ಅಭಿಪ್ರಾಯ / ಸಲಹೆಗಳು

ಸರ್ಕಾರಿ ಮುಸ್ಲಿಂ ವಸತಿ ಶಾಲೆ ರಾಮನಗರ ತಾಲ್ಲೂಕು

   

ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಪಿ.ಎಸ್.ವಿ.ನಗರ್, ರಾಮನಗರ ಟೌನ್

ಶಾಲಾ ಸಂಕೀರ್ಣ :-

         ದಾಖಲಾತಿ ಮತ್ತು ಧಾರಣವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಹೆಚ್ಚಿನ ಗಮನ ಹರಿಸಿ, ಡ್ರಾಪೌಟ್ ದರವನ್ನು ತಗ್ಗಿಸಲು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳನ್ನು ತೆರೆಯಲಾಗಿದ್ದು, 06 ರಿಂದ 10ನೇ ತರಗತಿಗೆ ವಿದ್ಯಾರ್ಥಿಗಳಿಗೆ ಕರ್ನಾಟಕದಾಧ್ಯಂತ ಕಾರ್ಯ ನಿರ್ವಹಿಸುತ್ತಿವೆ. ಅಲ್ಪಸಂಖ್ಯಾತರ ನಿರ್ದೇಶನಾಲಯದಡಿಯಲ್ಲಿ ಸರ್ಕಾರಿ ಮುಸ್ಲಿಂ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ರಾಮನಗರ ಜಿಲ್ಲೆಯಲ್ಲಿ 01 ಸರ್ಕಾರಿ ಮುಸ್ಲಿಂ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದೆ.

        ನಮ್ಮ ಶಾಲೆಯು 2.17 ಎಕರೆ ವಿಸ್ತೀರ್ಣದಲ್ಲಿ ಶಾಲಾ ಸಂಕೀರ್ಣ ವಿದ್ಯಾರ್ಥಿನಿಲಯ, ಭೋಜನಾಲಯ, ಗ್ರಂಥಾಲಯ, ಬೋಧಕ ಹಾಗೂ ಬೋಧಕೇತರ ವಸತಿ ನಿಲಯಗಳನ್ನು ನಿರ್ಮಿಸಿ 24 X  7 ಸಿ.ಸಿ.ಟಿವಿ ಕಣ್ಗಾವಲಿನಲ್ಲಿ ಸುಸಜ್ಜಿತವಾಗಿ ಸಜ್ಜುಗೊಂಡಿದೆ.

 https://dom.karnataka.gov.in/ramanagara/public/storage/pdf-files/School Building.PNG

ಕ್ರ. ಸಂ

ಶಾಲಾ ವಿಳಾಸ

ತಾಲ್ಲೂಕು

ವಿಧ

ಮಾಧ್ಯಮ

ಸಂಪರ್ಕ ಸಂಖ್ಯೆ

01

ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಪಿ.ಎಸ್.ವಿ.ನಗರ್, ರಾಮನಗರ ಟೌನ್

ರಾಮನಗರ

ಹೆಣ್ಣು

ಆಂಗ್ಲ

7829289428

 

ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಒದಗಿಸಲಾಗುವ ಸೌಲಭ್ಯಗಳು:-

 1. ಉಚಿತ ವಸತಿ.
 2. ಉಚಿತ ಸಮವಸ್ತ್ರ, ಶೂ ಹಾಗೂ ಸಾಕ್ಸ್.
 3. ಉಚಿತ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಾಗ್ರಿಗಳು.
 4. ಇತರೆ ಉಚಿತ ಸೌಲಭ್ಯಗಳು.

 

ಪ್ರಾಂಶುಪಾಲರ ಕೊಠಡಿ:-

https://dom.karnataka.gov.in/ramanagara/public/storage/pdf-files/P Room.PNG

           ನಮ್ಮ ಶಾಲೆಯು ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯಶಸ್ಸನ್ನು ಅವರ ಸಾಮಾರ್ಥ್ಯಕ್ಕೆ ಅನುಗುಣವಾಗಿ ರೂಪಿಸುವ ದೃಢತೆಯನ್ನು ಹೊಂದಿದ್ದು, ಸುರಕ್ಷತೆ, ಸಹಕಾರ, ಮನೋಭಾವ ಮತ್ತು ಫಲಪ್ರದ ಸಂವಹನದ ತಳಹದಿಯ ಮೇಲೆ ಯಶಸ್ಸು ಸಾಧಿಸಲು ಶಿಕ್ಷಣಕ್ಕೆ ಆತಿಥ್ಯಕಾರಿ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿದೆ.

