ಅಭಿಪ್ರಾಯ / ಸಲಹೆಗಳು

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಸಹಿತ ಪದವಿ ಪೂರ್ವ ಕಾಲೇಜು ರಾಮನಗರ ತಾಲ್ಲೂಕು

 

ಕ್ರಸಂ

ವಸತಿ ಕಾಲೇಜು ವಿಳಾಸ

ತಾಲ್ಲೂಕು

ವಿಧ

ಮಾಧ್ಯಮ

6 ನೇ ತರಗತಿ ದಾಖಲಾತಿ

ಐಚ್ಚಿಕ

ಮೋಬೈಲ್ ಸಂಖ್ಯೆ

1

ಮೊರಾರ್ಜಿ ದೇಸಾಯಿ ವಸತಿ ಸಹಿತ ಪದವಿ ಪೂರ್ವ ಕಾಲೇಜು,  ಪಿ.ಯಸ್.ವಿ ನಗರ ಯಾರಬ್ನಗರ ರಾಮನಗರ ಟೌನ್

ರಾಮನಗರ

ಹೆಣ್ಣು

ಆಂಗ್ಲ

160

ಪಿ.ಸಿ.ಎಂ.ಬಿ / ಪಿ.ಸಿ.ಎಂ.ಸಿ

8880005415

ಕಾಲೇಜಿನ ಬಗ್ಗೆ ಸಂಕ್ಷಿಪ್ತ ಮಾಹಿತಿ

https://dom.karnataka.gov.in/ramanagara/public/storage/pdf-files/Building.PNG

ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ, ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿಪೂರ್ವ ವಸತಿ ಕಾಲೇಜು. ರಾಮನಗರ ಜಿಲ್ಲೆಯ ಕುರಿತಾದ ಮಾಹಿತಿ ಇಂತಿದೆ.

“ರೇಷ್ಮೇ ನಗರ” ಎಂದು ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿದೆ. ರಾಮನಗರವು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು ರಣಹದ್ದುಗಳ ಬೀಡಾಗಿದೆ. ಈ ಜಿಲ್ಲೆಯು ಕಲೆ ಮತ್ತು ಸಂಗೀತಕ್ಕೆ ಹೆಸರುವಾಸಿಯಾಗಿದೆ. ರಾಮನಗರ ಜಿಲ್ಲೆಯ ಪಿ.ಎಸ್.ವಿ ನಗರದಲ್ಲಿ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿಪೂರ್ವ ವಸತಿ ಕಾಲೇಜು ಎಂಬ ಹೆಸರಿನಿಂದ ಪ್ರಸ್ತುತವಾಗಿ ನಮ್ಮ ಕಾಲೇಜು ಕಾರ್ಯನಿರ್ವಹಿಸುತ್ತಿದೆ.

೨.೧೭ ಎಕರೆ ವಿಸ್ತೀರ್ಣದಲ್ಲಿರುವ ವಸತಿಯುತ ವಿಜ್ಞಾನ ಸಂಯೋಜನೆಯ(ಪಿ.ಸಿ.ಎಂ.ಬಿ. & ಪಿ.ಸಿ.ಎಂ.ಸಿ) ಕಾಲೇಜು,ಬಾಲಕಿಯರ ವಸತಿ ನಿಲಯ, ಭೋಜನಾಲಯ, ಬೋಧಕ ಬೋಧಕೇತರ ಹಾಗು ಪ್ರಾಂಶುಪಾಲರ ವಸತಿ ಗೃಹಗಳನ್ನು ಒಳಗೊಂಡಿದ್ದು ಸುತ್ತಲು ರಕ್ಷಣಾತ್ಮಕ ಕಾಂಪೌಂಡಿನೊಂದಿಗೆ ಸಿಸಿಟಿವಿ ಕಣ್ಗಾವಲಿನ ವ್ಯವಸ್ಥೆಯನ್ನು ಒಳಗೊಂಡಿದೆ.

