ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕರ್ನಾಟಕ ಅಲ್ಪಸಂಖ್ಯಾತರ ಆಯೋಗ

ಕರ್ನಾಟಕ ಅಲ್ಪಸಂಖ್ಯಾತರ ಆಯೋಗ

ಅಲ್ಪಸಂಖ್ಯಾತರ ಜಾತ್ಯತೀತ ಸಂಪ್ರದಾಯಗಳು, ರಾಷ್ಟ್ರಿಯ ಐಕ್ಯತೆ ಹೆಚ್ಚಿಸಲು ಹಾಗೂ ಸರ್ಕಾರದ ನೀತಿಗಳು ಹಾಗೂ ವಿವಿಧ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿ ಮತ್ತು ಅನುಷ್ಠಾನಗೊಳಿಸುವ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಿಸುವ ಧ್ಯೆಯದೊಂದಿಗೆ ಸರ್ಕಾವು ಆದೇಶ DPAR 01 LMR 83 Dated, 09 May 1983, ರನ್ವಯ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವನ್ನು  The Commissions of Inquiry Act 1952. By Karnataka Act No. 31 of 1994 (First published in the Karnataka Gazette rd Extraordinary dated 3 October, 1994) ಕಾಯ್ದೆಯಡಿ ಸ್ಥಾಪಿಸಲಾಯಿತು. ತದನಂತರ ಅಗತ್ಯಕ್ಕೆ ಅನುಸಾರವಾಗಿ ಸದರ ಆಯೋಗದ ಕರ್ನಾಟಕ ಕಾಯ್ದೆಗೆ ತಿದ್ದುಪಡಿ ಮಾಡಲಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ (13) 2016 ಆಗಿರುತ್ತದೆ. ಇದರಿಂದಾಗಿ ಆಯೋಗವು ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಹೊಂದಿರುತ್ತದೆ. ಸದರ ಆಯೋಗವು ಅಲ್ಪಸಂಖ್ಯಾತರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಪಸಂಖ್ಯಾತರ ಸಮಸ್ಯಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನೀತಿಗಳು ಹಾಗೂ ಯೋಜನೆಗಳ ಜಾರಿ ಮತ್ತು ಅನುಷ್ಠಾನಕ್ಕೆ ಸಹಕಾರಿಯಾಗಿರುತ್ತದೆ.

                ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ನಿರಂತರ ಗಮನ ಹರಿಸಿರುವುದಲ್ಲದೇ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಸರ್ಕಾರವು ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿದೆ.

ಅ) ಸಂವಿಧಾನದಲ್ಲಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಸಂರಕ್ಷಣೆಗಾಗಿ ರಾಜ್ಯವಿಧಾನ ಮಂಡಲವು ಅಂಗೀಕರಿಸಿದ ಕಾನೂನುಗಳಲ್ಲಿ ಕಲ್ಪಿಸಲಾಗಿರುವ ವಿವಿಧ ರಕ್ಷಣಾ ಕ್ರಮಗಳ ಬಗ್ಗೆ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದು.

 

ಆ) ಎಲ್ಲಾ ರಕ್ಷಣಾ ಕ್ರಮಗಳ ಪರಿಣಾಮಕಾರಿಯಾದ ಅನುಷ್ಠಾನ ಮತ್ತು ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಶಿಫಾರಸು ಮಾಡುವುದು. [ ಪ್ರಧಾನ ಮಂತ್ರಿಗಳ ಹೊಸ 15 ಅಂಶದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಶಿಫಾರಸ್ಸುಗಳನ್ನು ಮಾಡುವುದು.]

 

ಇ) ಸಂವಿಧಾನದಲ್ಲಿ, ರಾಜ್ಯ ವಿಧಾನಮಂಡಲವು ಅಧಿನಿಯಮಿಸಿದ ಕಾನೂನುಗಳಲ್ಲಿ ಮತ್ತು ಅಲ್ಪಸಂಖ್ಯಾತ ವರ್ಗಗಳಿಗಾಗಿ ಸರ್ಕಾರದ ಕಾರ್ಯನೀತಿಗಳು ಮತ್ತು ಯೋಜನೆಗಳಲ್ಲಿ ಕಲ್ಪಿಸಲಾದ ರಕ್ಷಣಾ ಕ್ರಮಗಳ ಬಗೆಗಿನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದು.