 

ಸಿಬ್ಬಂದಿಗಳ ಕೊಠಡಿ:-


https://dom.karnataka.gov.in/ramanagara/public/storage/pdf-files/S Room.PNG

       ಪ್ರತಿಭೆಯು ಆಟವನ್ನು ಗೆಲ್ಲಿಸುತ್ತದೆ. ಆದರೆ ತಂಡದ ಕೆಲಸ ಮತ್ತು ಬುದ್ದಿವಂತಿಕೆಯು ಸರ್ವೋತ್ತಮ ವಾದುದನ್ನು ಸಾಧಿಸುತ್ತದೆ. ಅದರಂತೆ, ಶಿಕ್ಷಕರ ಕಾರ್ಯಕ್ಕೆ ಸಹಕರಿಸುವಂತೆ ಸಿಬ್ಬಂದಿ ಕೊಠಡಿಗಳು ನಿರ್ಮಾಣಗೊಂಡಿವೆ. ಪ್ರತಿ ವಿದ್ಯಾರ್ಥಿಗೂ ನುರಿತ ಹಾಗೂ ಅನುಭವಿ ಶಿಕ್ಷಕರಿಂದ ಪ್ರತ್ಯೇಕ ಕಾಳಜಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

 

ಕಂಪ್ಯೂಟರ್ ಲ್ಯಾಬ್:-

https://dom.karnataka.gov.in/ramanagara/public/storage/pdf-files/C Lab.PNG

         ನಮ್ಮ ಶಾಲೆಯ ಕಂಪ್ಯೂಟರ್ ಲ್ಯಾಬ್ ತುಂಬಾ ವಿಶೇಷ ಹಾಗೂ ವಿಶಾಲವಾಗಿದೆ. ಏಕೆಂದರೇ, ಇದು ತನ್ನಲ್ಲಿಯೇ ಹಲವಾರು ಅಗತ್ಯ ಮತ್ತು ಉಪಯುಕ್ತ ವೈಶಿಷ್ಟಗಳನ್ನು ಒಳಗೊಂಡಿದೆ. 10ಕ್ಕಿಂತ ಹೆಚ್ಚು ಕಂಪ್ಯೂಟರ್ ಒಳಗೊಂಡಿದ್ದು, ನಾವಿನ್ಯ ರೀತಿಯ ಸಾಪ್ಟ್ ವೇರ್ ಅಳವಡಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ನವೀನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ.

 

ವಿಜ್ಞಾನ ಪ್ರಯೋಗಾಲಯ :-

https://dom.karnataka.gov.in/ramanagara/public/storage/pdf-files/S Lab.PNG

       ನಮ್ಮ ಪ್ರಯೋಗಾಲಯವು ಅತ್ಯಂತ ಆಧುನಿಕ ಗುಣಮಟ್ಟದ ಮತ್ತು ಅತ್ಯಾದುನಿಕ ಉಪಕರಣಗಳನ್ನು ಹೇರಳವಾಗಿ ಹೊಂದಿವೆ. ಇತ್ತಿಚಿನ ರಾನಾಯನಿಕ ಹಾಗು ಮಾದರಿಗಳನ್ನು ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಪ್ರತಿಯೊಂದು ವೈಜ್ಞಾನಿಕ ಪರಿಕಲ್ಪನೆಯನ್ನು ಪ್ರಯೋಗಾಲಯದಲ್ಲಿ ನುರಿತ ಶಿಕ್ಷಕರಿಂದ ಬೋಧಿಸಲಾಗುತ್ತದೆ. ಇದು ಜ್ಞಾನಿಗಳಲ್ಲಿ ವೈಜ್ಞಾನಿಕ ಪರಿಕಲ್ಪನೆಯನ್ನು ಅಭಿವೃದ್ದಿಪಡಿಸುತ್ತದೆ.

