ಅಭಿಪ್ರಾಯ / ಸಲಹೆಗಳು

ಕ್ರೈಸ್ತರ ಅಭಿವೃದ್ದಿ ಯೋಜನೆ

ಕರ್ನಾಟಕ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ಚರ್ಚ್‍ಗಳ ದುರಸ್ತಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಬಿಡುಗಡೆ ಮಾಡಲು ಪ್ರತ್ಯೇಕ ಸಹಾಯಾನುದಾನ ನಿಯಮಗಳನ್ನು ರಚಿಸುವುದು ಅಗತ್ಯ ಮತ್ತು ಅಪೇಕ್ಷಣೀಯವಾಗಿದೆ ಎಂದು ಕಂಡುಬಂದಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯವನ್ನು ಸಮಾಲೋಚಿಸಿದ ತರುವಾಯ ಈ ಸಂಬಂಧದಲ್ಲಿ ಸಹಾಯಾನುದಾನ ನಿಯಮಗಳನ್ನು ಅಂತಿಮಗೊಳಿಸಿದೆ.

 

ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಚರ್ಚ ನವೀಕರಣ ಮತ್ತು ದುರಸ್ಥಿ ಹಾಗೂ ಸಮುದಾಯ ಭವನ ನಿರ್ಮಾಣ

ಸಮುದಾಯ ಭವನ ನಿರ್ಮಾಣ

ಅನಾಥಶ್ರಮ ಮತ್ತು ವೃಧ್ದಾಶ್ರಮಕ್ಕೆ ಅನುದಾನ

ಕೌಶಲ್ಯ ಅಭಿವೃಧ್ದಿ ಯೋಜನೆ

ಜಿ.ಎನ್.ಎಂ ಮತ್ತು ಬಿ.ಎಸ್.ಸಿ. ನಸಿರ್ಂಗ್ ತರಬೇತಿ

ಕ್ರಿಶ್ಚಿಯನ್ ವಿಧ್ಯಾರ್ಥಿಗಳಿಗೆ ಉತ್ತೇಜನ

 

ಸುತ್ತೋಲೆ

ಕ್ರೈಸ್ತರ ಅಭಿವೃದ್ದಿ ಯೇಜನೆಯ ವರ್ಷವಾರು ಮಾಹಿತಿ

ಕ್ರೈಸ್ತರ ಅಭಿವೃದ್ದಿ ಯೇಜನೆಯ ವರ್ಷವಾರು ಮಾಹಿತಿ 2016-17

ಕ್ರಿಶ್ಚಿಯನ್ ಅಭಿವೃಧ್ದಿಯ ಸಮಿತಿಯ ಸದಸ್ಯರು

ಏಡ್ಸ್ ಸೋಂಕಿತ ವ್ಯಕ್ತಿಗಳ ಅಶ್ರಯಾಧಾಮ ಮತ್ತು ಮಾನಸಿಕ ಹಾಗೂ ದೈಹಿಕ ವಿಕಲಚೇತನರ ಸರ್ಕಾರದ ಆದೇಶ

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಸುತ್ತೋಲೆ 2021-22

 

ಕ್ರಿಶ್ಚಿಯನ್ ಮತ್ತು ಜೈನ್ 2021-2022 ರ ಆದೇಶವನ್ನು ರದ್ದುಗೊಳಿಸುತ್ತಾರೆ

 

ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಚರ್ಚ ನವೀಕರಣ ಮತ್ತು ದುರಸ್ಥಿ ಹಾಗೂ ಸಮುದಾಯ ಭವನ ನಿರ್ಮಾಣ

ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಒWಆ 351 ಒಆS 2014 ದಿನಾಂಕ: 25.02.2015 ಆದೇಶದಲ್ಲಿ ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಅನುದಾನವನ್ನು ಚರ್ಚುಗಳ ಕಟ್ಟಡ ನಿರ್ಮಾಣದ ವರ್ಷಗಳಿಗನುಸಾರವಾಗಿ ಕೆಳಕಂಡಂತೆ ಬಿಡುಗಡೆ ಮಾಡಲಾಗುವುದು.

ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು.

1. ನಿಗಧಿತ ನಮೂನೆಯಲ್ಲಿ ಅರ್ಜಿ

2. ಚರ್ಚ್ ನೊಂದಣೆ ಪ್ರಮಾಣ ಪತ್ರ

3. ಆಡಿಟ್ ರಿಪೋರ್ಟ್ (ಚಾರ್ಟೆಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು)

4. ಚರ್ಚ್ ಹೆಸರಿನಲ್ಲಿ ನಿವೇಶನ ಪತ್ರ

5. ಚರ್ಚ್‍ನ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ

6. ಜಿಲ್ಲಾಧಿಕಾರಿಗಳ ಶಿಫಾರಸ್ಸು ಪತ್ರ

7. ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರ ಸ್ಥಳ ತನಿಖಾ ವರದಿ

8. ಚರ್ಚ್ ಛಾಯ ಚಿತ್ರ (ಹಿಂಬದಿಯಲ್ಲಿ ಜಿಲ್ಲಾ ಅಧಿಕಾರಿಗಳು ಧೃಢೀಕರಿಸಿರಬೇಕು)

9. ಕಟ್ಟಡದ ಅಂದಾಜು ಪಟ್ಟಿ

10. ಮುಚ್ಚಳಿಕೆ ಪತ್ರ

11.ಕಡತದ ಪರಿಶೀಲನೆಯ ಸಮಯದಲ್ಲಿ ಅಗತ್ಯವಿರುವ ಯಾವುದೇ ಇತರ ದಾಖಲೆ.