 

ಕಾಲೇಜಿನ ಕಟ್ಟಡ

https://dom.karnataka.gov.in/ramanagara/public/storage/pdf-files/B2.PNG

ಕಾಲೇಜು ಪ್ರಾಂಶುಪಾಲರ ಕಛೇರಿಯೊಂದಿಗೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಶಾಖೆಗಳೊಂದಿಗೆ ವಿಶಾಲವಾದ ತರಗತಿ ಕೊಠಡಿಗಳು, ತಂತ್ರಜ್ಞಾನಯುಕ್ತ ಕಲಿಕೆಗಾಗಿ ಕಂಪ್ಯೂಟರ್‌ ಲ್ಯಾಬ್‌, ಇ ಲರ್ನಿಂಗ್‌ ಯುಕ್ತ ಡಿಜಿಟಲ್‌ ಲ್ಯಾಬ್‌,ಪ್ರಯೋಗಾತ್ಮಕ ಕಲಿಕೆಗಾಗಿ ವಿಜ್ಞಾನ ಪ್ರಯೋಗಾಲಯಗಳು ಹಾಗೂ ಪ್ರತೀ ತರಗತಿಯಲ್ಲೂ ದೊಡ್ಡ ಪರದೆಗಳನ್ನೊಳಗೊಂಡ ಗಣಕೀಕೃತ ವ್ಯವಸ್ಥೆಯ ಬೋಧನಾ ಮಾಧ್ಯಮವನ್ನು ಅಳವಡಿಸಲಾಗಿದೆ ಕಾಲೇಜಿನ ಎಲ್ಲಾ ತರಗತಿಗಳ ಕೊಠಡಿಗಳಿಗೂ ಯು.ಪಿ.ಎಸ್‌ ನ ಸೌಲಭ್ಯವಿದ್ದು ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತರಹದ ಅಡಚಣೆಯಾಗದಂತೆ ಕಾಳಜಿವಹಿಸಲಾಗಿದೆ.

 

ಕಾಲೇಜಿನ ಪ್ರಾಂಶುಪಾಲರೊಂದಿಗೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ

https://dom.karnataka.gov.in/ramanagara/public/storage/pdf-files/Staff.PNG

ಕಾಲೇಜಿನ ಸರ್ವಾಂಗೀಣ ಪ್ರಗತಿಯ ಜವಾಬ್ದಾರಿಯನ್ನು ಹೊತ್ತ ಪ್ರಾಂಶುಪಾಲರು ಮತ್ತು ಅನುಭವಿ ಹಾಗು ನುರಿತ ಬೋಧಕರನ್ನು ಕಾಲೇಜು ಒಳಗೊಂಡಿದೆ.ಪ್ರಾಂಶುಪಾಲರ ಕೊಠಡಿಯು ಆಕರ್ಷಕವಾಗಿದ್ದು ಕಂಪ್ಯೂಟರ್‌ ಕಪಾಟು, ಸಿ.ಸಿ.ಟಿ.ವಿ ದೃಶ್ಯಾವಳಿಗಳ ವೀಕ್ಷಣಾ ಘಟಕಗಳನ್ನು ಒಳಗೊಂಡಿದೆ. ಸಿಬ್ಬಂದಿ ಕೊಠಡಿಯು ಸುಸಜ್ಜಿತವಾಗಿದ್ದು ಪ್ರತ್ಯೇಕ ಆಸನಗಳ ವ್ಯವಸ್ಥೆ ಹಾಗು ಕಪಾಟಿನ ವ್ಯವಸ್ಥೆ ಒಳಗೊಂಡಿದೆ.