 

ಭೋಜನಾಲಯ ಮತ್ತು ಆರ್ ಒ  ಪ್ಯೂರಿಫ್ಯೆಯರ್:-

https://dom.karnataka.gov.in/ramanagara/public/storage/pdf-files/D Hall.PNGhttps://dom.karnataka.gov.in/ramanagara/public/storage/pdf-files/w P.PNG

         ನಮ್ಮ ಶಾಲೆಯ ಭೋಜನಾಲಯವು ವಿಶಾಲವಾಗಿದ್ದು ಸುಸಜ್ಜಿತವಾಗಿದೆ. ಒಮ್ಮೇಯೇ 250 ವಿದ್ಯಾರ್ಥಿಗಳು ಕುಳಿತು ಊಟ ಮಾಡುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಶುದ್ದ ಮತ್ತು ಪೌಷ್ಟಕಯುತ ಆಹಾರವನ್ನು  ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.ಶಾಲಾ ಕಟ್ಟಡದೊಳಗೆ ಆರ್ ಒ  ಪ್ಯೂರಿಫ್ಯೆಯರ್ ಅಳವಡಿಸಿದ್ದು ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ.

 

 

ಬೋಧಕ ಮತ್ತು ಬೋಧಕೇತರ ವಸತಿ ಗೃಹಗಳು :-

https://dom.karnataka.gov.in/ramanagara/public/storage/pdf-files/T Q.PNG

         ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಬೋಧಕ ಮತ್ತು ಬೋಧಕೇತರರ ಸಿಬ್ಬಂದಿಗಳಿಗ 16 ಬೋಧಕ ವಸತಿ ಗೃಹ ಹಾಗು 8 ಬೋಧಕೇತರ ವಸತಿ ಗೃಹ ಒದಗಿಸಿದ್ದು ಸೌರ ಬಿಸಿನೀರಿನ ವ್ಯವಸ್ಥೆ ವಿದ್ಯುತ್ ಸಂಪರ್ಕ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿದೆ.

 

ತರಗತಿ ಕೊಠಡಿಗಳು:-

https://dom.karnataka.gov.in/ramanagara/public/storage/pdf-files/c Room.PNG

        ತರಗತಿ ಕೊಠಡಿಗಳು ವಿಶಾಲವಾಗಿದ್ದು ಮಾನದಂಡಗಳ ಪ್ರಕಾರ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಹೊಂದಿದ್ದು, ಪ್ರತಿ ತರಗತಿಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನಹರಿಸಲು ಸಹಕಾರಿಯಾಗಿದೆ ತರಗತಿಯಲ್ಲಿ ಸ್ಮಾರ್ಟ್ ಬೋರ್ಡ್ ಮತ್ತು ಗ್ರಿನ್ ಬೋರ್ಡ್ ಅನ್ನು ಅಳವಡಿಸಲಾಗಿದೆ ಇದು ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

 

ಯೋಗ, ಕ್ರೀಡೆ ಹಾಗು ಜಿಮ್:-

https://dom.karnataka.gov.in/ramanagara/public/storage/pdf-files/Yo.PNG

https://dom.karnataka.gov.in/ramanagara/public/storage/pdf-files/P G.PNG

https://dom.karnataka.gov.in/ramanagara/public/storage/pdf-files/gym.PNG

       

 

 

 

 

 

 

 

 

 

 

                ವಿದ್ಯಾರ್ಥಿಗಳು ಇಂದು ಬಹು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವ ಪ್ರಂಚಡ ಒತ್ತಡನ್ನು ಹೊಂದಿದ್ದಾರೆ. ಈ ಒತ್ತಡವನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಶಕ್ತಿ ಹೊಂದಿರಬೇಕು.ಯೋಗ ಮತ್ತು ಆಟಗಳು ಮಕ್ಕಳನ್ನು ಶಕ್ತಿಯುತವಾಗಿರಿಸುತ್ತದೆ ಮತ್ತು ಅವರಿಗೆ ಜೀವನಕ್ಕೆ ಧನಾತ್ಮಕ ಮಾರ್ಗವನ್ನು ನೀಡುತ್ತದೆ. ಅದಕ್ಕಾಗಿಯೇ ಹೊರಾಂಗಣ ಜಿಮ್ ಉಪಕರಣಗಳನ್ನು ಶಾಲೆಯ ಕ್ಯಾಂಪಸ್ ನಲ್ಲಿ ಅಳವಡಿಸಲಾಗಿದೆ ಇದು ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ ಮತ್ತು ಮಾಸಿಕ ಆರೋಗ್ಯವನ್ನು ಅಭಿವೃದ್ಧಿಪಡಿಸುತ್ತದೆ.

 

 

 

 

ಇತ್ತೀಚಿನ ನವೀಕರಣ​ : 18-01-2022 02:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಮನಗರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080