 

ಸರ್ಕಾರದ ಆದೇಶ

 

ಸಮುದಾಯ ಭವನ ನಿರ್ಮಾಣ

ಕ್ರೈಸ್ತರ ಅಭಿವೃದ್ದಿ ಯೇಜನೆಯಡಿ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಿಶ್ಚಿಯನ್ ಜನಾಂಗದವರು ಸಾಮಾಜಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಉತ್ತೇಜನ ನೀಡಲು ಸದರಿ ಸಮುದಾಯಗಳಿಗೆ ಸಂಘ ಸಂಸ್ಥೆಗಳು /ಟ್ರಸ್ಟ್‍ಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುದಾನದ ಗರಿಷ್ಟ ಮಿತಿಯನ್ನು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ರೂ. 1.00 ಕೋಟಿ ಮತ್ತು ಇತರೆ ಸ್ಥಳಗಳಲ್ಲಿ ರೂ. 50.00 ಲಕ್ಷಗಳಿಗೆ ಮೀರದಂತೆ ಅನುದಾನ ಮಂಜೂರು ಮಾಡಲಾಗುವುದು.

ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು.

1. ಸಂಘವು ನೋಂದಾಯಿತ ಸಂಘವಾಗಿರಬೇಕು (ನೋಂದಣಿ ಪ್ರಮಾಣಪತ್ರವನ್ನು ಉತ್ಪಾದಿಸಬೇಕು)

2. ಸಮುದಾಯ ಭವನವನ್ನು ನಿರ್ಮಿಸಬೇಕಾದ ಭೂಮಿ/ಸ್ಥಳದ ವಿವರಗಳು. (ದಾಖಲೆಗಳು) ಸಂಘದ ಹೆಸರಿನಲ್ಲಿರಬೇಕು.

3. ಸದರಿ ಸಮುದಾಯ ಭವನ/ಕಟ್ಟಡದ ನಿರ್ಮಾಣಕ್ಕಾಗಿ ಸಂಘವು ಸಕ್ಷಮ ಅಧಿಕಾರಿಗಳಿಂದ ಕಟ್ಟಡ ನಿರ್ಮಾಣ ಪರವಾನಗಿಯನ್ನು ಪಡೆದಿರಬೇಕು.

4. . ಅಸೋಸಿಯೇಷನ್ ​​ಶೆಲ್ ಬ್ಲೂಪ್ರಿಂಟ್ ಮತ್ತು ಮೂಲ ಅಂದಾಜು ಪ್ರತಿಗಳನ್ನು ಸಮರ್ಥ ಅಧಿಕಾರಿಗಳಿಂದ ದೃಢೀಕರಿಸುತ್ತದೆ.

5. ಈ ಹಣವನ್ನು ಮಂಜೂರು ಮಾಡಲು ಸಮಿತಿಯ ನಿರ್ಣಯದ ಪ್ರತಿ ಮತ್ತು ಇತರ ವಿವರಗಳು.

6. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರುಗಳ ಪಟ್ಟಿ ಮತ್ತು ವಿಳಾಸಗಳನ್ನು ಒದಗಿಸುವುದು.

7. ಸಂದರ್ಭಾನುಸಾರ ಸಮರ್ಥ ನಗರ ಪುರಸಭೆ, ಪಟ್ಟಣ ಪುರಸಭೆ/ಗ್ರಾಮ ಪಂಚಾಯತ್‌ನಿಂದ ದೃಢೀಕೃತ ಕಟ್ಟಡ ಯೋಜನೆ.

 

 

ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಅನುದಾನ

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲೂಡಿ 320 ಎಂಡಿಎಸ್ 2011, ದಿ: 16-01-2012ರ ಅನ್ವಯ ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಅನಾಧಶ್ರಮ ಮತ್ತು ವೃಧಾಶ್ರಮ ನಡೆಸುತಿರುವ ಕ್ರೈಸ್ತ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಾದೆ.

ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು:

1. ಅರ್ಜಿ

2. ನೊಂದಣಿ ಪ್ರಮಾಣ ಪತ್ರ (ಕನಿಷ್ಠ 2 ವರ್ಷ ಚಾಲ್ತಿಯಲ್ಲಿರಬೇಕು)

3. ಬೈಲಾ of the Association.

