ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುದ್ದೇಬಿಹಾಳ 02

ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಮುದ್ದೇಬಿಹಾಳ ನಂ-2

ತಾ|| ಮುದ್ದೇಬಿಹಾಳ                                             ಜಿ||ವಿಜಯಪುರ

ಮಂಜೂರಾದ ವರ್ಷ

2017-18

MMDRS Muddebihal 02 

ಶೈಕ್ಷಣಿಕ ಕಾರ್ಯಾರಂಭ ವರ್ಷ

2017-18

ಕಟ್ಟಡ ಸ್ವರೂಪ

ಬಾಡಿಗೆ ಕಟ್ಟಡ

ಪ್ರವೇಶ ಮಂಜೂರಾತಿ ಸಂಖ್ಯೆ

250

ಅಕ್ಷಾಂಶ – ರೇಖಾಂಶ

16.351197 – 76.127474

 

ವಿವರಣೆ: “ಪ್ರತಿಭೆಗೆ ಪುರಸ್ಕಾರ”ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 2017-2018 ರ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾದ ವಸತಿ ಶಾಲೆಗಳಲ್ಲಿ ನಮ್ಮ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುದ್ದೇಬಿಹಾಳ ನಂ-02 ಕೂಡಾ ಒಂದು ಉತ್ತಮವಾದ ವಾತಾವರಣದಲ್ಲಿದೆ. ಈ ವಸತಿನ ಶಾಲೆ ದಿನಾಂಕ 01-06-2017 ರಂದು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಯಿತು. ಸರ್ಕಾರದ ಆದೇಶ ಸಂಖ್ಯೆ:ಎಂಡಬ್ಲೂಡಿ 185 ಎಂಡಿಎಸ್ 2017 ಬೆಂಗಳೂರ ದಿನಾಂಕ 24-06-2018ರಲ್ಲಿ ಆಗಿದೆ. 6 ರಿಂದ 8ನೇ ತರಗತಿಯವರೆಗೆ 148 ವಿದ್ಯಾರ್ಥಿಗಳು ಜ್ಞಾನಾರ್ಜನೆಗೈಯುತ್ತಿದ್ದಾರೆ. 3 ಶೈಕ್ಷಣಿಕ ವರ್ಷಗಳನ್ನು ನಮ್ಮ ವಸತಿ ಶಾಲೆಯು ಪೊರೈಸಿದ್ದು ಪ್ರತಿ ವರ್ಷ 100% ಫಲಿತಾಂಶ ದಾಖಲಿಸಿದೆ. ಪ್ರತಿಭಾ ಕಾರಂಜಿ ಮತ್ತು ಕ್ರೀಡೆಯಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ಜಿಲ್ಲಾ ಮಟ್ಟದಲ್ಲಿ ತಮ್ಮದೆ ಆದ ಛಾಪು ಮುಡಿಸಿದ್ದಾರೆ.

ಶಿಕ್ಷಕರ ಪರಿಣಾಮಕಾರಿ ಬೋಧನೆ ಅವರ ಅರ್ಪಣಾಭಾವ ಪಠ್ಯವಿಷಯಗಳ ಜೋತೆಗೆ ಪಠ್ಯೇತರ ವಿಷಯಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ ಇಲ್ಲಿರುವ ಭಾಷಾ ಸಂಘ, ವಿಜ್ಞಾನ ಸಂಘ, ಇಕೋ ಕ್ಲಬ್, ಇನ್ನಿತರ ಸಂಘಗಳ ಮೂಲಕ ವರ್ಷವಿಡಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.