 

ತರಗತಿ ಕೊಠಡಿಗಳು

https://dom.karnataka.gov.in/ramanagara/public/storage/pdf-files/Class.PNG

ವಿಶಾಲವಾದ ತರಗತಿ ಕೊಠಡಿಗಳು ಗ್ರೀನ್‌ ಬೋರ್ಡ್ ಗಳು, ಸ್ಮಾರ್ಟ್‌ ಬೋರ್ಡ್ ಗಳು ಅಂತರ್ಜಾಲ ವ್ಯವಸ್ಥೆಯುಳ್ಳ ಪ್ರೊಜೆಕ್ಟರ್‌ ಗಳ ವ್ಯವಸ್ಥೆಯಿದ್ದು ಪ್ರತೀ ತರಗತಿಯಲ್ಲು ೫೦ ಆಸನಗಳ ವ್ಯವಸ್ಥೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಬೋಧನೆಯನ್ನು ಗ್ರಹಿಸಲು ಗಾಳಿ,ಬೆಳಕಿನಿಂದ ಕೂಡಿದ ಅನುಕೂಲಕರವಾದ ವಾತಾವರಣವನ್ನು ತರಗತಿ ಕೊಠಡಿಗಳು ಒಳಗೊಂಡಿವೆ.

 

ಸುಸಜ್ಜಿತವಾದ ಪ್ರಯೋಗಾಲಯಗಳು

https://dom.karnataka.gov.in/ramanagara/public/storage/pdf-files/Lab.PNG

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಕಾರ್ಯಕಾರಣವನ್ನು ಅರಿತುಕೊಳ್ಳುವಂತೆ ಪ್ರಾತ್ಯಕ್ಷಿಕೆತೋರಿಸುವ ಸುಸಜ್ಜಿತವಾದ ಪ್ರಯೋಗಾಲಯಗಳು

https://dom.karnataka.gov.in/ramanagara/public/storage/pdf-files/EQ.PNG

ಅನ್ವಯಿಕ ಕಲಿಕೆ ಮತ್ತು ಪ್ರಾಯೋಗಿಕ ಕಲಿಕೆಗಳು ಇಂದಿನ ಸ್ಪರ್ಧಾತ್ಮಕ ಕಲಿಕೆಗೆ ಆಧಾರಸ್ತಂಭವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಕಾಲೇಜು ಉನ್ನತ ಮಟ್ಟದ ವಿಜ್ಞಾನ ಪ್ರಯೋಗಾಲಯಗಳನ್ನ ಹೊಂದಿದೆ.ಈ ಪ್ರಯೋಗಾಲಯಗಳು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ್ದು ನಾವಿನ್ಯಯುತವಾದ ಉಪಕರಣಗಳು,ಚಾರ್ಟ್‌ ಗಳು,ರಾಸಾಯನಿಕಗಳು ಮತ್ತು ಕಪಾಟುಗಳನ್ನು ಒಳಗೊಂಡಿದೆ. ಪ್ರಾಯೋಗಿಕ ಕಲಿಕೆಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ವಿಜ್ಞಾನ ಪ್ರಪಂಚದ ಕೌತುಕಗಳನ್ನು ಪ್ರೊಜೆಕ್ಟರ್‌ಗಳ ಮೂಲಕ ತೆರೆದಿಡಲಾಗುತ್ತದೆ.

 