4. ಆಡಿಟ್ ವರದಿ

5. ವ್ರಧ್ದರ/ಅನಾಥರ ಪ್ರವೇಶ ಮತ್ತು ಭಾವಾ ಚಿತ್ರದೊಂದಿಗೆ ಪಟ್ಟಿ

6. ಕಟ್ಟಡದ ಬಾಡಿಗೆ ಕರಾರು ಪತ್ರ

7. ಖಾತಾ ಪತ್ರ (25 ಮಂದಿಗೆ 2500 ಅಡಿಗಳಷ್ಟು ಕಟ್ಟಡವಿರಬೇಕು)

8.ಫೋಟೋಗಳೊಂದಿಗೆ ಕಟ್ಟಡದಲ್ಲಿ ಆಯಾಮಗಳು ಮತ್ತು ವಸತಿ ಲಭ್ಯವಿದೆ.

9. ಸಂಸ್ಥೆಯು ಫಲಾನುಭವಿಗಳಿಂದ ಯಾವುದೇ ದೇಣಿಗೆ, ವಂತಿಕೆಗಳನ್ನು ಪಡೆಯುವುದಿಲ್ಲವೆಂದು ಮುಚ್ಚಳಿಕೆ ಪತ್ರ.

10. ಸರ್ಕಾರಿ ಆದೇಶದ ಅನ್ವಯ ಮುಚ್ಚಳಿಕೆ ಪತ್ರಗಳು.

11. ಸಂಸ್ಥೆಯ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಧೃಢೀಕೃತ ಪ್ರತಿ.

12. ಚುನಾಯಿತಗೊಂಡ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಯ ಪಟ್ಟಿ

13. ಜಿಲ್ಲಾ ಅಧಿಕಾರಿಗಳ ಸ್ಥಳ ತನಿಖಾ ವರದಿ

14. ಜಿಲ್ಲಾಧಿಕಾರಿಗಳ ಸ್ಪಷ್ಟ ಶಿಫಾರಸ್ಸು ಪತ್ರ

 

ಸರ್ಕಾರದ ಆದೇಶ

ಸ್ಮಶಾನ ಅಭಿವೃಧ್ದಿ ಯೋಜನೆಯ ಸರ್ಕಾರದ ಆದೇಶ

 

ಬಿದಾಯಿ

2016-17ನೇ ಸಾಲಿನ ಬಿಡುಗಡೆಯಾದ ಅನುದಾನ

 

ಆಂಗ್ಲೋ ಇಂಡಿಯನ್

2016-17ನೇ ಸಾಲಿನ ಬಿಡುಗಡೆಯಾದ ಅನುದಾನ

 

ವಿದ್ಯಾಸಿರಿ

2016-17ನೇ ಸಾಲಿನ ಬಿಡುಗಡೆಯಾದ ಅನುದಾನ

 

ನರ್ಸಿಂಗ್

2016-17ನೇ ಸಾಲಿನ ಬಿಡುಗಡೆಯಾದ ಅನುದಾನ.

 

ಕ್ರಿಶ್ಚಿಯನ್ ಹೆಡ್ ಆಫ್ ಅಕೌಂಟ್ ಹೊರತುಪಡಿಸಿ ಕ್ರಿಶ್ಚಿಯನ್ನರ ಯೋಜನೆಗಳು.

2019-20ರ ಆರ್ಥಿಕ ವರ್ಷದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು.

 

2019-2020ರ ಆರ್ಥಿಕ ವರ್ಷಕ್ಕೆ ಡಿ.ಎಡ್ ಮತ್ತು ಬಿ.ಎಡ್ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳು.

ಚರ್ಚ್ ಮತ್ತು ಕಾಂಪೌಂಡ್ ವಾಲ್ ನವೀಕರಣ ಬಿಡುಗಡೆಗಳು.

ಸಿಮೆಂಟ್ರಿ ಬಿಡುಗಡೆಗಳು.

ಅನಾಥಾಶ್ರಮ ಮತ್ತು ವೃದ್ಧಾಶ್ರಮ ಬಿಡುಗಡೆ

ಸಮುದಾಯ ಭವನ 1ನೇ ಕಂತಿನ ಬಿಡುಗಡೆ

ಸಮುದಾಯ ಭವನ 2ನೇ ಕಂತಿನ ಬಿಡುಗಡೆ

 

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರ‌ ನಾಮ ನಿರ್ದೇಶನ ರದ್ದುಗೊಳಿಸಿ   ಹೊರಡಿಸಿರುವ ಆದೇಶ ಕುರಿತು.

 

  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ಹೊಸ ಅಧ್ಯಕ್ಷರ‌ ನಾಮ ನಿರ್ದೇಶನ ಮಾಡಿ ಹೊರಡಿಸಿರುವ ಆದೇಶ ಕುರಿತು.

 

 

 

 

 

 

 

ಇತ್ತೀಚಿನ ನವೀಕರಣ​ : 19-05-2022 04:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080