ಅಭಿಪ್ರಾಯ / ಸಲಹೆಗಳು

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು

 

 

ಅಲ್ಪಸಂಖ್ಯಾತರ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ರಾಜ್ಯಾದ್ಯಾಂತ 257 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹೀಗೆ 159 ಬಾಲಕರು, 98 ಬಾಲಕಿಯರು ಒಟ್ಟು 257 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 08 ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.

 

 ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಕೆಳಕಂಡ ಸವಲತ್ತುಗಳನ್ನು ನೀಡಲಾಗುತ್ತಿದೆ.

 • ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ. 1,600/-ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರ ನೀಡಿಕೆ.

 • ಉಚಿತ ವಸತಿ ಸೌಕರ್ಯ.

 • ಪ್ರತಿ ವಿದ್ಯಾರ್ಥಿನಿಲಯಕ್ಕೆ 10 ತಿಂಗಳ ಅವಧಿಗೆ ಸಾದಿಲ್ವಾರು ವೆಚ್ಚ ಭರಿಸುವುದು.

 • ಶೌಚಾಲಯಗಳ ಸ್ವಚ್ಛತೆಗಾಗಿ ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ. 1,250/-ರಂತೆ 10 ತಿಂಗಳಿಗೆ.

 • ಪ್ರತಿ ನಿಲಯಕ್ಕೆ 2 ದಿನಪತ್ರಿಕೆಗಳ ಪೂರೈಕೆಗಾಗಿ (ಒಂದು ಆಂಗ್ಲ ಭಾಷೆ ಹಗೂ ಒಂದು ಕನ್ನಡ ದಿನಪತ್ರಿಕೆಗಳು ವಾಸ್ತವಿಕ ವೆಚ್ಚದಲ್ಲಿ)

 • ಕ್ರೀಡಾ ಸಾಮಗ್ರಿಗಳು ಪ್ರತಿ ವರ್ಷಕ್ಕೋಮ್ಮೆ ಪ್ರತಿ ನಿಲಯಕ್ಕೆ ಒಂದು ಸೆಟ್ ವಾಸ್ತವ ದರದಲ್ಲಿ.

 

ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು.

 1. ವಿದ್ಯಾರ್ಥಿಗಳು ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ್ದು ರಾಜ್ಯದ ನಿವಾಸಿಯಾಗಿರಬೇಕು.

 2. ವಿದ್ಯಾರ್ಥಿಗಳು ಸರ್ಕಾರಿ ಅಥವಾ ಅಂಗೀಕೃತ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರಬೇಕು.

 3. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು ರೂ. 44,500/-ಗಳು ಹಾಗೂ ಪ್ರವರ್ಗ-1ಕ್ಕೆ ರೂ. 1.00 ಲಕ್ಷಕ್ಕೆ ಮೀರಬಾರದು.

 4. ಪ್ರತಿ ವಿದ್ಯಾರ್ಥಿನಿಲಗಳಲ್ಲಿ ಶೇ. 75 ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಜನಾಂಗದ ವಿದ್ಯಾರ್ಥಿಗಳಿಗೆ ಹಾಗೂ ಶೇ. 25 ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವುದು.

 5. ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯುವ ಅಭ್ಯರ್ಥಿಗಳು ತಮ್ಮ ಹಿಂದಿನ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.

 6. ವಿದ್ಯಾರ್ಥಿನಿಲಯವನ್ನು ಶೈಕ್ಷಣಿಕ ವರ್ಷದ 10 ತಿಂಗಳ ಅವಧಿಗೆ ನಡೆಸಬೇಕು. 10 ತಿಂಗಳ ನಂತರವು ವಾರ್ಷಿಕ ಪರೀಕ್ಷೆಗಳು ನಡೆದಲ್ಲಿ ಈ ಅವಧಿಯನ್ನು ವಿಸ್ತರಿಸಲಾಗುವುದು.

