ಅಭಿಪ್ರಾಯ / ಸಲಹೆಗಳು

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಚನ್ನಪಟ್ಟಣ ತಾಲ್ಲೂಕು

       

ದಾಖಲಾತಿ ವಿವರ
ಶಾಲೆಯು ಸ್ಥಾಪನೆಯಾದ ವರ್ಷ 2007-08
ಮಾಧ್ಯಮ ಆಂಗ್ಲ
ತರಗತಿ 6-10ನೇ ತರಗತಿ
ಮಂಜೂರಾದ ವಿದ್ಯಾರ್ಥಿ ಗಳ ಸಂಖ್ಯೆ 250
6ನೇ ತರಗತಿ 50
7ನೇ ತರಗತಿ 50
8ನೇ ತರಗತಿ 50
9ನೇ ತರಗತಿ 50
10ನೇ ತರಗತಿ 50
ಮಿಸಲಾತಿ
ಅಲ್ಪಸಂಖ್ಯಾತರು  ಇತರೆ
ಶೇಕಡ 75 ಶೇಕಡ 25

ಕ್ರಸಂ

ವಸತಿ ಶಾಲೆಯ ಹೆಸರು ಮತ್ತು ವಿಳಾಸ

ವಿಧ

ಮಧ್ಯಮ

ದೂರವಾಣಿ ಸಂಖ್ಯೆ

ಷರಾ

1

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊನ್ನಾಯಕನಹಳ್ಳಿ, ಚನ್ನಪಟ್ಟಣ  ತಾಲ್ಲೂಕು. ರಾಮನಗರ ಜಿಲ್ಲೆ.

ಗಂಡು ಮತ್ತು ಹೆಣ್ಣು

ಆಂಗ್ಲ

9380100771

 

 

ಶಾಲೆಯ ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆ, ಹೊನ್ನಾಯಕನಹಳ್ಳಿ ಚನ್ನಪಟ್ಟಣ ತಾ, ರಾಮನಗರ ಜಿಲ್ಲೆ ಶಾಲೆಯ ಕುರಿತಾದ ಮಾಹಿತಿ ಇಂತಿದೆ.

ಗೊಂಬೆನಾಡಿನ ಪ್ರಕೃತಿಯ ಮಡಿಲಿನಲ್ಲಿರುವ ನಮ್ಮಶಾಲೆ 4.10 ಎಕರೆ ಭೂ ವಿಸ್ತೀರ್ಣ ಹೊಂದಿದೆ. ಬಲಿಷ್ಠ ಕಾಂಪೌಂಡ್ 24*7 ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿರುವ ನಮ್ಮಶಾಲೆ ವ್ಯವಸ್ಥಿತವಾದ ಶಾಲಾಸಂಕೀರ್ಣ, ಬಾಲಕ-ಬಾಲಕಿಯರ ವಸತಿಗೃಹಗಳು, ಭೋಜನಾಲಯ, ಮೌಲಾನಾ ಆಜಾದ್ ಭವನ, ಗ್ರಂಥಾಲಯ ಭವನ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ವಸತಿಗೃಹಗಳು, ಹೊರಾಂಗಣ ರಂಗಮಂದಿರ, ಆಟದ ಮೈದಾನಗಳನ್ನು ಕಾಣಬಹುದಾಗಿದೆ. ಹಾಗೂ ರಿಟೈನಿಂಗ್ ವಾಲ್, ಸುಂದರ ಕೈತೋಟ, ಸೋಲಾರ್ ದೀಪಗಳಿಂದ ಶಾಲೆ ಅಲಂಕೃತಗೊಂಡಿದೆ.

 https://dom.karnataka.gov.in/ramanagara/public/storage/pdf-files/School out look.PNG

ಶಾಲಾ ಸಂಕೀರ್ಣ:

