ಅಭಿಪ್ರಾಯ / ಸಲಹೆಗಳು

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾಗಡಿ ತಾಲ್ಲೂಕು

        ದಾಖಲಾತಿ ಮತ್ತು ಧಾರಣವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಹೆಚ್ಚಿನ ಗಮನಹರಿಸಿ ಡ್ರಾಪ್‍ಔಟ್ ದರವನ್ನು ತಗ್ಗಿಸಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದ್ದ್ತು 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕದಾದ್ಯಂತ ಕಾರ್ಯನಿವಹಿಸುತ್ತಿವೆ. ನಿರ್ದೇಶನಾಲಯದ ಅಡಿಯಲ್ಲಿ 64 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿವಹಿಸುತ್ತಿದ್ದ್ತು  ರಾಮನಗರ ಜಿಲ್ಲೆಯಲ್ಲಿ  02  ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿವಹಿಸುತ್ತಿವೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು;-
1. ಪ್ರತಿ ವಿದ್ಯಾರ್ಥಿಗೆ ರೂ.1600/- 10 ತಿಂಗಳಿಗೆ
2. ಉಚಿತ ವಸತಿ
3. ಉಚಿತ ಸಮವಸ್ತ್ರ, ಶೂಸ್ ಮತ್ತು ಸಾಕ್ಸ್
4. ಉಚಿತ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು
5. ಇತರೆ ಸೌಲಭ್ಯಗಳು

ಕ್ರಸಂ

ವಸತಿ ಶಾಲೆಯ ಹೆಸರು ಮತ್ತು ವಿಳಾಸ

ವಿಧ

ಮಧ್ಯಮ

ದೂರವಾಣಿ ಸಂಖ್ಯೆ

ಷರಾ

1

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ,ಯಲ್ಲಾಪುರ, ಮಾಗಡಿ ತಾಲ್ಲೂಕು 

ಗಂಡು ಮತ್ತು ಹೆಣ್ಣು

ಅಂಗ್ಲ

9741555441/

7892135564

 

 

 

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ. ಯಲ್ಲಾಪುರ.

ಮಾಗಡಿ ತಾಲ್ಲೂಕು. ರಾಮನಗರ ಜಿಲ್ಲೆ – 562131

ಶಾಲೆಯು 7.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುತ್ತದೆ. ಇಲ್ಲಿ ವಸತಿಯುತ ಆಂಗ್ಲ ಮಾದ್ಯಮದೊಂದಿಗೆ ಬಾಲಕ – ಬಾಲಕಿಯರಿಗೆ ವಸತಿ ನಿಲಯ, ಮೌಲಾನಾ ಆಜಾದ್ ಭವನ, ಶಿಕ್ಷಕರಿಗಾಗಿ ಸುಸಜ್ಜಿತ ವಸತಿ ಗೃಹಗಳು, ವಿಶಾಲ ಕ್ರೀಡಾ ಮೈದಾನ ಹೊಂದಿ, ಸುತ್ತಲೂ ರಕ್ಷಣಾತ್ಮಕ  ಕಾಂಪೌಂಡ್ ಹೊಂದಿ ದಿನದ 24 ಗಂಟೆಗಳ ಕಾಲ ಸಿಸಿ ಟಿವಿ ವ್ಯವಸ್ಥೆ ಒಳಗೊಂಡಿದೆ.

  

 ಶಾಲಾ ಸಂಕೀರ್ಣ.

        ಉತ್ತಮ ಗಾಳಿ ಬೆಳಕು ಹೊಂದಿರುವ, ವಿಶಾಲವಾದ ತರಗತಿ ಕೊಠಡಿಗಳು, ಗ್ರೀನ್ ಬೋರ್ಡ್ ಮತ್ತು ಸ್ಮಾರ್ಟ್ ಬೋರ್ಡ್ ಗಳನ್ನು ಹೊಂದಿದ್ದು, ಅಂತರ್ಜಾಲ ಸೌಲಭ್ಯವಿದೆ. ತಂತ್ರಜ್ಞಾನಯುಕ್ತ ಕಲಿಕೆಗಾಗಿ ಕಂಪ್ಯೂಟರ್ ಲ್ಯಾಬ್ ಪ್ರಯೋಗಾತ್ಮಕ ಕಲಿಕೆಗಾಗಿ ವಿಜ್ಞಾನ ಪ್ರಯೋಗಾಲಯ ಔದ್ಯೋಗಿಕ ಕಲಿಕೆಗಾಗಿ ಆರ್ಟ್&ಕ್ರಾಫ್ಟ್ ಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಇ-ಲರ್ನಿಂಗ್ ಕಲಿಕೆಗಾಗಿ  ಡಿಜಿಟಲ್ ಗ್ರಂಥಾಲಯದ ವ್ಯವಸ್ಥೆಯಿದೆ.