 7. ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ನಿಯಮಾನುಸಾರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು.

ಕ್ರ.ಸಂ

ತಾಲ್ಲೂಕು

ವಿದ್ಯಾರ್ಥಿ ನಿಲಯಗಳ ಹೆಸರು ಮತ್ತು ವಿಳಾಸ

ಮಂಜೂರಾತಿ ಸಂಖ್ಯೆ

ಬಾಲಕರ/ಕಿಯರ

 

ನಿಲಯ ಪಾಲಕರ ಹೆಸರು ಮತ್ತು ಮೊಬೈಲ ಸಂಖ್ಯೆ

01

ವಿಜಯಪುರ

ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಟೇಕಡೆಗಲ್ಲಿ ಮನಗೂಳಿ ರೋಡ್, ವಿಜಯಪುರ

100

ಬಾಲಕಿಯರ

ಶ್ರೀ ಎಸ್‌. ಎ. ಜಮಾದಾರ (ಪ್ರಭಾರ)

9448986236

02

ವಿಜಯಪುರ

ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, (ಮಹಿಳಾ ವಿಶ್ವವಿದ್ಯಾಲಯ) ತೋರವಿ ಕ್ಯಾಂಪಸ್, ವಿಜಯಪುರ

100

ಬಾಲಕಿಯರ

ಶ್ರೀಮತಿ ಯಮನಾಬಾಯಿ ಹಂಗರಗಿ

7619135484

03

ವಿಜಯಪುರ

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಕೆ.ಕೆ.ಜಿ.ಎಸ್ ರೋಡ್, ಸಕಾಫರೋಜಾ, ವಿಜಯಪುರ

50

ಬಾಲಕರ

ಶ್ರೀ ಗವಿಸಿದ್ದಪ್ಪ ಸಜ್ಜನ

9972782693

04

ವಿಜಯಪುರ

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಭೈರವ ನಗರ, ಅಥಣಿ ರೋಡ್, ವಿಜಯಪುರ  

75

ಬಾಲಕರ

ಶ್ರೀ ರಮೀಜರಾಜಾ ಇನಾಮದಾರ

8310537107

05

ಬಸವನ ಬಾಗೇವಾಡಿ

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಕುಂಟೋಜಿ ಲೇಔಟ, ಬ.ಬಾಗೇವಾಡಿ

50

ಬಾಲಕರ

ಶ್ರೀ ಗವಿಸಿದ್ದಪ್ಪ ಸಜ್ಜನ (ಪ್ರಭಾರ) 

9972782693

06

ಮುದ್ದೇಬಿಹಾಳ

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಪೋಲಿಸ ಠಾಣೆ ಎದುರುಗಡೆ, ಮುದ್ದೇಬಿಹಾಳ

50

ಬಾಲಕರ

ಶ್ರೀ ಸದಾಶಿವ ಕನಸೆ (ಪ್ರಭಾರ)

7619685635

07

ಇಂಡಿ

ಮೆಟ್ರಕ್ ನಂತರದ ಬಾಲಕರ ವಸತಿ ನಿಲಯ, ಆದರ್ಶ ವಿದ್ಯಾಲಯ ಹತ್ತಿರ, ವಿಜಯಪುರ ರಸ್ತೆ, ಇಂಡಿ

50

ಬಾಲಕರ

ಶ್ರೀ ಆನಂದಕುಮಾರ ಕಟವಾಣಿ (ಪ್ರಭಾರ)

9036884925

08

ಸಿಂದಗಿ

ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ, ಜೇವರ್ಗಿ ರಸ್ತೆ ಸಿಂದಗಿ

50

ಬಾಲಕರ

ಶ್ರೀ ಸತೀಶ ಗೋಟುರ (ಪ್ರಭಾರ)

9902556663

ಇತ್ತೀಚಿನ ನವೀಕರಣ​ : 10-08-2021 05:05 PM ಅನುಮೋದಕರು: DISTRICT OFFICER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080