 

ಈ) ಅಲ್ಪಸಂಖ್ಯಾತ ವರ್ಗಗಳ ಬಗೆಗಿನ ತಾರತಮ್ಯವನ್ನು ತಪ್ಪಿಸುವ ಪ್ರಶ್ನೆಯ ಸಂಬಂಧದಲ್ಲಿ ಅಧ್ಯಯನ, ಸಂಶೋಧನೆ ಮತ್ತು ವಿಶ್ಲೇಷಣೆ ಮಾಡುವುದು;

 

ಉ) ಸರ್ಕಾರದ ಉದ್ದಿಮೆಗಳ, ಸರ್ಕಾರದ ಮತ್ತು ಆರೆ ಸರ್ಕಾರಿ ನಿಗಮ ಮುಂತಾದವುಗಳ ಸೇವೆಯಲ್ಲಿ ಅಲ್ಪಸಂಖ್ಯಾತ ವರ್ಗಗಳ ಪ್ರಾತಿನಿಧ್ಯವನ್ನು ವಾಸ್ತವಿಕವಾಗಿ ನಿರ್ಧರಿಸುವುದು ಮತ್ತು ಪ್ರಾತಿನಿಧ್ಯವು ಸಾಕಷ್ಟಿಲ್ಲದಿದ್ದ ಸಂದರ್ಭದಲ್ಲಿ, ಅಪೇಕ್ಷಿತ ಮಟ್ಟವನ್ನು ಸಾಧಿಸುವುದಕ್ಕಾಗಿ ಮಾರ್ಗೋಪಾಯಗಳನ್ನು ಸೂಚಿಸುವುದು.

 

ಊ) ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು, ನಿರ್ವಹಿಸಲು ಮತ್ತು ಉತ್ತೇಜಿಸಲು ಶಿಫಾರಸುಗಳನ್ನು ಮಾಡುವುದು.

 

ಋ) ಗೊತ್ತುಪಡಿಸಿದ ಅವಧಿಯಲ್ಲಿ ಸರ್ಕಾರಕ್ಕೆ ನಿಯತಕಾಲಿಕ ವರದಿಗಳನ್ನು ಸಲ್ಲಿಸುವುದು.

 

ಎ) ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯವಾದುದೆಂದು ಆಯೋಗವು ಅಭಿಪ್ರಾಯಪಡುವ ಯಾವುದೇ ಇತರ ವಿಷಯದ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡುವುದು.

 

ಏ) ಅಲ್ಪಸಂಖ್ಯಾತ ವರ್ಗಗಳ ಕುಂದುಕೊರತೆಗಳನ್ನು ಪರಿಗಣಿಸುವುದು ಮತ್ತು ಕಾಲಕಾಲಕ್ಕೆ ಸೂಕ್ತ ಪರಿಹಾರವನ್ನು ಸೂಚಿಸುವುದು.

 

ಐ) ಅಲ್ಪಸಂಖ್ಯಾತರ ಹಕ್ಕುಗಳ ಮತ್ತು ರಕ್ಷಣಾ ಕ್ರಮಗಳ ಬಗೆಗಿನ ವಂಚನೆಗೆ ಸಂಬಂಧಿಸಿದ ನಿರ್ದಿಷ್ಠ ದೂರುಗಳ ಬಗ್ಗೆ ಪರಿಶೀಲಿಸುವುದು ಮತ್ತು ಅಂಥ ವಿಷಯಗಳನ್ನು ಸೂಕ್ತ ಪ್ರಾಧಿಕಾರದ ಮುಂದೆ ತರುವುದು.

 

ಆಯೋಗದ ಅಧಿಕಾರಗಳು.

 

ಕರ್ನಾಟಕ ಅಲ್ಪಸಂಖ್ಯಾತರ ಆಯೋಗ ಬೆಂಗಳೂರು

Karnataka State Minorities Commission
5th Floor Visveswaraya Main Tower, Dr. B R Ambedkar Veedhi, Bangalore 560001
Ph: +91-80-22863400 / 22864204
website: www.karmin.in