        ಶಾಲಾಪ್ರಾಂಶುಪಾಲರ ಕಛೇರಿಯೊಂದಿಗೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಶಾಖೆಗಳನ್ನು ಒಳಗೊಂಡಿದೆ. ವಿಶಾಲವಾದ ತರಗತಿಕೊಠಡಿಗಳು ಗ್ರೀನ್ ಬೋರ್ಡ್ ಮತ್ತು ಸ್ಮಾರ್ಟ್ ಬೋರ್ಡ್ ಗಳನ್ನು ಹೊಂದಿದ್ದು ಅಂತರ್ಜಾಲ ಸೌಲಭ್ಯವಿದೆ. ತಂತ್ರಜ್ಞಾನಯುಕ್ತ ಕಲಿಕೆಗಾಗಿ ಕಂಪ್ಯೂಟರ್ ಲ್ಯಾಬ್ ಪ್ರಯೋಗಾತ್ಮಕ ಕಲಿಕೆಗಾಗಿ ವಿಜ್ಞಾನ ಪ್ರಯೋಗಾಲಯ ಔದ್ಯೋಗಿಕ ಕಲಿಕೆಗಾಗಿ ಆರ್ಟ್&ಕ್ರಾಫ್ಟ್ ಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಇ-ಲರ್ನಿಂಗ್ ಕಲಿಕೆಗಾಗಿ  ಡಿಜಿಟಲ್ ಗ್ರಂಥಾಲಯದ ವ್ಯವಸ್ಥೆಯಿದೆ.

 https://dom.karnataka.gov.in/ramanagara/public/storage/pdf-files/Admin.PNG

 

ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿಕೊಠಡಿ:

           ಶಾಲೆಯ ಸರ್ವಾಂಗೀಣ ಪ್ರಗತಿಯ ಜವಾಬ್ದಾರಿಯನ್ನುಹೊತ್ತು ಪ್ರಾಂಶುಪಾಲರು ಮತ್ತು ಅನುಭವಿ ನುರಿತ ಬೊಧಕರನ್ನು ಶಾಲೆ ಒಳಗೊಂಡಿದೆ. ಪ್ರಾಂಶುಪಾಲರ ಕಛೇರಿಯು ಆಕರ್ಷಿಕವಾಗಿದ್ದು ಪ್ರಾಂಶುಪಾಲರ ಆಸನ ವ್ಯವಸ್ಥೆ, ಕಂಪ್ಯೂಟರ್ ಕಪಾಟುಗಳು ಹಾಗೂ ಸಿ.ಸಿ.ಟಿ.ವಿ.ವೀಕ್ಷಣಾ ಘಟಕಗಳನ್ನು ಒಳಗೊಂಡಿದೆ.

ಸಿಬ್ಬಂದಿ ಕೊಠಡಿಯು ಸುಸಜ್ಜಿತವಾಗಿದ್ದು, ಪ್ರತ್ಯೇಕ ಆಸನ ವ್ಯವಸ್ಥೆ ಹಾಗೂ ಪ್ರತ್ಯೇಕ ಕಪಾಟಿನ ವ್ಯವಸ್ಥೆ ಒಳಗೊಂಡಿದೆ.

 https://dom.karnataka.gov.in/ramanagara/public/storage/pdf-files/Hm & Staff.PNG

ತರಗತಿ ಕೊಠಡಿಗಳು:

ವಿಶಾಲವಾದ ತರಗತಿ ಕೊಠಡಿಗಳು ಗ್ರೀನ್ ಬೋರ್ಡ್ ಗಳು ಮತ್ತು ಸ್ಮಾರ್ಟ್ ಬೋರ್ಡ್ ಗಳನ್ನು ಹೊಂದಿದ್ದು, ಅಂತರ್ಜಾಲವುಳ್ಳ ಪ್ರೋಜೆಕ್ಟರ್ ಗಳ ಸೌಲಭ್ಯವಿದೆ. ಹಾಗೂ ಪ್ರತಿ ತರಗತಿಯಲ್ಲೂ 50 ಆಸನ ವ್ಯವಸ್ಥೆಯನ್ನು ಒಳಗೊಂಡಿದೆ.

