ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮೊರಾರ್ಜಿ ದೇಸಾಯಿ ಬಾಲಕೀಯರ ವಸತಿ ಶಾಲೆ ಅರಕೇರಿ

 

 

 

ಮಂಜೂರಾದ ವರ್ಷ

2007-08

MMDRS Arakeri 

ಶೈಕ್ಷಣಿಕ ಕಾರ್ಯಾರಂಭ ವರ್ಷ

2007-08

ಕಟ್ಟಡ ಸ್ವರೂಪ

ಸ್ವಂತ

ನಿವೇಶನ ವಿಸ್ತೀರ್ಣ

10 ಎಕರೆ

ಪ್ರವೇಶ ಮಂಜೂರಾತಿ ಸಂಖ್ಯೆ

300

ಅಕ್ಷಾಂಶ – ರೇಖಾಂಶ

16.915732-75.722139

 

ವಿವರಣೆ: ವಿಜಯಪುರ-ಸೋಲ್ಲಾಪುರ ಎನ್.ಎಚ್-52 ಹೊಂದಿಕೊಂಡಿರುವ ಅರಕೇರಿ ಎಲ್.ಟಿ ನಂ:1 ನಲ್ಲಿ ಸನ್ 2007 ರಲ್ಲಿ ಕರ್ನಾಟಕ ಘನ ಸರ್ಕಾರವು ಅಲ್ಪಸಂಖ್ಯಾತರ ಮಕ್ಕಳಿಗಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯನ್ನು 2007-08 ರಲ್ಲಿ ವಿಜಯಪುರದ ಸರ್ಕಾರಿ ಹಳೆಯ ದವಾಖಾನೆ ಆವರಣದಲ್ಲಿ ಕೇವಲ 5 ಜನರ ಹೊರಗುತ್ತಿಗೆ ಶಿಕ್ಷಕರೊಂದಿಗೆ 6 ನೇ ತರಗತಿಯನ್ನು 35 ಮಕ್ಕಳಿಂದ ಪ್ರಾರಂಭಗೊಂಡಿದ್ದು, 2015 ರಲ್ಲಿ ಸ್ವಂತ ಕಟ್ಟಡವನ್ನು ಅರಕೇರಿ ಎಲ್.ಟಿ ನಂ:1 ರಲ್ಲಿ ಹೊಂದಿ, 2016 ರಲ್ಲಿ ಕೆ.ಪಿ.ಎಸ್.ಸಿ ಮೂಲಕ ನೇರ ನೇಮಕಾತಿ ಹೊಂದಿದ್ದು, ಖಾಯಂ ಸಿಬ್ಬಂದಿಗಳನ್ನು ಹೊಂದಿ ಪ್ರಸ್ತುತ 6 ನೇ ತರಗತಿಯಿಂದ 10 ನೇ ತರಗತಿಯ ವರೆಗೆ ಗುಣಮಟ್ಟ ಶಿಕ್ಷಣವನ್ನು ನೀಡುತ್ತಿದೆ.

ಶಾಲೆಯು ಸುಸಜ್ಜಿತವಾದ ಭವ್ಯವಾದ ಶಾಲಾ ಸಂಕೀರ್ಣ, ಎರಡು ವಿದ್ಯಾರ್ಥಿನಿಯರ ವಸತಿ ನಿಲಯಗಳು, ಒಂದು ಭೋಜನಾಲಯ ಹಾಗೂ ಮೌಲಾನಾ ಆಜಾದ ಭವನ, ಹೊರಾಂಗಣ ಜೀಮ್ ಮತ್ತು ಆಟದ ಮೈದಾನವನ್ನು ಹೊಂದಿದ್ದು, ಪ್ರಸ್ತುತ 270 ವಿದ್ಯಾರ್ಥಿನಿಯರಿಗೆ ಗುಣಮಟ್ಟ ಶಿಕ್ಷಣವನ್ನು ನೀಡುತ್ತಿದೆ. ಸದರಿ ಶಾಲೆಯು ಹೆಣ್ಣು ಮಕ್ಕಳ ಶಾಲೆಯಾಗಿರುವದಿಂದ ಯಾವತ್ತು ಮಕ್ಕಳ ಹಿತದೃಷ್ಠಿಯಿಂದ 24 ಗಂಟೆಗಳ ಸಿ.ಸಿ.ಟೀವಿಗಳು ಸರ್ಪಗಾವಲಿನಂತೆ ಸೇವೆ ಒದಗಿಸುತ್ತದೆ.

ಸದರಿ ಶಾಲೆಯು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ, ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ಶಿಕ್ಷಣ ಇಲಾಖೆಯಿಂದ ಬಂದ ಎಲ್ಲಾ ನಿಯಮಗಳು ಪಾಲಿಸುತ್ತಾ ಮಕ್ಕಳಿಗೆ ನಿಯಮನುಸಾರ ಪರೀಕ್ಷೆಗಳು, ಸ್ಪರ್ದೆಗಳು ಎಲ್ಲಾ ಆಚರಣೆಗಳು, ಜಯಂತಿಗಳು ಮತ್ತು ಪಠ್ಯೆತರ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳುತ್ತಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ, ಅಲ್ಪಸಂಖ್ಯಾತರ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತರುವ ಹಾಗೂ ಗುಮ್ಮಟ ನಗರದಲ್ಲಿ ಇರುವ ನಮ್ಮ ಶಾಲೆ ಮುಖುಟಮಣಿ ಎಂದು ಹೇಳುವುದರಲ್ಲಿ ಹೆಮ್ಮೆ ವಿಷಯವಾಗಿದೆ.