ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ವಿದ್ಯಾರ್ಥಿ ವೇತನ

ವಿದ್ಯಾರ್ಥಿ ವೇತನ ಕಾರ್ಯಕ್ರಮಗಳು

1. ಮೆಟ್ರಿಕ್ ಪೂರ್ವವಿದ್ಯಾರ್ಥಿವೇತನ:

 

1ನೇ ತರಗತಿಯಿಂದ 10ನೇ ತರಗತಿಯವರಿಗೆ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ವಿದ್ಯಾರ್ಥಿಯು ಅರ್ಜಿಯನ್ನು (NSP) ಆನ್‌ಲೈನ್ ಮೂಲಕ (www.scholarships.gov.in) ನಲ್ಲಿ ಸಲ್ಲಿಸಿ ದಾಖಲೆಗಳನ್ನು ನಿಗಧಿತ ದಿನಾಂಕದೊಳಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಸಲ್ಲಿಸುವುದು. ಪ್ರಸಕ್ತಸಾಲಿನಿಂದ ಮೆಟ್ರಿಕ್‌ಪೂರ್ವ ವಿಧ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನದ ಪೋರ್ಟಲ್ (SSP) ( www.ssp.karnataka.gov.in ) ನಲ್ಲಿಯೂ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.

->>ಮೆಟ್ರಿಕ್‌ಪೂರ್ವ ವಿದ್ಯಾರ್ಥಿಗಳು ರಾಷ್ಟ್ರಿಯ ವಿದ್ಯಾರ್ಥಿವೇತನದ ಪೋರ್ಟಲ್(NSP)ನಲ್ಲಿಯೂ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.<<-

 

ವಿದ್ಯಾರ್ಥಿಯು ಆನ್‌ಲೈನ ಅರ್ಜಿ --> ಹೆಚ್.ಎಂ. --> ಬಿ.ಆರ್.ಸಿ./ಬಿ.ಇ.ಓ --> ಕಛೇರಿ ಡಿ.ಡಿ.ಪಿ.ಐ. -->  ಸ್ಟೇಟ್ ನೊಡಲ್ ಆಫಿಸ್ 

ಅರ್ಹತೆಗಳು

ಲಗತ್ತಿಸಬೇಕಾದ ದಾಖಲೆಗಳು

ವಾರ್ಷಿಕ ಆದಾಯ ಮಿತಿ; ರೂ. 1.00 ಲಕ್ಷದ ಒಳಗಿರಬೇಕು.

ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ

ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ 50% ಕಿಂತ ಹೆಚ್ಚು ಅಂಕ ಗಳಿಸಿರಬೇಕು

ಹಿಂದಿನ ತರಗತಿಯ ಅಂಕ ಪಟ್ಟಿ ಲಗತ್ತಿಸಬೇಕು

30% ರಷ್ಟು ವಿದ್ಯಾರ್ಥಿವೆತನವನ್ನು ಬಾಲಕಿಯರಿಗಾಗಿ ಮೀಸಲಾತಿ

ಪ್ರಸ್ತುತ ತರಗತಿಗೆ ಪ್ರವೇಶ ಪಡೆದ ಫೀ ರಸೀದಿ.

ಮಂಜೂರಾದ ವಿದ್ಯಾರ್ಥಿವೇತನ್ನು ವಿದ್ಯಾಥಿಯ ಬ್ಯಾಂಕ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಬ್ಯಾಂಕ ಪಾಸ್ ಬುಕ್

 

ವಿದ್ಯಾಥಿಯ ಆಧಾರ ಕಾರ್ಡ್

 

ವಿದ್ಯಾಥಿಯ 2 ಭಾವಚಿತ್ರ (ಫೋಟೊ)

 

 

2. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ:

 

ಪಿಯುಸಿ ಹಾಗೂ ನಂತರದ ಎಲ್ಲಾ ಕೋರ್ಸಗಳು ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿಗಳು ಅರ್ಹರಾಗಿರುತ್ತಾರೆ. ವೆಬ್‌ಸೈಟ್ (www.scholarships.gov.in) ನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಸಂಬಂಧ ಪಟ್ಟ ತಾಲ್ಲೂಕ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಸಲ್ಲಿಸತಕ್ಕದ್ದು.

 

ವಿದ್ಯಾರ್ಥಿಯು ಆನ್‌ಲೈನ ಅರ್ಜಿ --> ಕಾಲೇಜು --> ತಾಲ್ಲೂಕು ಕಛೇರಿ -->  ಜಿಲ್ಲಾ ಕಛೇರಿ -->  ಸ್ಟೇಟ್ ನೊಡಲ್ ಆಫಿಸ್

ಅರ್ಹತೆಗಳು

ಲಗತ್ತಿಸಬೇಕಾದ ದಾಖಲೆಗಳು

ವಾರ್ಷಿಕ ಆದಾಯ ಮಿತಿ; ರೂ. 2.00 ಲಕ್ಷದ ಒಳಗಿರಬೇಕು.

ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ

ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ 50% ಕಿಂತ ಹೆಚ್ಚು ಅಂಕ ಗಳಿಸಿರಬೇಕು

ಆನ್‌ಲೈನ್ ಅರ್ಜಿ ಸಲ್ಲಿಸಿದ ಪ್ರಿಂಟ್ ಕಾಪಿ ಹಾಗೂ ಹಿಂದಿನ ತರಗತಿಯ ಅಂಕ ಪಟ್ಟಿ ಲಗತ್ತಿಸಬೇಕು

30% ರಷ್ಟು ವಿದ್ಯಾರ್ಥಿವೆತನವನ್ನು ಬಾಲಕಿಯರಿಗಾಗಿ ಮೀಸಲಾತಿ

ಪ್ರಸ್ತುತ ತರಗತಿಗೆ ಪ್ರವೇಶ ಪಡೆದ ಫೀ ರಸೀದಿ.

ಮಂಜೂರಾದ ವಿದ್ಯಾರ್ಥಿವೇತನವನ್ನು ವಿದ್ಯಾಥಿಯ ಬ್ಯಾಂಕ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಬ್ಯಾಂಕ ಪಾಸ್ ಬುಕ್

 

ವಿದ್ಯಾಥಿಯ ಆಧಾರ ಕಾರ್ಡ್

 

ವಿದ್ಯಾಥಿಯ 2 ಭಾವಚಿತ್ರ (ಫೋಟೊ)

 

3. ಮೆರಿಟ್-ಕಮ್-ಮೀನ್ಸ್ ವಿದ್ಯಾರ್ಥಿ ವೇತನ:

 

ತಾಂತ್ರಿಕ ಹಾಗೂ ವೃತ್ತಿಪರ (Engineering, Medical, Unani, Ayurvedic and Veterinary Subjects etc…) ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ವೆಬ್‌ಸೈಟ್ (www.scholarships.gov.in)ನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಸಂಬAಧ ಪಟ್ಟ ತಾಲ್ಲೂಕ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಸಲ್ಲಿಸತಕ್ಕದ್ದು.

 

ವಿದ್ಯಾರ್ಥಿಯು ಆನ್‌ಲೈನ ಅರ್ಜಿ -->  ಕಾಲೇಜು -->  ತಾಲ್ಲೂಕು ಕಛೇರಿ -->  ಜಿಲ್ಲಾ ಕಛೇರಿ -->  ಸ್ಟೇಟ್ ನೊಡಲ್ ಆಫಿಸ್

ಅರ್ಹತೆಗಳು

ಲಗತ್ತಿಸಬೇಕಾದ ದಾಖಲೆಗಳು

ವಾರ್ಷಿಕ ಆದಾಯ ಮಿತಿ; ರೂ. 2.50 ಲಕ್ಷದ ಒಳಗಿರಬೇಕು.

ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ

ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ 50% ಕಿಂತ ಹೆಚ್ಚು ಅಂಕ ಗಳಿಸಿರಬೇಕು

ಆನ್‌ಲೈನ್ ಅರ್ಜಿ ಸಲ್ಲಿಸಿದ ಪ್ರಿಂಟ್ ಕಾಪಿ ಹಾಗೂ ಹಿಂದಿನ ತರಗತಿಯ ಅಂಕ ಪಟ್ಟಿ ಲಗತ್ತಿಸಬೇಕು

30% ರಷ್ಟು ವಿದ್ಯಾರ್ಥಿವೇತನವನ್ನು ಬಾಲಕಿಯರಿಗಾಗಿ ಮೀಸಲಾತಿ

ಪ್ರಸ್ತುತ ತರಗತಿಗೆ ಪ್ರವೇಶ ಪಡೆದ ಫೀ ರಸೀದಿ.

ಮಂಜೂರಾದ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಯ ಬ್ಯಾಂಕ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಬ್ಯಾಂಕ ಪಾಸ್ ಬುಕ್

 

ವಿದ್ಯಾರ್ಥಿಯ ಆಧಾರ ಕಾರ್ಡ್

 

ವಿದ್ಯಾರ್ಥಿಯ 2 ಭಾವಚಿತ್ರ (ಫೋಟೊ)

 

 

4. ಶುಲ್ಕ ಮರುಪಾವತಿ ಯೋಜನೆ:

 

ಮೆಟ್ರಿಕ್ ನಂತರದ ವಿದ್ಯಾರ್ಥಿಗಳು (ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ಹಾಗೂ ತಾಂತ್ರಿಕ, ಎಂ.ಫಿಲ್ ಮತ್ತು ಪಿ.ಹೆಚ್.ಡಿ.ಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು)ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹಧನ ನೀಡಲು “ಶುಲ್ಕ ಮರುಪಾವತಿ” ಯೋಜನೆಯನ್ನು 2014-15ನೇ ಸಾಲಿನಿಂದ ಈ ಕೆಳಕಂಡ ಮಾರ್ಗಸೂಚಿಗಳಿಗೆ ಒಳಪಟ್ಟು ಜಾರಿಗೊಳಿಸಿ ಸರ್ಕಾರದ ಮಂಜೂರಾತಿ ನೀಡಿದೆ.