ಸ್ಮಾರ್ಟ್‌ ಕ್ಲಾಸ್‌ ಕೊಠಡಿ ಮತ್ತು ಡಿಜಿಟಲ್‌ ಗ್ರಂಥಾಲಯ

https://dom.karnataka.gov.in/ramanagara/public/storage/pdf-files/Digi.PNG

ನಾವಿನ್ಯಯುತ ಬೋಧನೆಗೆ ಹೆಚ್ಚು ಪ್ರಾಶಸ್ತ್ಯ ಹಾಗು ತಂತ್ರಜ್ಞಾನಯುಕ್ತ ಇ-ಕ್ಲಾಸ್‌ ರೂಂಗಳು ಬೋಧನೆಗಾಗಿ ಲಭ್ಯವಿದೆ. ಹೊಸ ತಂತ್ರಜ್ಞಾನ ಕಲಿಕೆಗೆ ಪೂರಕವಾದ ಕಂಪ್ಯೂಟರ್‌ ಲ್ಯಾಬ್‌, ಡಿಜಿಟಲ್‌ ಲ್ಯಾಬ್‌, ವಿಜ್ಞಾನ ಪ್ರಯೋಗಾಲಯಗಳು ಮತ್ತು ಸ್ಮಾರ್ಟ್‌ ಕ್ಲಾಸ್‌ಗಳ ನಿರಂತರ ಬಳಕೆಯೂ ಸಹ ಮಕ್ಕಳಲ್ಲಿ ಭೌದ್ಧಿಕ ಬೆಳವಣಿಗೆಗೆ ಪೂರಕವಾಗಿದೆ.

 

ಹೊರಾಂಗಣ ಜಿಮ್

https://dom.karnataka.gov.in/ramanagara/public/storage/pdf-files/gym.PNG

ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಪ್ರಗತಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ಹೊರಾಂಗಣ ಜಿಮ,ಆಟದ ಮೈದಾನಗಳನ್ನು ಒಳಗೊಂಡಿದೆ. “Sound mind in Sound Body”  ಎಂಬಂತೆ ಕ್ರೀಡಾ ಚಟುವಟಿಕೆಗಳಲ್ಲಿ ಸತತವಾಗಿ ಅಭ್ಯಾಸ ಮಾಡಲು ಅನುಕೂಲಕರವಾಗಿದೆ.

 

ಕಾಲೇಜಿನ ಕ್ರೀಡಾ ಸಾಧನೆ

https://dom.karnataka.gov.in/ramanagara/public/storage/pdf-files/Sports.PNG

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಹತ್ತು ಹಲವು ಕ್ರೀಡೆಗಳಲ್ಲಿ ಆಸಕ್ತಿದಾಯಕವಾಗಿ ಭಾಗವಹಿಸಿ ಹೋಬಳಿ,ತಾಲ್ಲೂಕು,ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತರವಾದ ಸಾಧನೆಗೈದಿದ್ದಾರೆ.

  ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸಿ ಎಲ್ಲಾ ಸ್ಥರಗಳಲ್ಲೂ ಬಹುಮಾನ ಪಡೆದಿರುತ್ತಾರೆ ಹಾಗೂ ನಮ್ಮ ಕಾಲೇಜಿಗೆ ಗೌರವ,ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಉಪನ್ಯಾಸಕರೇ ವಿದ್ಯಾಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅಭ್ಯಸಿಸಿ ಸ್ಪೂರ್ತಿ ನೀಡಿರುತ್ತಾರೆ.

 

ಗ್ರಂಥಾಲಯ

https://dom.karnataka.gov.in/ramanagara/public/storage/pdf-files/lib.PNG

ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ವಿಸ್ತರಿಸಿಕೊಳ್ಳುವ ಸದುದ್ದೇಶದಿಂದ ಸಾಂಪ್ರದಾಯಿಕ ಗ್ರಂಥಾಲಯದ ವ್ಯವಸ್ಥೆಯಿದ್ದು ಇಲ್ಲಿ ವಿಶಾಲವಾದ ಮತ್ತು ಸಮೃದ್ಧವಾದ ವಾತಾವರಣವನ್ನು ಹೊಂದಿದೆ.ಹಾಗಾಗಿ ಈ ಗ್ರಂಥಾಲಯವು ಕಾಲೇಜಿನ ಮತ್ತೊಂದು ಹೆಮ್ಮೆಯಾಗಿರುತ್ತದೆ. ಗ್ರಂಥಾಲಯವು ಕನ್ನಡ,ಇಂಗ್ಲಿಷ್‌,ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿರುವ ಹಲವು ಪುಸ್ತಕಗಳನ್ನು ಪರಾಮರ್ಶನ ಪುಸ್ತಕಗಳನ್ನು ಹಾಗೂ ಎಲ್ಲಾ ರೀತಿಯ ಪುಸ್ತಕಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಜ್ಞಾನದಾಹವನ್ನು ಹಿಂಗಿಸಲು ನೆರವಾಗಿದೆ.

