Feedback / Suggestions

Prime Minister s 15 Point Programs

ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳು

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ ಹೊಸ 15-ಅಂಶಗಳ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತರ ಕೆಲವೊಂದು ಕ್ರಮಗಳನ್ನು ಕೈಗೊಳ್ಳಗಿದೆ. ಕಾರ್ಯಕ್ರಮಗಳ ವೈಶಿಷ್ಟ್ಯತೆಗಳು ಈ ಕೆಳಗಿನಂತಿವೆ.

  1. .ಸಿ.ಡಿ.ಎಸ್ಸೇವೆಗಳು ಸರಿ-ಸಮನಾವಾಗಿ ಲಭ್ಯವಿರುವಂತೆ ಮಾಡುವುದು:

ಅಂಗನವಾಡಿ ಕೇಂದ್ರಗಳ ಕೆಲವೊಂದು ಶೇಕಡಾವಾರು ಪ್ರಮಾಣದಲ್ಲಿ ಕೇಂದ್ರಗಳನ್ನು ಅಲ್ಪಸಂಖ್ಯಾತ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯಲಾಗುವುದು. ಇದರಿಂದಾಗಿ ಯೋಜನೆಯ ಪ್ರಯೋಜನಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ.

 

  1. ಶಾಲಾ-ಶಿಕ್ಷಣಗಳ ಲಭ್ಯತೆಗಳನ್ನು ಹೆಚ್ಚಿಸುವುದು:

ಸರ್ವಶಿಕ್ಷಣ ಅಭಿಯಾನ, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಯೋಜನೆ ಮತ್ತು ಇಂತಹುದೇ ಆದ ಸರಕಾರದ ಇತರ ಯೋಜನೆಗಳಲ್ಲಿ ಕೆಲವೊಂದು ಶೇಕಡಾವಾರು ಶಾಲೆಗಳನ್ನು ಅಲ್ಪಸಂಖ್ಯಾತರ ಜನಸಂಖ್ಯೆ ಸಾಕಷ್ಟಿರುವ ಹಳ್ಳಿಗಳು/ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು.

 

  1. ಉರ್ದು ಕಲಿಸುವುದಕ್ಕಾಗಿ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವುದು:

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಉರ್ದು ಭಾಷೆ ಕಲಿಸುವ ಅಧ್ಯಾಪಕರನ್ನು ನೇಮಕ ಮಾಡಲು ಮತ್ತು ಅಧ್ಯಾಪಕ ಹುದ್ದೆಗಳ ಸಂಖ್ಯೆಗಳನ್ನು ಹೆಚ್ಚಿಸಲು ಕೇಂದ್ರದಿಂದ ಸಹಾಯವನ್ನು ಒದಗಿಸುವುದು.

 

  1. ಮದರಸಾ ಶಿಕ್ಷಣವನ್ನು ಆಧುನೀಕರಿಸುವುದು:

ಪ್ರಾದೇಶಿಕ ಆಧಾರಿತವಾದ ಮತ್ತು ಮದರಸಾಗಳನ್ನು ಆಧುನೀಕರಣಗೊಳಿಸುವ ಕಾರ್ಯಕ್ರಮಗಳನ್ನು ಬಲಪಡಿಸಲಾಗುವುದು ಮತ್ತು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದು.

 

  1. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಪ್ರತಿಭಾವಂತ ವಿದ್ಯಾರ್ಥಿ ವೇತನಗಳನ್ನು ಒದಗಿಸುವುದು:

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್-ಪೂರ್ವದಲ್ಲಿ ಮತ್ತು ಮೆಟ್ರಿಕ್-ನಂತರದಲ್ಲಿ ವಿದ್ಯಾರ್ಥಿ ವೇತನಗಳನ್ನು ನೀಡಲಾಗುವುದು.

 

  1. ಮೌಲಾನಾ ಆಜಾದ್ ಶಿಕ್ಷಣ ಸಂಸ್ಥಾಪನೆ ಮೂಲಕ ಶೈಕ್ಷಣಿಕ ಮೂಲ-ರಚನಾ ಸೌಕರ್ಯಗಳನ್ನು ಸುಧಾರಿಸುವುದು.

ಸಂಸ್ಥಾಪನೆಯನ್ನು ಬಲಪಡಿಸಲಾಗುವುದು ಮತ್ತು ಚಟುವಟಿಕೆಗಳನ್ನು ಹೆಚ್ಚಿಸಲಾಗುವುದು.

