ಅಭಿಪ್ರಾಯ / ಸಲಹೆಗಳು

ಮೌಲಾನಾ ಆಜಾದ ಮಾದರಿ ಶಾಲೆಗಳು

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕರ್ನಾಟಕ ರಾಜ್ಯದಲ್ಲಿ (2017-18ನೇ ಸಾಲಿನಲ್ಲಿ 100 ಹಾಗೂ 2018-19ನೇ ಸಾಲಿನಲ್ಲಿ 100) ಒಟ್ಟು 200 ಶಾಲೆಗಳು ಪ್ರಾರಂಭವಾಗಿವೆ. ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 04 ಮೌಲಾನಾ ಆಜಾದ ಮಾದರಿ ಶಾಲೆಗಳು ಪ್ರಾರಂಭಿಸಲಾಗಿದೆ. ಈ ಶಾಲೆಗಳಲ್ಲಿ ಪ್ರತಿ ತರಗತಿಗೆ 60 ಸಂಖ್ಯಾಬಲದೊಂದಿಗೆ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತದೆ. ಶೇ. 75% ರಷ್ಟು ಅಲ್ಪಸಂಖ್ಯಾತರ ಸಮುದಾಯದ ಹಾಗೂ ಶೇ.25% ಇತರೆ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ. 50% ಮೀಸಲಿರಿಸಲಾಗಿದೆ.

 ಸೌಲಭ್ಯಗಳು:

 • ಈ ಶಾಲೆಗಳು ವಸತಿ ರಹಿತ ಶಾಲೆಗಳಾಗಿವೆ.
 • ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು.
 • ಅಭ್ಯಾಸ ಮಾಡುವ ಪುಸ್ತಕ ಮತ್ತು ಬ್ಯಾಗ್, ನೋಟ್ ಬುಕ್, ಪೆನ್, ಪೆನ್ಸಿಲ್ ಮುಂತಾದ ಸಾಮಗ್ರಿಗಳನ್ನು ಒದಗಿಸಲಾಗುವುದು.
 • ವಿದ್ಯಾರ್ಥಿಗಳಿಗೆ ಉಚಿತ ಯುನಿಫಾರಂ ಮತ್ತು ಶೂ ನೀಡಲಾಗುವುದು.
 • ಆಂಗ್ಲ ಭಾಷೆಯಲ್ಲಿ ಬೋಧನೆ ನೀಡಲಾಗುವುದು.

 ಷರತ್ತುಗಳು :-

 • ಸದರಿ ಶಾಲೆಗಳನ್ನು ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿರುವ ಸರ್ಕಾರಿ ಉರ್ದು ಶಾಲೆ ಅಥವಾ ಕಡಿಮೆ ವಿದ್ಯಾರ್ಥಿಗಳು ಇರುವ ಉರ್ದು ಶಾಲೆಗಳಲ್ಲಿ ಪ್ರಾರಂಭಿಸಲು ಆದ್ಯತೆ ನೀಡುವುದು.
 • ಉರ್ದು ಶಾಲೆ ಲಭ್ಯವಿಲ್ಲದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಖಾಲಿ ಇರುವ ಕಟ್ಟಡದಲ್ಲಿ ಅಥವಾ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸುವುದು.
 • ಪ್ರಥಮ ವರ್ಷದಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಿ ನಂತರ ವರ್ಷಗಳಲ್ಲಿ 10ನೇ ತರಗತಿಯವರೆಗೆ ವಿಸ್ತರಿಸುವುದು.
 • ಸದರಿ ಶಾಲೆಗಳಲ್ಲಿ ಪ್ರತಿ ತರಗತಿಗೆ 60 ಸಂಖ್ಯಾಬಲ ಮಂಜೂರು ಮಾಡಲಾಗಿದ್ದು, ದಾಖಲಾತಿಗಳನ್ನು ಶೇ. 75% ರಷ್ಟು ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಹಾಗೂ ಶೇ. 25% ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ನಿಗದಿಪಡಿಸಿರುವ ಅನುಪಾತದಲ್ಲಿ ಪ್ರವೇಶ ಪಡೆಯುವುದು ಹಾಗೂ ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ. 50% ಮೀಸಲಿರಿಸುವುದು.
 • ಪ್ರತಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶುದ್ಧ ಕುಡಿಯುವ ನೀರಿನ ಘಟಕ, ಟೇಬಲ್, ಚೇರ್, ಲೇಖನ ಸಾಮಗಿ, ಕಂಪ್ಯೂಟರ್, ಪ್ರಿಂಟರ್, ಯು.ಪಿ.ಎಸ್‌ಗಳನ್ನು ಅಳವಡಿಸುವುದು ಸಿ.ಸಿ ಕ್ಯಾಮರ ಅಳವಡಿಸುವುದು ಇತ್ಯಾದಿಗಳನ್ನು ಪೂರೈಸತಕ್ಕದ್ದು.

 

ಕ್ರ ಸಂ

ತಾಲ್ಲೂಕು

ಮೌಲಾನಾ ಆಜಾದ್ ಶಾಲೆಯ ಹೆಸರು

ಪ್ರಾಂಶುಪಾಲರ ಹೆಸರು ಮತ್ತು ಮೊಬೈಲ್ ನಂ

ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ

1

ವಿಜಯಪುರ

ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ ನಂ-01, ಕುಂಬಾರ ಗಲ್ಲಿ, ವಿಜಯಪುರ

ಶ್ರೀಮತಿ ಎ.ಎಸ್.ಕಾಜಿ (ಪ್ರಭಾರ)

8951293112

300

2

ವಿಜಯಪುರ

ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ ನಂ-02, ಹಮೀದ ನಗರ, ವಿಜಯಪುರ

ಶ್ರೀಮತಿ ಎ.ಎಸ್.ಕಾಜಿ (ಪ್ರಭಾರ)

8951293112

300

3

ಮುದ್ದೇಬಿಹಾಳ

ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ, ನಾಲತವಾಡ

ಶ್ರೀ ಗುಲಾಮನಬಿ (ಪ್ರಭಾರ)

9591280287

300

4

ಸಿಂದಗಿ

ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ, ಸಿಂದಗಿ

ಶ್ರೀ ಸಿದ್ದಪ್ಪಾ ಕಾರಿಮುಂಗಿ       (ಪ್ರಭಾರ)

9980952960

300

 

ಇತ್ತೀಚಿನ ನವೀಕರಣ​ : 09-08-2021 01:13 PM ಅನುಮೋದಕರು: DISTRICT OFFICER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080