Feedback / Suggestions

Buddist

ಬೌದ್ಧ ವಿಹಾರ (ದೇವಾಲಯ)ಗಳಿಗೆ ಸಮುದಾಯದ ಅಭಿವೃದ್ಧಿ

     ಕರ್ನಾಟಕ ರಾಜ್ಯದಲ್ಲಿನ ಬೌದ್ಧ ವಿಹಾರ (ದೇವಾಲಯ)ಗಳಿಗೆ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯನುದಾನ ಮಂಜೂರು ಮಾಡುವ ಈ ಯೋಜನೆಯನ್ನು ಆದೇಶಕ್ಕೆ “ಅನುಬಂಧ-ಎ”ರಲ್ಲಿ ಲಗತ್ತಿಸಿರುವ ಮಾರ್ಗಸೂಚಿಗಳೊಂದಿಗೆ ಜಾರಿಗೆ ತರಲು ಮಂಜೂರಾತಿ ನೀಡಲಾಗಿದೆ.

 

ಅನುಬಂಧ-

ಕರ್ನಾಟಕ ರಾಜ್ಯದಲ್ಲಿನ ಬೌದ್ಧ ವಿಹಾರ (ದೇವಾಲಯ)ಗಳಿಗೆ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಾನುದಾನ ಬಿಡುಗಡೆ ಮಾಡಲು ಮಾರ್ಗಸೂಚಿಗಳು.

ಕರ್ನಾಟಕ ರಾಜ್ಯಾದ್ಯಂತ ಬೌದ್ಧ ಅಲ್ಪಸಂಖ್ಯಾತರ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಲ್ಲಿ ಬೌದ್ಧ ವಿಹಾರ (ದೇವಾಲಯ)ಗಳಗೂ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರ ಕೈಗೊಳ್ಳುವುದರ ಮೂಲಕ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆಯೊಂದಿಗೆ ಇವುಗಳನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡುವುದು ಅಗತ್ಯವೆಂದು ಕಂಡು ಬಂದಿದೆ.

ಈ ಉದ್ದೇಕ್ಕಾಗಿ ಅರ್ಹ ಬೌದ್ಧ ವಿಹಾರ (ದೇವಾಲಯ)ಗಳಿಗೆ ಸಹಾಯಾನುದಾನವನ್ನು ನೀಡಲು ರಾಜ್ಯದ ಆಯವ್ಯದಲ್ಲಿ ಅನುದಾನ ನಿಗದಿ ಪಡಿಸಲಾಗಿದೆ. ಸದರಿ ಕಾರ್ಯಕ್ರಮದಡಿ ಇಚ್ಚೆಯುಳ್ಳ ಬೌದ್ಧ ವಿಹಾರ (ದೇವಾಲಯ) ಗಳಿಗೂ ವ್ಯವಸ್ಥಾಪನ/ ಜೀರ್ಣೋದ್ಧಾರ ಸಮಿತಿಯವರು ಅನುದಾನ ಪಡೆಯಲು ಮುಂದೆ ಬಂದಲ್ಲಿ ಅಂಥಹ ಬೌದ್ಧ ವಿಹಾರ (ದೇವಾಲಯ) ಗಳಿಗೆ ಅನುದಾನ ಬಿಡುಗಡೆ ಮಾಡಲು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

 

ಅರ್ಹತೆಗಳು

 

  • ನಿಗದಿತ ನಮೂನೆಯಲ್ಲಿ ಅರ್ಜಿ (ನಮೂನೆ-1).

  • ದೇವಾಲಯ/ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ (ಭಾರತೀಯ ನ್ಯಾಸ ಅಧಿನಿಯಮ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಾವಣೆಯಾಗಿರಬೇಕು ಅಥವಾ ಸಂಬಂಧಪಟ್ಟ ತಾಲ್ಲೂಕಿನ ತಹಸಿಲ್ದಾರರಿಂದ ವಿಹಾರ(ದೇವಾಲಯ) ಇರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. (ನಮೂನೆ-2)

  • ಒಂದು ವರ್ಷದ ಆಡಿಟ್ ರಿಪೋರ್ಟ (ಚಾಟ್ಟೇಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು) ವಾರ್ಷಿಕ ಲೆಕ್ಕ ಪತ್ರ ವರದಿ.

  • ಅಂದಾಜು ಪಟ್ಟಿ (ದೇವಸ್ಥಾನದ ವ್ಯಾಪ್ತಿಗೆ ಬರುವ ಸ್ಥಳಿಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು)

  • ದೇವಾಲಯ/ ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.

  • ದೇವಾಲಯ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ.

  • ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆರವರ ಸ್ಥಳ ತನಿಖಾ ವರದಿ. (ನಮೂನೆ-3)

  • ದೇವಾಲಯದ ಛಾಯಾ ಚಿತ್ರಗಳನ್ನು ಹಿಂಬದಿಯಲ್ಲಿ ಜಿಲ್ಲಾ ಅಧಿಕಾರಿಗಳು ದೃಢೀಕರಿಸಿರಬೇಕು.

  • ಮುಚ್ಚಳಿಕೆ ಪತ್ರ.

 

Last Updated: 05-08-2021 03:20 PM Updated By: DISTRICT OFFICER


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : MINORITY WELFARE DEPARTMENT VIJAYAPURA
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080