 

-:ಶುಲ್ಕ ಮರುಪಾವತಿ ಯೋಜನೆ ಅನುಷ್ಠಾನದ ಮಾರ್ಗಸೂಚಿಗಳು:-

 

ಕರ್ನಾಟಕ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜು, ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯತರ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಹೊರ ರಾಜ್ಯದಲ್ಲಿ ಸರ್ಕಾರಿ ಅನುದಾನಿತ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜು, ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ರಾಜ್ಯದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸಹಾಯಧವನ್ನು ನೀಡಲಾಗುವುದು. ಸಹಾಯಧನವನ್ನು ಕರ್ನಾಟಕ ರಾಜ್ಯದಲ್ಲಿ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಬರುವ ವೃತ್ತಿಪರ ಹಾಗೂ ತಾಂತ್ರಿಕ, ಎಂ.ಫಿಲ್ ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸವನ್ನು ಮುಂದುವರೆಸಲು ನೀಡಲಾಗುವುದು.

 

 

ಕೇಂದ್ರ ಸರ್ಕಾರದ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನ ಯೋಜನೆಯ ಮಾರ್ಗಸೂಚಿ ಪ್ರಕಾರ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಅವರ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಮತ್ತು ಪರೀಕ್ಷೆಯಲ್ಲಿ (Qualifying Exam) ಶೇ. 50% ಅಥವಾ ಶೇ. 50 ಕ್ಕಿಂತ ಹೆಚ್ಚಿನ ಅಂಕ ಅಥವಾ ಅದರ ತತ್ಸಮಾನ ಅಂಕಗಳನ್ನು ಗಳಿಸಿರಬೇಕು. ಶುಲ್ಕ ಮರುಪಾವತಿಯನ್ನು ನವೀಕರಿಸಲು ವಿದ್ಯಾರ್ಥಿಗಳು ಅವರ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಪೂರ್ಣವಾಗಿ ಉತ್ತೀರ್ಣರಾಗಿರಬೇಕು (Without backlogs)  ಹಾಗೂ ನಿಗಧಿತ ಸಮಯದೊಳಗೆ ನವೀಕರಣ ಅರ್ಜಿಯನ್ನು  ಸಲ್ಲಿಸಬೇಕು.

 

 

  1. ಈ ಯೋಜನೆಗಾಗಿ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದಿಲ್ಲ. ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪೈಕಿ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದು.

  2. ಕೇಂದ್ರ ಸರ್ಕಾರದ ಮೆರಿಟ್ ಕಂ ಮೀನ್ಸ್ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ನಿಗದಿತ ಕಾಲಮಿತಿ ಇದ್ದು ರಾಜ್ಯದಲ್ಲಿ ಕೆಲವು ಕೋರ್ಸಗಳು ಕೌನ್ಸಿಲಿಂಗ್ ಮೂಲಕ ತಡವಾಗಿ ಆರಂಭವಾಗಿರುವುದಲ್ಲದೇ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ನೇರವಾಗಿ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಜೊತೆಗೆ ಶುಲ್ಕ ಮರುಪಾವತಿ ಪಡೆಯಬಹುದಾಗಿದೆ.

  3. ಕೇಂದ್ರ ಸರ್ಕಾರದಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಮೊತ್ತ ಕಡಿಮೆ ಇರುವುದರಿಂದ ಹೊಂದಾಣಿಕೆ ಮೊತ್ತವನ್ನು ಶುಲ್ಕ ಮರುಪಾವತಿ ಯೋಜನೆಯಡಿ ನೀಡಲಾಗುವುದು.

  4. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನದಿಂದ ವಂಚಿತರಾಗಿರುವ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ಸದರಿ ವಿದ್ಯಾರ್ಥಿ ವೇತನವು ಸಹ ಅಲ್ಪ ಮೊತ್ತವಾಗಿರುವುದರಿಂದ ಹೊದಾಣಿಕೆ ಮೋತ್ತವನ್ನು ಶುಲ್ಕ ಮರುಪಾವತಿಯಡಿ ನೀಡಲಾಗುವುದು.