ಅಭಿಪ್ರಾಯ / ಸಲಹೆಗಳು

ಪರಿಚಯ

 ಪರಿಚಯ

 

ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಸರ್ವತ್ತೋಮುಖ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿದ್ದು, 1999-2000ನೇ ಸಾಲಿನಿಂದ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮಟ್ಟದಲ್ಲಿ ನಿರ್ದೇಶನಾಲಯ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಪ್ರತ್ಯೇಕ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಛೇರಿಗಳನ್ನು ಸ್ಥಾಪಿಸುವುದರ ಮೂಲಕ ಅಲ್ಪಸಂಖ್ಯಾತ ವರ್ಗಗಳಿಗೆ ಪ್ರತ್ಯೇಕವಾಗಿ ಭಾರತ ಸಂವಿಧಾನದ ಅನುಚ್ಚೇದ 15(4)ರಡಿಯಲ್ಲಿ ಶೈಕ್ಷಣಿಕ ಹಾಗೂ 16(4)ರಡಿಯಲ್ಲಿ ಔದ್ಯೋಗಿಕ ಮೀಸಲಾತಿ ಸೌಲಭ್ಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಿದೆ.

 ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಜೈನ, ಬುದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಹಲವು ಯೋಜನೆಗಳನ್ನು ಕೈಗೊಂಡಿರುತ್ತದೆ. ಈ ಇಲಾಖೆಯ ಮುಖ್ಯ ಉದ್ದೇಶವು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವುದು, ಹೊಸ ಕಾರ್ಯಕ್ರಮಗಳನ್ನು ಆರಂಭಿಸುವುದು ಹಾಗೂ ಈಗಿರುವ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಬಲಗೊಳಿಸುವುದಾಗಿದೆ.

 

ಜನಸಂಖ್ಯೆ ವಿವರ:
2011ರ ಜನಗಣತಿಯಂತೆ ಭಾರತ, ಕರ್ನಾಟಕ ಮತ್ತು ವಿಜಯಪುರ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆಯ ವಿವರ ಈ ಕೆಳಗಿನಂತಿದೆ:

 

ಸಮುದಾಯಗಳು

ಭಾರತ ದೇಶದ ಜನಸಂಖ್ಯೆ

ಕರ್ನಾಟಕ ರಾಜ್ಯದ ಜನಸಂಖ್ಯೆ

ವಿಜಯಪುರ ಜಿಲ್ಲೆಯ ಜನಸಂಖ್ಯೆ

ಜನಸಂಖ್ಯೆ

ಶೇಕಡಾವಾರು

ಜನಸಂಖ್ಯೆ

ಶೇಕಡಾವಾರು

ಜನಸಂಖ್ಯೆ

ಶೇಕಡಾವಾರು

ಮುಸ್ಲಿಂ

17,22,00,000

14.23%

78,93,065

12.92%

3,69,588

16.97%

ಕ್ರಿಶ್ಚಿಯನ್‌

2,78,00,000

2.3%

11,42,647

1.87%

2,433

0.11%

ಸಿಖ್

2,08,00,000

1.72%

28,773

0.05%

558

0.02%

ಬೌದ್ದ್‌

84,43,000

0.70%

95,710

0.16%

374

0.01%

ಜೈನ್

44,52,000

0.37%

4,40,280

0.72%

8665

0.39%

ಒಟ್ಟು

23,36,95,000

19.32%

96,00,475

15.74%

3,81,618

17.52%

 

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನಿಗದಿತ ಆದಾಯ ಮಿತಿಯೊಳಗಿನ ಅಲ್ಪಸಂಖ್ಯಾತ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಮತ್ತು ಪ್ರವರ್ಗ-3ಬಿಯಲ್ಲಿ ಮುಸ್ಲಿಂ, ಕ್ರೆöÊಸ್ತ, ಜೈನ, ಬೌದ್ಧ್, ಸಿಖ್ ಮತ್ತು ಪಾರ್ಸಿ ಜನಾಂಗದವರನ್ನು ಅಲ್ಪಸಂಖ್ಯಾತರೆAದು ಗುರುತಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ: SWD225BCA2000 ದಿನಾಂಕ: 30-03-2002 ರಲ್ಲಿ ಈ ಕೆಳಕಂಡ ಮತೀಯ ಅಲ್ಪಸಂಖ್ಯಾತರನ್ನು ವಿವಿಧ ಹಿಂದುಳಿದ ಗುಂಪುಗಳಲ್ಲಿ ವರ್ಗೀಕರಿಸಿ ಸಂವಿಧಾನದ ಅನುಚ್ಚೇದ 15(4) ಮತ್ತು 16(4)ರಡಿ ಮೀಸಲಾತಿಯ ಸೌಲಭ್ಯ ಒದಗಿಸಲಾಗಿದೆ.

 

ವರ್ಗಗಳು

ಶೇಕಡಾವಾರು ಮೀಸಲಾತಿ 15(4) ಮತ್ತು 16(4)ರಡಿ

ಅಲ್ಪಸಂಖ್ಯಾತರ ಜಾತಿ/ಉಪಜಾತಿಗಳು

ಪ್ರವರ್ಗ-1

4%

ನಧಾಫ್, ಪಿಂಜಾರ, ಖಸಾಬ, ನಾಲ್ಬಂದ, ಛಪ್ಪರಬಂದ, ದರವೇಸು, ಫುಲ್ಲಮಾಲಿ, ಕಸಾಯಿ, ಅಟಾರಿ, ಶಿಕ್ಕಾಲಿಗಾರ, ಶಿಕ್ಕಾಲ್ಲಗರ್, ಸಿಕ್ಕಾಲಿಗರ್, ಸಾಲಬಂದ, ಟಿಕನಕರ, ಬಾಜಿಗರ, ಜೊಹರಿ, ಪಿಂಜಾರಿ, ಪಿಂಜಾರ, ನದಾಫ್, ಪರಿಶಿಷ್ಟ ಜಾತಿಯಿಂದ ಮತಾಂತರ ಹೊಂದಿದ ಕ್ರಿಶ್ಚಿಯನ್ (ಇತರೆ ಜಾತಿಗಳೊಂದಿಗೆ)

ಪ್ರವರ್ಗ-2ಎ

15%

ಬೌದ್ಧರು (ಇತರೆ ಜಾತಿಗಳೊಂದಿಗೆ) ಧೋಬಿ, ಲೂಹಾರ್, ಸೂನಾರ್, ಅತಾರಿ, ಅಥಾರಿ, ಫೂಲ್‌ಮಾಲಿ, ಫುಲ್‌ಮಾಲಿ, ಫುಲ್ಲಾರಿ, ಫುಲ್ಲಾರಿ, ಕಸವಿನ, ಗೋವಂಡಿ, ದರ್ಜಿ, ರಂಗ್ರೇಜ್, ಹುಟ್‌ಕರ್, ಜುಲೊಹಿ, ಪಟ್ಟೆಗಾರ್, ಪಟ್ಟೇಕಾರಿ, ಪಟ್ಟೆಗರ.

ಪ್ರವರ್ಗ-2ಬಿ

4%

ಮುಸ್ಲಿಂ

ಪ್ರವರ್ಗ-3ಬಿ

5%

ಜೈನರು (ದಿಗಂಬರ್), ಕ್ರಿಶ್ಚಿಯನ್ (ಇತರೆ ಜಾತಿಗಳೊಂದಿಗೆ)

ಇತ್ತೀಚಿನ ನವೀಕರಣ​ : 03-08-2021 05:14 PM ಅನುಮೋದಕರು: DISTRICT OFFICER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080