ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಲಹಳ್ಳಿ

 

 

ಮಂಜೂರಾದ ವರ್ಷ

2007

 MMDRS Halalli

ಶೈಕ್ಷಣಿಕ ಕಾರ್ಯಾರಂಭ ವರ್ಷ

2007-08

ಕಟ್ಟಡ ಸ್ವರೂಪ

ಸ್ವಂತ

ನಿವೇಶನ ವಿಸ್ತೀರ್ಣ

8 ಎಕರೆ

ಪ್ರವೇಶ ಮಂಜೂರಾತಿ ಸಂಖ್ಯೆ

300

ಅಕ್ಷಾಂಶ – ರೇಖಾಂಶ

 17.351088-75.621125

ವಿವರಣೆ: ಚಡಚಣ - ಪಂಢರಾಪೂರ ರಸ್ತೆಗೆ ಹೊಂದಿಕೊಂಡಿರುವ, ಚಡಚಣ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಹಾಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಹೊಸ ಕಟ್ಟಡಕ್ಕೆ 2014 ರಲ್ಲಿ ಈ ವಸತಿ ಶಾಲೆ ಸ್ಥಳಾಂತರಗೊಂಡಿತು. ಈ ಶಾಲೆಯು 2007 ರಲ್ಲಿ ಪ್ರಾರಂಭವಾಗಿದ್ದು, ಪ್ರಾರಂಭದಲ್ಲಿ ಈ ಶಾಲೆಯು ಚಡಚಣ ಪಟ್ಟಣದ ಅಂಜುಮನ ಕಮೀಟಿಯ ಶಾದಿಮಹಲ್ ದಲ್ಲಿ ಪ್ರಾರಂಭಿಸಿದರು. 2007-08 ರಲ್ಲಿ ಕೇವಲ 50 ವಿದ್ಯಾರ್ಥಿಗಳು ಹಾಗೂ 4 ಜನ ಹೊರಗುತ್ತಿಗೆ ಸಿಬ್ಬಂದಿಯಿಂದ (ಶಿಕ್ಷಕರಿಂದ) ಶಾಲೆ ಪ್ರಾರಂಭಗೊಂಡಿತು. 2016 ರಲ್ಲಿ ಕೆ.ಪಿ.ಎಸ್.ಸಿ ನೇರ ನೇಮಕಾತಿ ಮೂಲಕ ಖಾಯಂ ಸಿಬ್ಬಂದಿಯೊಂದಿಗೆ ಪ್ರಸ್ತುತ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ.

 ಶಾಲೆಯು ಸುಸಜ್ಜಿತವಾದ ಭವ್ಯವಾದ ಶಾಲಾ ಸಂಕೀರ್ಣ, ಎರಡು ವಿದ್ಯಾರ್ತಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳು, ಒಂದು ಭೋಜನಾಲಯ, ಹೊರಾಂಗಣ ಜಿಮ್ ಮತ್ತು ಆಟದ ಮೈದಾನವನ್ನು ಹೊಂದಿದ್ದು, ಪ್ರಸ್ತುತ 275 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಸದರಿ ಶಾಲೆಯು ಸಹ-ಶಿಕ್ಷಣ ಶಾಲೆಯಾಗಿರುವದರಿಂದ ಯಾವತ್ತೂ ಮಕ್ಕಳ ಹಿತದೃಷ್ಠಿಯಿಂದ 24 ಗಂಟೆಗಳ ಸಿ.ಸಿ ಟಿ.ವ್ಹಿಗಳು ಸರ್ಪಗಾವಲು ಸೇವೆಗೈಯುತ್ತಿವೆ.

ಮಕ್ಕಳಿಗೆ ನಿಯಮಾನುಸಾರ ಪರೀಕ್ಷೆಗಳು, ಸ್ಪರ್ಧೆಗಳು, ಎಲ್ಲಾ ಆಚರಣೆಗಳು, ಜಯಂತಿಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳುತ್ತಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. 2018-19ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಆಶೀಪ ಜಮಾದಾರ ಎಂಬ ವಿದ್ಯಾರ್ಥಿಯು ಶೇ.98.24 ರಷ್ಟು ಅಂಕಗಳನ್ನು ಪಡೆಯುವದರೊಂದಿಗೆ ಚಡಚಣ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಶಾಲೆಗೆ ಮತ್ತು ಇಲಾಖೆಗೆ ಕೀರ್ತಿಯನ್ನು ತಂದಿದ್ದಾನೆ.