 

ಸ್ಮಾರ್ಟ್ ತರಗತಿ ಮತ್ತು ಕಂಪ್ಯೂಟರ್ ಪ್ರಯೋಗಾಲಯ

ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ  ಸ್ಮಾರ್ಟ್ ತರಗತಿಗಳ ಮೂಲಕ ಪಾಠ. ಪ್ರವಚನ ನೀಡಲಾಗುವುದು . ವಿದ್ಯಾರ್ಥಿಗಳಿಗೆ  ಕಂಪ್ಯಟರ್ ಶಿಕ್ಷಣ ನೀಡಲಾಗುತ್ತಿದೆ

 

ಹೊರಾಂಗಣ ಮತ್ತು ಒಳಾಂಗಣ ಜಿಮ್

ಸರ್ವಾಂಗಿಣ ಪ್ರಗತಿಗೆ ದೈಹಿಕ ಶಿಕ್ಷಣ ಹಾಗೂ ಚಟುವಟಿಕೆಗೆ ಹೆಚ್ಚಿನ ಮಹತ್ವವನ್ನು ಹೊಂದಿದ್ದು, ಒಳಾಂಗಣ ಮತ್ತು ಹೊರಾಂಗಣ ಜಿಮ್, ಪ್ರತ್ಯೇಕ ಆಟದ ಮೈದಾನಗಳನ್ನು ಒಳಗೊಂಡಿವೆ.

ವಿಜ್ಞಾನ ಪ್ರಯೋಗಾಲಯ

             ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ  ಮನೋಭಾವ ಬೆಳಸಲು ಹಾಗೂ ಪ್ರಯೋಗಾತ್ಮಕ ಶಿಕ್ಷಣ ನೀಡಲು ಸುವ್ಯವಸ್ಥಿತವಾದ ವಿಜ್ಞಾನ ಪ್ರಯೋಗಾಲಯ ಇದೆ. ಹಾಗೂ ವಿವಿಧ ರೀತಿಯ ವಿಜ್ಞಾನದ  ಮಾದರಿಗಳನ್ನು  ಹೊಂದಿದೆ. ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಪ್ರಯೋಗವನ್ನು ಮಾಡಲು ಅವಕಾಶ ಒದಗಿಸಲಾಗಿದೆ .

 

 

ಭೋಜನಾಲಯ

ಭೋಜನಾಲಯವು ಸುವ್ಯವಸ್ಥಿತ ಆಸನಗಳನ್ನು ಒಳಗೊಂಡಿದ್ದು ಇಲಾಖಾ ಮೆನುವಿನಂತೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಗುಣಮಟ್ಟದ  ರುಚಿ ಹಾಗೂ ಶುಚಿಯಾದ ಆಹಾರವನ್ನು ನೀಡಲಾಗುತ್ತದೆ.

ಪ್ರಾಂಶುಪಾಲರ ಕಾರ್ಯಾಲಯ

ಶಾಲೆಯ ಸರ್ವಾಂಗೀಣ ಪ್ರಗತಿಯ ಜವಾಬ್ದಾರಿಯನ್ನು ಹೊತ್ತು ಪ್ರಾಂಶುಪಾಲರು ಮತ್ತು ಅನುಭವಿ ನುರಿತ ಬೊಧಕರನ್ನು ಶಾಲೆ ಒಳಗೊಂಡಿದೆ. ಪ್ರಾಂಶುಪಾಲರ ಕಛೇರಿಯು ಪ್ರಾಂಶುಪಾಲರ ಆಸನ ವ್ಯವಸ್ಥೆ, ಕಂಪ್ಯೂಟರ್ ಕಪಾಟುಗಳು ಹಾಗೂ ಸಿ.ಸಿ.ಟಿ.ವಿ.ವೀಕ್ಷಣಾ ಘಟಕಗಳನ್ನು ಒಳಗೊಂಡಿದೆ. 

ಸಿಬ್ಬಂದಿ ಕೊಠಡಿಯು ಸುಸಜ್ಜಿತವಾಗಿದ್ದು, ಪ್ರತ್ಯೇಕ ಆಸನ ವ್ಯವಸ್ಥೆ ಹಾಗೂ ಪ್ರತ್ಯೇಕ ಕಪಾಟಿನ ವ್ಯವಸ್ಥೆ ಒಳಗೊಂಡಿದೆ.

 

ಮೌಲಾನಾ ಆಜಾದ್ ಭವನದ ಒಳನೋಟ.

ಉತ್ತಮ ಗುಣಮಟ್ಟದ ಶಬ್ದದ ವ್ಯವಸ್ಥೆ ಹೊಂದಿರುವ ವೇದಿಕೆ

 

ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರ ವಸತಿ ಗೃಹಗಳು                 

ಪ್ರಾರ್ಥನ ಮಂದಿರ : ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಗಿನ ಪ್ರಾರ್ಥನೆ ಮತ್ತು ಯೋಗಾಸನ ಮಾಡುವ ಸ್ಥಳ

 

 

ಇತ್ತೀಚಿನ ನವೀಕರಣ​ : 13-12-2021 01:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಮನಗರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080