 

  1. ಬಡವರಿಗಾಗಿ ಸ್ವಯಂ-ಉದ್ಯೋಗಾವಕಾಶ ಮತ್ತು ವೇತನ ತರುವ ಉದ್ಯೋಗಾವಕಾಶ ಕಾರ್ಯಕ್ರಮಗಳು

ಸ್ವರ್ಣಜಯಂತಿ ಗ್ರಾಮೀಣ ಸ್ವಯಂ-ಉದ್ಯೋಗ ಯೋಜನೆ (ಎಸ್‌ಜಿಎಸ್‌ವೈ),

ಸ್ವರ್ಣ ಜಯಂತಿ ನಗರ ಪ್ರದೇಶ ಸ್ವಯಂ ಉದ್ಯೋಗ ಯೋಜನೆ (ಎಸ್‌.ಜೆ.ಎಸ್‌.ಆರ್‌.ವೈ),

ಸಂಪೂರ್ಣ ಗ್ರಾಮೀಣ ಉದ್ಯೋಗವಕಾಶ ಯೋಜನೆ (ಎಸ್‌.ಜಿ.ಆರ್‌.ವೈ) ಮೊದಲಾದ ಯೋಜನೆಗಳ ಮೂಲಕ ಅಲ್ಪಸಂಖ್ಯಾತರಿಗಾಗಿ ವಸ್ತು ರೂಪದ ಪ್ರಯೋಜನಗಳು ಮತ್ತು ಹಣಕಾಸು ವಿತರಣೆಯನ್ನು ತೆಗೆದಿರಿಸುವುದು.

 

  1. ತಾಂತ್ರಿಕ ತರಬೇತಿಯ ಮೂಲಕ ಕೌಶಲ್ಯತೆಗಳನ್ನು ಸುಧಾರಿಸುವುದು:

ಹೊಸತಾಗಿ ಸ್ಥಾಪಿಸಲಾಗುವ ಐ.ಟಿ.ಐ. ಸಂಸ್ಥೆಗಳಲ್ಲಿ ಕೆಲವೊಂದು ಶೇಕಡಾವಾರು ಪ್ರಮಾಣದ ಘಟಕಗಳನ್ನು ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸುವುದು ಮತ್ತು ಆ ಪ್ರದೇಶಗಳಲ್ಲಿ ಈಗಿರುವ ಐ.ಟಿ.ಐ. ಸಂಸ್ಥೆಗಳನ್ನು ಉತ್ಕೃಷ್ಟತೆಯ ಕೇಂದ್ರಗಳನ್ನಾಗಿ ಪರಿವರ್ತಿಸುವಲ್ಲಿ ಹೆಚ್ಚಾಗಿ ಪರಿಗಣಿಸುವುದು.

 

  1. ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ ಬೆಂಬಲಗಳನ್ನು ಹೆಚ್ಚಿಸುವುದು:

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮವನ್ನು (ಎನ್‌.ಎಮ್‌.ಡಿ.ಎಫ್‌.ಸಿ.) ಬಲಪಡಿಸುವುದು ಮತ್ತು ಖಾಸಗಿ ವಲಯದ ಬ್ಯಾಂಕ್ ಸಾಲಗಳಲ್ಲಿ ಕೆಲವೊಂದು ಶೇಕಡಾವಾರು ಪ್ರಮಾಣಗಳನ್ನು ಅಲ್ಪಸಂಖ್ಯಾತರಿಗಾಗಿ ತೆಗೆದಿರಿಸುವುದು.

 

  1. ರಾಜ್ಯ ಮತ್ತು ಕೇಂದ್ರ ಸೇವೆಗಳಿಗಾಗಿ ನೇಮಕಾತಿಗಳು:

ಕೇಂದ್ರ ಮತ್ತು ರಾಜ್ಯ ಪೊಲಿಸ್ ಪಡೆಗಳು, ರೈಲ್ವೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ಅಲ್ಪಸಂಖ್ಯಾತರಿಗೆ ಉದ್ಯೋಗಳನ್ನು ನೀಡುವ ಬಗ್ಗೆ ವಿಶೇಷವಾಗಿ ಪರಿಗಣಿಸಲಾಗುವುದು. ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೋಚಿಂಗ್ ನೀಡುವುದಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಲಾಗುವುದು.

