ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಂದಗಿ

 

 

ಮಂಜೂರಾದ ವರ್ಷ

2017-18

 MMDRS Sindagi

ಶೈಕ್ಷಣಿಕ ಕಾರ್ಯಾರಂಭ ವರ್ಷ

2017-18

ಕಟ್ಟಡ ಸ್ವರೂಪ

ಬಾಡಿಗೆ ಕಟ್ಟಡ

ಪ್ರವೇಶ ಮಂಜೂರಾತಿ ಸಂಖ್ಯೆ

250

ಅಕ್ಷಾಂಶ – ರೇಖಾಂಶ

16.925206-76.228437

 

ವಿವರಣೆ: ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ವೃದ್ದಾಶ್ರಮ ಹತ್ತಿರದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಂದಗಿಯಲ್ಲಿ ನಡೆಸುತ್ತಿದ್ದೇವೆ. ಈ ವಸತಿ ಶಾಲೆಯು ಸನ್ 2017-18 ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು ಪ್ರಸ್ತುತ ವಸತಿ ಶಾಲೆಯಲ್ಲಿ 150 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಪ್ರಸ್ತುತ 6, 7, 8 ನೇ ತರಗತಿಯವರೆಗೆ ವಿದ್ಯಾರ್ಜನೆ ನಡೆಯುತ್ತಿದೆ.

ಶಿಕ್ಷಕರ ಪರಿಣಾಮಕಾರಿ ಬೋಧನೆ ಅವರ ಅರ್ಪಣಾ ಭಾವ, ಪಠ್ಯ ವಿಷಯಗಳ ಜೊತೆ ಪಠ್ಯೆೆತರ ವಿಷಯಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ. ಇಲ್ಲಿರುವ ಭಾಷಾ ಸಂಘ, ಪರಿಸರ ಸಂಘ, ವಿಜ್ಞಾನ ಸಂಘ, ಆರೋಗ್ಯ ಸಂಘ, ಕಾನೂನು ಸಾಕ್ಷರತಾ ಸಂಘ, ಕ್ರೀಡಾ ಸಂಘಗಳ ಮೂಲಕ ವರ್ಷಪೂರ್ತಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಉತ್ತಮ ಗುಣಮಟ್ಟದ ಶೈಕ್ಷಣಿಕ ಮಟ್ಟವನ್ನು ಕಾಪಾಡಿಕೊಳ್ಳಲು ಶಾಲೆಯು ತನ್ನ ವಿವಿಧ ಒಳಾಂಗಣ ಮತ್ತು ಹೊರಾಂಗಣ ಚಟುವಟಿಗಳನ್ನು ನಡೆಸುತ್ತದೆ. ವಿದ್ಯಾರ್ಥಿಗಳು ತರಗತಿಯ ಒಳಗೆ ಮತ್ತು ಹೊರಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ನಮ್ಮ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ತುಂಬುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.