 

 

ಕಂಪ್ಯೂಟರ್ ಲ್ಯಾಬ್ ಮತ್ತು ಡಿಜಿಟಲ್ ಲ್ಯಾಬ್:

ನಾವಿನ್ಯಯುತ ಬೋಧನೆಗೆ ಹೆಚ್ಚುಪ್ರಾಶಸ್ತ್ಯ ಹಾಗೂ ತಂತ್ರಾಂಶಯುಕ್ತ ಇ-ಕ್ಲಾಸ್ ರೂಮ್ ಬೋಧನೆ ಲಭ್ಯವಿದೆ. ಹೊಸ ತಂತ್ರಜ್ಞಾನಕಲಿಕೆಗೆ ಪೂರಕವಾದ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಯಿದೆ. ವಿಜ್ಞಾನಬೋಧನೆಗೆ ಬೇಕಾದ ಪ್ರಾಯೋಗಿಕ ಸಂಪನ್ಮೂಲಯುಕ್ತ ಆಕರ್ಷಣೀಯ ವಿಜ್ಞಾನ ಪ್ರಯೋಗಾಲಯವನ್ನು ಒಳಗೊಂಡಿದೆ. ಶಾಲೆಯಲ್ಲಿ ಲಭ್ಯವಿರುವ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ವಿಜ್ಞಾನಪ್ರಯೋಗಾಲಯ ಮತ್ತು ಸ್ಮಾರ್ಟ್ ಕ್ಲಾಸ್ ನಂತಹ ನಿರಂತರ ಬಳಕೆಯೂ ಸಹಮಕ್ಕಳಲ್ಲಿ ಬೌದ್ದಿಕ ಬೆಳವಣಿಗೆಗೆ ಪೂರಕವಾಗಿವೆ.

 https://dom.karnataka.gov.in/ramanagara/public/storage/pdf-files/Comp.PNG

 

ವಿಜ್ಞಾನ ಪ್ರಯೋಗಾಲಯ:

        ಅನ್ವಯಿಕ ಕಲಿಕೆ ಮತ್ತು ಪ್ರಾಯೋಗಿಕ ಕಲಿಕೆಗಳು ಇಂದಿನ ಸ್ಪರ್ಧಾತ್ಮಕ ಕಲಿಕೆಗೆ ಆಧಾರಸ್ತಂಭವಾಗಿದ್ದು, ಈ ನಿಟ್ಟಿನಲ್ಲಿ ನಮ್ಮಶಾಲೆ ಉನ್ನತಮಟ್ಟದ ವಿಜ್ಞಾನ ಪ್ರಯೋಗಾಲಯವನ್ನು ಹೊಂದಿದೆ. ಈ ಪ್ರಯೋಗಾಲಯವು ಅತ್ಯಾಧುನಿಕ ತಂತ್ರಜ್ಞಾನದಿಂದ ಯೋಜಿಸಲ್ಪಟ್ಟಿದ್ದು ಉಪಕರಣಗಳು, ಚಾರ್ಟ್ ಗಳು ರಾಸಾಯನಿಕಗಳು ಮತ್ತು ಕಪಾಟುಗಳನ್ನು ಒಳಗೊಂಡಿದ್ದು ಪ್ರಾಯೋಗಿಕ ಕಲಿಕೆ ಉಂಟುಮಾಡಲಾಗುತ್ತದೆ. ವಿಜ್ಞಾನ ಪ್ರಪಂಚದ ಕೌತುಕಗಳನ್ನು ಪ್ರೊಜೆಕ್ಟರ್ ವಿಡೀಯೋಗಳ ಮೂಲಕ ತೆರೆದಿಡಲಾಗುತ್ತದೆ.

 https://dom.karnataka.gov.in/ramanagara/public/storage/pdf-files/Know.PNG

 

ಒಳಾಂಗಣ ಮತ್ತು ಹೊರಾಂಗಣ ಜಿಮ್:

