ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಬಸವನ ಬಾಗೇವಾಡಿ

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಬಸವನ ಬಾಗೇವಾಡಿ

ತಾ|| ಬಸವನ ಬಾಗೇವಾಡಿ              ಜಿ||ವಿಜಯಪುರ

 

 

ಮಂಜೂರಾದ ವರ್ಷ

2016-17

 

ಶೈಕ್ಷಣಿಕ ಕಾರ್ಯಾರಂಭ ವರ್ಷ

2016-17

ಕಟ್ಟಡ ಸ್ವರೂಪ

ಸ್ವಂತ ಕಟ್ಟಡ

ಪ್ರವೇಶ ಮಂಜೂರಾತಿ ಸಂಖ್ಯೆ

50

ನಿವೇಶನದ ವಿಸ್ತೀರ್ಣ

11 ಗುಂಟಾ-02 ಅಣೆ

ಅಕ್ಷಾಂಶ – ರೇಖಾಂಶ

16.56754-75.978914

 

 

ವಿವರಣೆ: ಡಾ|| ನಂಜುಂಡಪ್ಪ ವರದಿಯನ್ವಯ ಹಿಂದುಳಿದ/ ಅತೀ ಹಿಂದುಳಿದ/ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾದ ಬಸವನ ಬಾಗೇವಾಡಿ ತಾಲ್ಲೂಕಿನ ಬಸವನ ಬಾಗೇವಾಡಿ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲು ಸರ್ಕಾರವು 2015-16ನೇ ಸಾಲಿನಿಂದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡಿ ಆದೇಶಿಸಿತು ಇದರನ್ವಯ ನಮ್ಮ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಬಸವನ ಬಾಗೇವಾಡಿ ಇದು ಸನ್ 2016-17 ರಲ್ಲಿ 50 ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದ್ದು ನಂತರ ಮಾರ್ಚ್-2019 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ನಿಲಯ ಪಾಲಕರ ಹಾಗೂ ಸಿಬ್ಬಂದಿ ವರ್ಗದವರ ಉತ್ತಮ ಸಹಕಾರದಿಂದ ಸರ್ಕಾರದ ಹಾಗೂ ಇಲಾಖೆಯ ಆಶಯದಂತೆ ನಿಲಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಪೌಷ್ಠಿಕತೆಯುಳ್ಳ ಮತ್ತು ನಿಗದಿತ ಪ್ರಮಾಣದ ಆಹಾರವನ್ನು ಮತ್ತು ಶುದ್ದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ, ಮತ್ತು ಉತ್ತಮವಾದ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿದೆ, ನಿಲಯಾರ್ಥಿಗಳ ಶೈಕ್ಷಣಿಕ ಉನ್ನತಿ ಸಾಧಿಸಲು ಪೂರಕವಾಗಿ ವಿದ್ಯಾರ್ಥಿ ನಿಲಯದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ, ನಿಲಯಾರ್ಥಿಗಳ ಕ್ರೀಡೆ ಹಾಗೂ ಸಾಂಸೃತಿಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವ ಮೂಲಕ ಅವರ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

2017-18ನೇ ಸಾಲಿನಲ್ಲಿ ಇಬ್ಬರು ಹಾಗೂ 2018-19ನೇ ಸಾಲಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ‘ರಾಷ್ಟ್ರೀಯ ಏಕೀಕರಣ ಶಿಬಿರ’ದಲ್ಲಿ ಭಾಗವಹಿಸಿರುತ್ತಾರೆ ಹಾಗೂ ಪ್ರತಿ ವರ್ಷ ಪಿ.ಯು.ಸಿ. ಮತ್ತು ಪದವಿಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿದ್ದಾರೆ.