 

  1. ಗ್ರಾಮೀಣ ವಸತಿ ಯೋಜನೆಗಳಲ್ಲಿ ಸರಿ-ಸಮಾನ ಪಾಲುಗಳು:

ಇಂದಿರಾ ವಸತಿ ಯೋಜನೆಗಳಲ್ಲಿ ಕೆಲವೊಂದು ಪಾಲನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಬಡವರಿಗಾಗಿ ವಿಶೇಷವಾಗಿ ತೆಗೆದಿರಿಸಲಾಗುವುದು.

 

  1. ಅಲ್ಪಸಂಖ್ಯಾತರು ವಾಸಿಸುತ್ತಿರುವ ಕೊಳಚೆಗೇರಿ ಪ್ರದೇಶಗಳಲ್ಲಿನ ಜನಜೀವನ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು:

ಸಮಗ್ರ ವಸತಿ ಮತ್ತು ಕೊಳಚೆಗೇರಿ ಅಭಿವೃದ್ಧಿ ಕಾರ್ಯಕ್ರಮ (ಐ.ಎಚ್.ಎಸ್.ಡಿ.ಪಿ.) ಮತ್ತು ಜವಾಹರ್‌ ಲಾಲ್ ನೆಹರೂ ಪುನರ್-ನಿರ್ಮಾಣ ಕಾರ್ಯಕ್ರಮ (ಜೆ.ಎನ್.ಎನ್.ಯು.ಆರ್.ಎಮ್.)ಗಳ ಅಡಿಯಲ್ಲಿ ಪ್ರಯೋಜನಗಳು ಅಲ್ಪಸಂಖ್ಯಾತರಿಗೂ ಕೂಡ ಸರಿ-ಸಮಾನವಾಗಿ ದೊರಕುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

 

  1. ಕೋಮುವಾರು ಘಟನಾವಳಿಗಳನ್ನು ತಡೆಗಟ್ಟುವುದು:

ಕೋಮುವಾರು ಸಂವೇದನಾ ಶೀಲತೆ ಹೊಂದಿರುವ ಜಿಲ್ಲೆಗಳಲ್ಲಿ ಅತ್ಯುನ್ನತ ದಕ್ಷತೆ ಹೊಂದಿರುವ, ನಿಷ್ಪಕ್ಷಪಾತ ಮತ್ತು ಜಾತ್ಯಾತೀತ ದಾಖಲೆ ಹೊಂದಿರುವ ಜಿಲ್ಲಾಧಿಕಾರಿಯನ್ನು ನೇಮಕ ಮಾಡುವುದು.

 

  1. ಕೋಮುವಾರು ಅಪರಾಧಗಳ ವಿರುದ್ಧ ವಿಚಾರಣೆ ನಡೆಸುವುದು:

ಕೋಮುವಾರು ಅಪರಾಧಗಳ ವಿಚಾರಣೆಗಳನ್ನು ತೀವ್ರಗೊಳಿಸಿ ಅಪರಾಧಿಗಳಿಗೆ ಶೀಘ್ರವೇ ಶಿಕ್ಷೆ ದೊರಕುವಂತೆ ಖಚಿತಪಡಿಸಿಕೊಳ್ಳಲು ಕೋಮುವಾರು ಅಪರಾಧಗಳ, ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ನೇಮಕ ಮಾಡುವುದು/ಸ್ಥಾಪಿಸುವುದು.

 

  1. ಕೋಮುವಾರು ಹಿಂಸೆಯಿಂದಾಗಿ ತೊಂದರೆಗೊಳಗಾದವರಿಗೆ ಪುನರ್ವಸತಿ ಒದಗಿಸುವುದು:

ಕೋಮುವಾರು ಹಿಂಸಾಕೃತ್ಯಗಳಲ್ಲಿ ತೊಂದರೆಗೊಳಗಾದವರಿಗೆ ತಕ್ಷಣವೇ ಪರಿಹಾರಗಳನ್ನು ಒದಗಿಸಲಾಗುವುದು ಮತ್ತು ಅವರ ಪುನರ್ ವಸತಿಗಾಗಿ ಸಾಕಷ್ಟು ಹಣಕಾಸು ನೆರವನ್ನು ಒದಗಿಸುವುದು.

 

Last Updated: 29-06-2021 07:15 PM Updated By: DISTRICT OFFICER


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : MINORITY WELFARE DEPARTMENT VIJAYAPURA
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080