 

ಭೋಜನಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ

https://dom.karnataka.gov.in/ramanagara/public/storage/pdf-files/D & W.PNG

ಕಾಲೇಜು ಸಂಕೀರ್ಣದಲ್ಲಿ ವಿಶಾಲವಾದ ಭೋಜನಾಲಯದ ವ್ಯವಸ್ಥೆಯಿದ್ದು, ಎಲ್ಲಾ ವಿದ್ಯಾರ್ಥಿಗಳು ಏಕಕಾಲದಲ್ಲಿ ಆಹಾರ ಸೇವಿಸಬಹುದಾಗಿದೆ. ಭೋಜನಾಲಯದಲ್ಲಿ ಶುಭ್ರವಾದ ವಾತಾವರಣವಿದ್ದು ನುರಿತ ಹಾಗು ಅನುಭವಿ ಅಡುಗೆ ಸಿಬ್ಬಂದಿಗಳಿಂದ ಶುಚಿಯಾದ ರುಚಿಯಾದ ಆಹಾರವನ್ನು ಖಾದ್ಯ ಫಲಕದ ಪ್ರಕಾರವೇ ದಿನವೂ ಸಿದ್ದಪಡಿಸಲಾಗುತ್ತದೆ. ಕುಡಿಲು ಶುದ್ಧಜಲ ಘಟಕದ ವ್ಯವಸ್ಥೆಯನ್ನು ಭೋಜನಾಲಯದ ಸಮೀಪವೇ ಸ್ಥಾಪಿಸಲಾಗಿದೆ ಇದರಿಂದ ಸಿಬ್ಬಂದಿಗಳು,ವಿದ್ಯಾರ್ಥಿಗಳು ಎಲ್ಲರಿಗೂ ಪರಿಶುದ್ಧವಾದ ನೀರನ್ನು ಪೂರೈಸಲಾಗುತ್ತಿದೆ.

 

ಬಾಲಕಿಯರ ವಸತಿಗೃಹಗಳ ಸಮುಚ್ಚಯ

https://dom.karnataka.gov.in/ramanagara/public/storage/pdf-files/G H.PNG

ಕಾಲೇಜು ಸಂಕೀರ್ಣದಲ್ಲಿ ವಿಶೇಷ ಸೌಲಭ್ಯಗಳುಳ್ಳ ವಸತಿಗೃಹಗಳಿದ್ದು 160 ವಿದ್ಯಾರ್ಥಿಗಳಿಗೂ 24*7 ಸಿ.ಸಿ.ಟಿ.ವಿ ಕಣ್ಗಾವಲಿನ ವ್ಯವಸ್ಥೆಯಿದೆ. ತಲಾ 11 ಕೋಣೆಗಳಿದ್ದು ಪ್ರತೀ ಕೋಣೆಯಲ್ಲಿಯೂ ಪ್ರತ್ಯೇಕ ಹಾಸಿಗೆ,ಮಂಚ ಅಭ್ಯಾಸದ ಟೇಬಲ್‌ ಮತ್ತು ಕಪಾಟಿನ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯದಲ್ಲಿ ಸೋಲಾರ್‌ ಬಿಸಿ ನೀರು,‌ ಯು.ಪಿ.ಎಸ್ ವ್ಯವಸ್ಥೆಯಿದೆ. ಪ್ರತೀ ಮಾಹೆಯಾನ ಹೆಣ್ಣು ಮಕ್ಕಳಿಗೆ ಸೋಪ್ ಕಿಟ್‌,ಶುಚಿ ಸಂಭ್ರಮ ಕಿಟ್‌ ವಿತರಿಸಲಾಗುವುದು.