ಸರ್ವಾಂಗೀಣ ಪ್ರಗತಿಗೆ ದೈಹಿಕಶಿಕ್ಷಣ ಹಾಗು ಚಟುವಟಿಕೆಗೆ ಹೆಚ್ಚಿನಮಹತ್ವವನ್ನು ಹೊಂದಿದ್ದು ಒಳಾಂಗಣ ಮತ್ತು ಹೊರಾಂಗಣ ಜಿಮ್, ಆಟದಮೈದಾನಗಳನ್ನು ಒಳಗೊಂಡಿದೆ. ‘Sound body in a sound mind’ ಎಂಬಂತೆ ನಮ್ಮಶಾಲೆಯ ವಿದ್ಯಾರ್ಥಿಗಳಿಗೆ ದೈಹಿಕಶಿಕ್ಷಕರ ಮಾರ್ಗದರ್ಶನದಲ್ಲಿ ದಿನಂಪ್ರತಿ ಯೋಗ – ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ ವಿದ್ಯಾರ್ಥಿಗಳನ್ನು ದೈಹಿಕವಾಗಿ ವಸತಿನಿಲಯದಲ್ಲಿ ವಿದ್ಯಾರ್ಥಿಗಳು ಸನಿವಾಸಿಗಳಾಗಿರುವುದರಿಂದ ಕ್ರೀಡಾಚಟುವಟಿಕೆಗಳಲ್ಲಿ ಸತತವಾಗಿ ಅಭ್ಯಾಸಮಾಡಲು ಅನುಕೂಲಕರವಾಗಿದೆ. ಅಂತೆಯೇ ನಮ್ಮ ಶಾಲಾವಿದ್ಯಾರ್ಥಿಗಳು ಕಳೆದ ಹತ್ತು ಹಲವುಕ್ರೀಡೆಗಳಲ್ಲಿ ಆಸಕ್ತಿದಾಯಕವಾಗಿ ಭಾಗವಹಿಸಿ ಹೋಬಳಿ-ತಾಲ್ಲೂಕು-ಜಿಲ್ಲೆ-ವಿಭಾಗೀಯಮಟ್ಟದಲ್ಲಿ ಗುರುತರವಾದ ಸಾಧನೆಗೈದಿದ್ದಾರೆ.   

https://dom.karnataka.gov.in/ramanagara/public/storage/pdf-files/Inddor out gym.PNG

 

ಆರ್ಟ್ & ಕ್ರಾಫ್ಟ್ ಗ್ಯಾಲರಿ

ಚಿತ್ರಕಲೆ, ಸಾಂಸ್ಕೃತಿಕ ಹಾಗೂ ವ್ಯೆವಿಧ್ಯ ಪಠ್ಯೇತರಚಟುವಟಿಕೆಗಳ ಮೂಲಕ ಕಲಿಕೆಗೆ ಒತ್ತು. ‘ವಿದ್ಯಾರ್ಥಿಗಳ ಸರ್ವೊತೋಮುಖ ಅಭಿವದ್ದಿಯಲ್ಲಿ ಕಲೆಯಪಾತ್ರ ಅಮೂಲ್ಯವಾದದ್ದು’ ಎಂಬಮಾತಿನಂತೆ ವಿದ್ಯಾರ್ಥಿಗಳು ಓದಿನಜೊತೆಗೆ ಹಲವಾರುಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ವಿದ್ಯಾರ್ಥಿಗಳ ಏಳಿಗೆಗಾಗಿ ಶಾಲೆಯು ಶ್ರಮಿಸುತ್ತಿದೆ. ಚಿತ್ರಕಲೆಅಭಿಯಾನ-ಗಾಯನ-ನೃತ್ಯ-ಕ್ರಾಫ್ಟ್ ವರ್ಕ್-ಹೊಲಿಗೆ-ಕಸೂತಿಕಲೆ ಹೀಗೆ ಹತ್ತುಹಲವು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಭೇತಿಯನ್ನು ನೀಡುವ ಮೂಲಕ ಅವುಗಳ ಕಲಿಕೆ ತಮ್ಮವಿದ್ಯಾಭ್ಯಾಸ-ಜೀವನಕ್ಕೆ ಪೂರಕವಾಗುವಂತೆ ಮಾಡಲಾಗುತ್ತಿದೆ. ಅಲ್ಲದೇ ನಮ್ಮ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್-ಹೋಬಳಿ-ತಾಲ್ಲೂಕು ಮಟ್ಟದಲ್ಲಿ ಗುರುತರವಾದ ಸಾಧನೆಯನ್ನು ಗೈದಿರುತ್ತಾರೆ.

 https://dom.karnataka.gov.in/ramanagara/public/storage/pdf-files/art & Craft.PNG

 

ಗ್ರಂಥಾಲಯ.

