅಲ್ಪಸಂಖ್ಯಾತರ ಜನಾಂಗವನ್ನು ಗುರ್ತಿಸಿ ಅವರ ಕ್ಷೇಮಾಭಿವೃದ್ದಿಗಾಗಿ ಪತ್ಯೆಕವಾದ “ಅಲ್ಪಸಂಖ್ಯಾತರ ಕಲ್ಯಾಣ” ಇಲಾಖೆಯನ್ನು ಹೊಂದಿದ್ದು, ರಾಜ್ಯ ಮಟ್ಟದಲ್ಲಿ ನಿರ್ದೇಶನಾಲಯವನ್ನು ಪ್ರಾರಂಭಿಸಲಾಗಿದೆ. ಸರ್ಕಾರವು ಹಮ್ಮಿಕೊಂಡಿರುವ ಕಲ್ಯಾಣ ಕಾರ್ಯಕ್ರಮಗಳು, ವಿದ್ಯಾರ್ಥಿ ನಿಲಯಗಳ ಮತ್ತು ವಸತಿ ಶಾಲೆಗಳ ನಿರ್ವಹಣೆ ಮತ್ತು ಪ್ರೋತ್ಸಾಹಧನ, ಕಾನೂನು ಪದವಿಧರಿಗೆ ಶಿಷ್ಯ ವೇತನ ಮಂಜೂರಾತಿ ಹಾಗೂ ಶಾದಿಮಹಲ್/ಸಮುದಾಯ ಭವನ ನಿರ್ಮಾಣಕ್ಕಾಗಿ ಸಹಾಯಧನ ಮಂಜೂರಾತಿ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಕಲಿಕಾ ಮತ್ತು ಬೋಧನಾ ಸಾಮಾಗ್ರಿಗಳ ಪೂರೈಕೆ, ಅಲ್ಪಸಂಖ್ಯಾತರ ಯುವಕ/ಯುವತಿಯವರಿಗೆ ಕೌಶಲ್ಯ ಅಭಿವೃದ್ದಿ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ತರಬೇತಿ ಹಾಗೂ ನಸಿಂಗ್ ತರಬೇತಿ ಮಂಜೂರು, ಮದರಸಾ ಆಧುನೀಕರಣ, ಔಪಚಾರಿಕ, ಗಣಕೀಕೃತ ಶಿಕ್ಷಣ ನೀಡುವುದು ಹಾಗೂ ವಿದ್ಯಾರ್ಥಿ ನಿಲಯಗಳ ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣ ಮಂತಾದ ಯೋಜನೆಗಳನ್ನು ನಿಗದಿತ ವೇಳೆಯಲ್ಲಿ ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

ಕಲಬುರಗಿ ಜಿಲ್ಲೆಯಲ್ಲಿ 2016-17 ನೇ ಸಾಲಿನಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಛೇರಿಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೆಕಗೊಂಡಿದ್ದು ಕಲಬುರಗಿಯಲ್ಲಿ ಜಿಲ್ಲಾ ಕಛೇರಿಯನ್ನು ಹೊಂದಿದೆ. ಈ ಕಛೇರಿಗೆ 01 ಜಿಲ್ಲಾ ಅಧಿಕಾರಿಗಳ ಹುದ್ದೆ, 01 ಲೆಕ್ಕ ಅಧಿಕ್ಷಕರು, 01 ಕಛೇರಿ ಅಧಿಕ್ಷಕರು, 01 ಪ್ರಥಮ ದರ್ಜೆ ಸಹಾಯಕರು, 02 ದ್ವಿತಿಯ ದರ್ಜೆ ಸಹಾಯಕರು, 01 ಡಾಟಾ ಎಂಟ್ರಿ ಆಪರೇಟರ್, 01 ಡಿ ಗ್ರೂಪ್, 01 ವಾಹನ ಚಾಲಕರು ಹುದ್ದೆಗಳು ಮಂಜೂರಾಗಿದ್ದು, ಡಾಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್, ವಾಹನ ಚಾಲಕರು ಹುದ್ದೆಗಳು ಹೊರತುಪಡಿಸಿ ಉಳಿದೆಲ್ಲಾ ಹುದ್ದೆಗಳು ಭರ್ತಿಯಾಗಿದೆ. ಡಾಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್, ವಾಹನ ಚಾಲಕರು ಹುದ್ದೆಗಳು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗಿದೆ.

ಸದರಿ ಜಿಲ್ಲಾ ಕಛೇರಿಗೆ ಶ್ರೀ ಜಾವೀದ್  ಕೆ  ಕರಂಗಿ ರವರು ಪ್ರಸ್ತುತ ಜಿಲ್ಲಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

SL. No

Name of District Officer

District

Phone No

E-Mail

Website

Address

1

Javid K Karangi

Kalaburagi

08472 - 247260

domgulbarga1@gmail.com

https://dom.karnataka.gov.in/kalaburagi/public

District Officer Minority Welfare Department, Mini Vidhana Soudha Back Side Station Road Kalburgi Kalburgi-585102


 

ಇತ್ತೀಚಿನ ನವೀಕರಣ​ : 08-12-2023 03:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರಗಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080