 

ಪ್ರಾಂಶುಪಾಲರ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರಿಗೆ ವಸತಿ ಗೃಹಗಳು

https://dom.karnataka.gov.in/ramanagara/public/storage/pdf-files/q.PNG

ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿಗಳಿಗೆ ಕಾಲೇಜಿನ ಆವರಣದಲ್ಲೇ ವಸತಿ ವ್ಯವಸ್ಥೆಯಿದ್ದು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಯಾವಾಗಲೂ ಎಲ್ಲಾ ಸಿಬ್ಬಂದಿಗಳ ಲಭ್ಯತೆಯಿರುತ್ತದೆ.

ಎಲ್ಲಾ ಸಿಬ್ಬಂದಿಗಳಿಗೂ ಅನುಕೂಲವಾಗುವಂತೆ ಸೋಲಾರ್‌ ಬಿಸಿ ನೀರು,‌24*7 ವಿದ್ಯುತ್‌ ,ಕುಡಿಯಲು ಶುದ್ಧವಾದ ನೀರು ಇತ್ಯಾದಿ ವ್ಯವಸ್ಥೆಯಿರುವ ಪ್ರತ್ಯೇಕ ವಸತಿ ಗೃಹಗಳನ್ನು ನೀಡಲಾಗಿದೆ.

ವಸತಿ ಗೃಹಗಳ ಸಂಖ್ಯೆ: ಪ್ರಾಂಶುಪಾಲರ ವಸತಿ ಗೃಹ-01

ಬೋಧಕ-ಬೋಧಕೇತರ ಸಿಬ್ಬಂದಿಗಳ ವಸತಿಗೃಹಗಳು-16

 

ಕಾಲೇಜಿಗೆ ದಾಖಲಾದ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಬೋಧನಾ ಸಾಮಾಗ್ರಿಗಳು ಹಾಗೂ ಇತರೆ ಪರಿಕರಗಳು

https://dom.karnataka.gov.in/ramanagara/public/storage/pdf-files/Book.PNG

ವಸತಿ ಕಾಲೇಜಿಗೆ ದಾಖಲಾಗುವ ಪ್ರತಿಯೊಂದು ವಿದ್ಯಾರ್ಥಿಗೂ ಅಧ್ಯಯನಕ್ಕೆ ಮೂಲಭೂತಸೌಕರ್ಯಗಳಾದ ಲೇಖನ ಸಾಮಾಗ್ರಿಗಳು,ಪುಸ್ತಕಗಳು, ಮಾರ್ಗದರ್ಶಿಕಗಳು ಕುಳಿತು ಓದಲು ಅನುಕೂಲವಾಗುವಂತೆ ಮೇಜು ಮತ್ತು ಕುರ್ಚಿಗಳನ್ನು ಒದಗಿಸಲಾಗಿದೆ ಹಾಗೆಯೇ ಮಂಚ,ಹಾಸಿಗೆ,ದಿಂಬು, ಬೆಡ್‌ ಶೀಟ್‌, ಶೂಸ್‌, ಸಾಕ್ಸ್‌, ಜೊತೆಗೆ ಶೂ ಪಾಲೀಷಿಂಗ್‌ ಮಷೀನ್‌, ವಾಷಿಂಗ್‌ ಮಷೀನ್‌,ನ್ಯಾಪ್ಕಿನ್‌ ಬರ್ನಿಂಗ್‌ ಮಷೀನ್‌, ಬಟ್ಟೆ ಒಣಗಿಸುವ ಸ್ಟಾಂಡ್...ಇನ್ನೂ ಮುಂತಾದ ಅನುಕೂಲಗಳನ್ನು ಇಲಾಖೆಯು ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಏಳ್ಗೆಗೆ ಒದಗಿಸುತ್ತಿದೆ.

 

ಇತ್ತೀಚಿನ ನವೀಕರಣ​ : 06-12-2021 01:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಮನಗರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080