ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಬೌದ್ಧ

ಬೌದ್ಧ ವಿಹಾರ (ದೇವಾಲಯ)ಗಳಿಗೆ ಸಮುದಾಯದ ಅಭಿವೃದ್ಧಿ

     ಕರ್ನಾಟಕ ರಾಜ್ಯದಲ್ಲಿನ ಬೌದ್ಧ ವಿಹಾರ (ದೇವಾಲಯ)ಗಳಿಗೆ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯನುದಾನ ಮಂಜೂರು ಮಾಡುವ ಈ ಯೋಜನೆಯನ್ನು ಆದೇಶಕ್ಕೆ “ಅನುಬಂಧ-ಎ”ರಲ್ಲಿ ಲಗತ್ತಿಸಿರುವ ಮಾರ್ಗಸೂಚಿಗಳೊಂದಿಗೆ ಜಾರಿಗೆ ತರಲು ಮಂಜೂರಾತಿ ನೀಡಲಾಗಿದೆ.

 

ಅನುಬಂಧ-

ಕರ್ನಾಟಕ ರಾಜ್ಯದಲ್ಲಿನ ಬೌದ್ಧ ವಿಹಾರ (ದೇವಾಲಯ)ಗಳಿಗೆ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಾನುದಾನ ಬಿಡುಗಡೆ ಮಾಡಲು ಮಾರ್ಗಸೂಚಿಗಳು.

ಕರ್ನಾಟಕ ರಾಜ್ಯಾದ್ಯಂತ ಬೌದ್ಧ ಅಲ್ಪಸಂಖ್ಯಾತರ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಲ್ಲಿ ಬೌದ್ಧ ವಿಹಾರ (ದೇವಾಲಯ)ಗಳಗೂ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರ ಕೈಗೊಳ್ಳುವುದರ ಮೂಲಕ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆಯೊಂದಿಗೆ ಇವುಗಳನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡುವುದು ಅಗತ್ಯವೆಂದು ಕಂಡು ಬಂದಿದೆ.

ಈ ಉದ್ದೇಕ್ಕಾಗಿ ಅರ್ಹ ಬೌದ್ಧ ವಿಹಾರ (ದೇವಾಲಯ)ಗಳಿಗೆ ಸಹಾಯಾನುದಾನವನ್ನು ನೀಡಲು ರಾಜ್ಯದ ಆಯವ್ಯದಲ್ಲಿ ಅನುದಾನ ನಿಗದಿ ಪಡಿಸಲಾಗಿದೆ. ಸದರಿ ಕಾರ್ಯಕ್ರಮದಡಿ ಇಚ್ಚೆಯುಳ್ಳ ಬೌದ್ಧ ವಿಹಾರ (ದೇವಾಲಯ) ಗಳಿಗೂ ವ್ಯವಸ್ಥಾಪನ/ ಜೀರ್ಣೋದ್ಧಾರ ಸಮಿತಿಯವರು ಅನುದಾನ ಪಡೆಯಲು ಮುಂದೆ ಬಂದಲ್ಲಿ ಅಂಥಹ ಬೌದ್ಧ ವಿಹಾರ (ದೇವಾಲಯ) ಗಳಿಗೆ ಅನುದಾನ ಬಿಡುಗಡೆ ಮಾಡಲು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

 

ಅರ್ಹತೆಗಳು