    ವಿಶಾಲಾವಾದ ಮತ್ತು ಸಂಮೃದ್ಧವಾದ ಗ್ರಂಥಾಲಯ ನಮ್ಮಶಾಲೆಯ ಮತ್ತೊಂದು ಹೆಮ್ಮೆಯಾಗಿರುತ್ತದೆ. ಗ್ರಂಥಾಲಯವು ಕನ್ನಡ-ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿರುವ ಹತ್ತು ಹಲವು ಪುಸ್ತಕಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಜ್ಞಾನದಾಹವನ್ನು ಹಿಂಗಿಸಲು ನೆರವಾಗಿದೆ. ಪಠ್ಯಪೂರಕ ಪ್ರತ್ಯಕ್ಷಜ್ಞಾನವನ್ನು ವೃದ್ಧಿಸಿಕೊಳ್ಳಲು ಪುಸ್ತಕಗಳು ನೆರವಾಗಿವೆ.

 https://dom.karnataka.gov.in/ramanagara/public/storage/pdf-files/Library.PNG

 

ಬಾಲಕ ಮತ್ತು ಬಾಲಕಿಯರ ವಸತಿಗೃಹ

ಶಾಲೆಯು ವಿಶೇಷ ಸೌಲಭ್ಯಗಳುಳ್ಳ ವಸತಿಗೃಹಗಳನ್ನು ಒಳಗೊಂಡಿದೆ. ಬಾಲಕ-ಬಾಲಕಿಯರಿಗೆ (125+125 ಸಂಖ್ಯಾಬಲ) ಪ್ರತ್ಯೇಕ ವಸತಿ ಗೃಹಗಳಿದ್ದು 24*7 ಸಿ.ಸಿ.ಟಿ.ವಿ. ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದೆ. ತಲಾ 11 ಕೋಣೆಗಳಿದ್ದು ಪ್ರತೀಕೋಣೆಯಲ್ಲಿಯೂ ಹಾಸಿಗೆ,ಮಂಚ, ಅಭ್ಯಾಸದ ಟೇಬಲ್ ಕಪಾಟಿನ ವ್ಯವಸ್ಥೆಮಾಡಲಾಗಿದೆ. ಸೋಲಾರ್ ಬಿಸಿನೀರು, ಯು.ಪಿ.ಎಸ್. ವ್ಯವಸ್ಥೆಗಳನ್ನು ಈ ವಸತಿಗೃಹಗಳು ಒಳಗೊಂಡಿದ್ದು ಪ್ರತಿಮಾಹೆಯಾನ ಸೋಪ್ ಕಿಟ್ ವಿತರಿಸಲಾಗುವುದು. ಹೆಣ್ಣುಮಕ್ಕಳಿಗೆ ಶುಚಿಸಂಭ್ರಮದ ಕಿಟ್ ವಿತರಿಸಲಾಗುವುದು

 https://dom.karnataka.gov.in/ramanagara/public/storage/pdf-files/Boys & Girls Hostal.PNG

 

ಭೋಜನಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ:

ಶಾಲೆಯು ವಿಶಾಲವಾದ ಭೋಜನಾಲಯ ಹೊಂದಿದ್ದು, 250 ವಿದ್ಯಾರ್ಥಿಗಳು ಒಟ್ಟಿಗೆಕೂತು ಆಹಾರ ಸೇವಿಸುವ ವ್ಯವಸ್ಥೆಮಾಡಲಾಗಿದೆ. ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದ್ದು ಸಾಕಷ್ಟು ಬೆಳಕಿನ ಸೌಲಭ್ಯವಿದ್ದು ಶುಚಿತ್ವದಿಂದ ಕೂಡಿದೆ. ನುರಿತ ಅನುಭವಿ ಅಡುಗೆಸಿಬ್ಬಂದಿ ಲಭ್ಯವಿದೆ. ಮೆನು ಚಾರ್ಟ್ ಪ್ರಕಾರ ದಿನಪ್ರತಿ ಬೋಜನ ವ್ಯವಸ್ಥೆಮಾಡಲಾಗಿದೆ. ಆರ್.ಓ.ಯು.ವಿ. ಮತ್ತು ಯು.ಎಫ್.ತಂತ್ರಜ್ಞಾನವುಳ್ಳ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.

 https://dom.karnataka.gov.in/ramanagara/public/storage/pdf-files/Dining Hall.PNG

 

ಪ್ರಾಂಶುಪಾಲರ ವಸತಿಗೃಹ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಸತಿಗೃಹಗಳು:

