ಅಭಿಪ್ರಾಯ / ಸಲಹೆಗಳು

ಸಿಖ್

ಸಿಖ್ ಸಮುದಾಯದ ಗುರುದ್ವಾರಗಳ ನವೀಕರಣ/ದುರಸ್ಥಿ/ಜೀರ್ಣೋದ್ಧಾರಕ್ಕಾಗಿ ಸಹಾಯಧನ

      ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: MWD 207 MDS 2017, ದಿನಾಂಕ: 29-05-2017 ಆದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಸಿಖ್ ಸಮುದಾಯದ ಗುರುದ್ವಾರಗಳ ದುರಸ್ಥಿ/ ಜೀರ್ಣೋದ್ಧಾರ/ ನವೀಕರಣಕ್ಕಾಗಿ ಸಹಾಯಾನುದಾನವನ್ನು  ನೀಡಲು 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯದಲ್ಲಿನ ಸಿಖ್ ಸಮುದಾಯದ ಗುರುದ್ವಾರಗಳ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಾನುದಾನ ಬಿಡುಗಡೆ ಮಾಡಲು ಮಾರ್ಗಸೂಚಿಗಳು.

ಕರ್ನಾಟಕ ರಾಜ್ಯಾದಲ್ಲಿನ ಸಿಖ್ ಅಲ್ಪಸಂಖ್ಯಾತರ ಸಮುದಾಯದ ಗುರುದ್ವಾರಗಳ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರವನ್ನು  ಕೈಗೊಳ್ಳುವ ಮೂಲಕ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆಗಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಕಾಪಾಡುವುದು ಅಗತ್ಯವೆಂದು ಕಂಡುಬಂದಿರುವುದರಿಂದ ಈ ಉದ್ದೇಕ್ಕಾಗಿ ಅರ್ಹ ಗುರುದ್ವಾರಗಳಿಗೆ ಸಹಾಯಾನುದಾನವನ್ನು ನೀಡಲು ಉದ್ದೇಶಿಸಲಾಗಿದೆ.

ಅರ್ಹತೆಗಳು

  • ನಿಗದಿತ ನಮೂನೆಯಲ್ಲಿ ಅರ್ಜಿ (ನಮೂನೆ-1).

  • ದೇವಾಲಯ/ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ (ಭಾರತೀಯ ನ್ಯಾಸ ಅಧಿನಿಯಮ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಾವಣೆಯಾಗಿರಬೇಕು ಅಥವಾ ಸಂಬಂಧಪಟ್ಟ ತಾಲ್ಲೂಕಿನ ತಹಸಿಲ್ದಾರರಿಂದ ದೇವಾಲಯ/ಬಸದಿ ಇರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. (ನಮೂನೆ-2)

  • ಒಂದು ವರ್ಷದ ಆಡಿಟ್ ರಿಪೋರ್ಟ (ಚಾಟ್ಟೇಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು) ವಾರ್ಷಿಕ ಲೆಕ್ಕ ಪತ್ರ ವರದಿ.

  • ಅಂದಾಜು ಪಟ್ಟಿ (ದೇವಸ್ಥಾನದ ವ್ಯಾಪ್ತಿಗೆ ಬರುವ ಸ್ಥಳಿಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು).

  • ದೇವಾಲಯ/ ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.

  • ದೇವಾಲಯ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ.

  • ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆರವರ ಸ್ಥಳ ತನಿಖಾ ವರದಿ. (ನಮೂನೆ-3)

  • ಗುರುದ್ವಾರ ಛಾಯಾ ಚಿತ್ರಗಳನ್ನು ಹಿಂಬದಿಯಲ್ಲಿ ಜಿಲ್ಲಾ ಅಧಿಕಾರಿಗಳು ದೃಢೀಕರಿಸಿರಬೇಕು.

  • ವ್ಯವಸ್ಥಾಪನ ಸಂಸ್ಥೆಯಿಂದ ಪಡೆದ ಮುಚ್ಚಳಿಕೆ ಪತ್ರ.

 

ಇತ್ತೀಚಿನ ನವೀಕರಣ​ : 05-08-2021 03:16 PM ಅನುಮೋದಕರು: DISTRICT OFFICER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080