ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಸಿಖ್

ಸಿಖ್ ಸಮುದಾಯದ ಗುರುದ್ವಾರಗಳ ನವೀಕರಣ/ದುರಸ್ಥಿ/ಜೀರ್ಣೋದ್ಧಾರಕ್ಕಾಗಿ ಸಹಾಯಧನ

      ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: MWD 207 MDS 2017, ದಿನಾಂಕ: 29-05-2017 ಆದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಸಿಖ್ ಸಮುದಾಯದ ಗುರುದ್ವಾರಗಳ ದುರಸ್ಥಿ/ ಜೀರ್ಣೋದ್ಧಾರ/ ನವೀಕರಣಕ್ಕಾಗಿ ಸಹಾಯಾನುದಾನವನ್ನು  ನೀಡಲು 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯದಲ್ಲಿನ ಸಿಖ್ ಸಮುದಾಯದ ಗುರುದ್ವಾರಗಳ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಾನುದಾನ ಬಿಡುಗಡೆ ಮಾಡಲು ಮಾರ್ಗಸೂಚಿಗಳು.

ಕರ್ನಾಟಕ ರಾಜ್ಯಾದಲ್ಲಿನ ಸಿಖ್ ಅಲ್ಪಸಂಖ್ಯಾತರ ಸಮುದಾಯದ ಗುರುದ್ವಾರಗಳ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರವನ್ನು  ಕೈಗೊಳ್ಳುವ ಮೂಲಕ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆಗಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಕಾಪಾಡುವುದು ಅಗತ್ಯವೆಂದು ಕಂಡುಬಂದಿರುವುದರಿಂದ ಈ ಉದ್ದೇಕ್ಕಾಗಿ ಅರ್ಹ ಗುರುದ್ವಾರಗಳಿಗೆ ಸಹಾಯಾನುದಾನವನ್ನು ನೀಡಲು ಉದ್ದೇಶಿಸಲಾಗಿದೆ.

ಅರ್ಹತೆಗಳು