ಪ್ರಾಂಶುಪಾಲರು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಶಾಲಾ ಆವರಣದಲ್ಲೇ ವ್ಯವಸ್ಥೆಯಿದ್ದು ವಿದ್ಯಾರ್ಥಿಗಳ ಲಾಲನೆ-ಪಾಲನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವುದು ನಮ್ಮಶಾಲೆಯ ವೈಶಿಷ್ಟ್ಯವಾಗಿದೆ. ಶಾಲೆಯಸಿಬ್ಬಂದಿಗಳಿಗೆ ಸೋಲಾರ್ ಬಿಸಿನೀರು 24*7 ವಿದ್ಯುತ್ ಮತ್ತು ನೀರಿನ ಸೌಲಭ್ಯವುಳ್ಳ ಪ್ರತ್ಯೇಕ ವಸತಿಗೃಹಗಳನ್ನು ನೀಡಲಾಗಿದೆ.

ವಸತಿಗೃಹಗಳ ಸಂಖ್ಯೆ:                 ಪ್ರಾಂಶುಪಾಲರ ವಸತಿ ಗೃಹ:01

                                         ಬೋಧಕ ಸಿಬ್ಬಂದಿಗಳವಸತಿ ಗೃಹ-10

                                       ಬೋಧಕೇತರ ಸಿಬ್ಬಂದಿಗಳವಸತಿ ಗೃಹ:04

 https://dom.karnataka.gov.in/ramanagara/public/storage/pdf-files/Teacher.PNG

 

ಆಟದ ಮೈದಾನ:                                                                    

ಶಾಲೆಯು ವಿಶಾಲವಾದ ಆಟದಮೈದಾನಗಳನ್ನು ಒಳಗೊಂಡಿದೆ. ವಸತಿನಿಲಯದಲ್ಲಿ ವಿದ್ಯಾರ್ಥಿಗಳು ಸನಿವಾಸಿಗಳಾಗಿರುವುದರಿಂದ ಕ್ರೀಡಾಚಟುವಟಿಕೆಗಳಲ್ಲಿ ಸತತವಾಗಿ ಅಭ್ಯಾಸ ಮಾಡಲು ಅನುಕೂಲಕರವಾಗಿದೆ. ಅಂತೆಯೇ ನಮ್ಮಶಾಲಾ ವಿದ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದ ಹತ್ತುಹಲವುಕ್ರೀಡೆಗಳಲ್ಲಿ ಆಸಕ್ತಿದಾಯಕವಾಗಿ ಭಾಗವಹಿಸಿ ‘ಹೋಬಳಿ-ತಾಲ್ಲೂಕು-ಜಿಲ್ಲೆ-ವಿಭಾಗೀಯ’ ಮಟ್ಟದಲ್ಲಿ ಗುರುತರವಾದ ಸಾಧನೆಯನ್ನು ಮಾಡಿದ್ದಾರೆ.

 https://dom.karnataka.gov.in/ramanagara/public/storage/pdf-files/Exersise.PNG

 

ಮೌಲಾನಾ ಆಜಾದ್ ವಿವಿದೋದ್ದೇಶ ಸಭಾ ಭವನ

                ಶಾಲೆಯು ವಿವಿದೊದ್ಧೇಶ ಒಳಾಂಗಣ ಮತ್ತು ಹೊರಾಂಗಣ ಸಭಾಭವನಗಳನ್ನು ಹೊಂದಿದ್ದು 300 ಆಸನಗಳ ವ್ಯವಸ್ಥೆಯುಳ್ಳ ಈ ಸಭಾಭವನಗಳು ಆಕರ್ಷಿಕ ವೇದಿಕೆಯಿಂದ ಕೂಡಿದೆ. ಶಾಲೆಯಿಂದ ಏರ್ಪಡಿಸಲಾಗುವ ವಿವಿಧ ಶೈಕ್ಷಣಿಕ-ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಈ ಸಭಾಂಗಣ ಸಾಕ್ಷೀಬೂತವಾಗಿದೆ.

 https://dom.karnataka.gov.in/ramanagara/public/storage/pdf-files/moulana.PNG

 

ಇತ್ತೀಚಿನ ನವೀಕರಣ​ : 11-12-2021 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಮನಗರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080