ಅಭಿಪ್ರಾಯ / ಸಲಹೆಗಳು

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಕಾಲೇಜ್

 

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 95 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 5 ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಆರು(6) ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಒಂದು (1) ಸರ್ಕಾರಿ ಮುಸ್ಲಿಂ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿವೆ. ಈ ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಊಟ ಉಪಾಹಾರ, ವಸತಿ ನಿಲಯ, ಆರೋಗ್ಯ ಸೌಲಭ್ಯ, ಟ್ರಂಕ್, ಆಟದ ಸಾಮಗ್ರಿಗಳು ಮತ್ತು ಲೇಖನ ಸಾಮಗ್ರಿಗಳು ಇತ್ಯಾದಿ ಉಚಿತವಾಗಿ ನೀಡಲಾಗುವುದು. ಇದರ ಜೊತೆ ಆಂಗ್ಲ ಭಾಷೆಯ ತರಬೇತಿಯನ್ನು ಸಹ ನೀಡಲಾಗುವುದು.

 

 -> ವಸತಿ ಶಾಲೆಗಳಿಗೆ ಕೆಳಕಂಡ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.

 • ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ ರೂ. 1600/-ರ ವೆಚ್ಚದಲ್ಲಿ ಆಹಾರ ನೀಡಿಕೆ.

 • ಉಚಿತ ವಸತಿ ಸೌಲಭ್ಯ

 • ಎರಡು ಜೊತೆ ಸಮವಸ್ತ್ರ, ಬೂಟು, ಕಾಲುಚೀಲ ಪೂರೈಕೆ.

 • ಪ್ರತಿ ಬಾಲಕ ವಿದ್ಯಾರ್ಥಿಗೆ ಎರಡು ತಿಂಗಳಿಗೊಮ್ಮೆ ರೂ. 60/-ರಂತೆ ಕ್ಷೌರದ ವೆಚ್ಚ ನೀಡಿಕೆ (5 ಬಾರಿ ಮಾತ್ರ)

 • ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.

 • ಪ್ರತಿ ವಿದ್ಯಾರ್ಥಿಗೆ ಉಚಿತ ಇತರೆ ವೆಚ್ಚಗಳು (ಟೂಥ್‌ಪೇಸ್ಟ್, ಸೋಪ್, ಬ್ರಷ್, ಎಣ್ಣೆ).

 • ವೈದ್ಯಕೀಯ ಸೌಲಭ್ಯ, ಹಾಸಿಗೆ ಹೊದಿಕೆ, ಟ್ರಂಕ್, ಮಂಚ, ಪ್ರಯೋಗಶಾಲೆ ಉಪಕರಣ, ಬೋಧನಾ ಸಲಕರಣೆ, ಕ್ರೀಡಾ ಸಾಮಗ್ರಿ, ಗ್ರಂಥಾಲಯಗಳ ಸೌಲಭ್ಯಗಳನ್ನು ಒದಗಿಸಲಾಗುವುದು.

 

->ವಸತಿ ಶಾಲೆಗಳಿಗೆ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು 

 

 • ಈ ಶಾಲೆಯನ್ನು 6 ರಿಂದ 10ನೇ ತರಗತಿಯವರೆಗೆ ನಡೆಸಲಾಗುವುದು. ಪ್ರತಿ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 50 ಆಗಿರುತ್ತದೆ. 6ನೇ ತರಗತಿಗೆ ಸೇರ ಬಯಸುವ ಅಭ್ಯರ್ಥಿಗಳು ಸರ್ಕಾರದ ಅಥವಾ ಅಂಗೀಕೃತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

 • ಈ ವಸತಿ ಶಾಲೆಗಳಿಗೆ ಪ್ರವೇಶ ನೀಡುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ. 2.50 ಲಕ್ಷಕ್ಕೆ ವೀರಿರಬಾರದು.

 • ಶೇ. 75 ರಷ್ಟು ಸ್ಥಾನಗಳನ್ನು (ಮುಸ್ಲಿಂ-77%, ಕ್ರಿಶ್ಚಿಯನ್-14%, ಜೈನ್ -6%, ಸಿಖ್-1%, ಬೌದ್ಧ-2%) ಅಲ್ಪಸಂಖ್ಯಾತರಿಗೆ ನೀಡಬೇಕು. ಅಲ್ಪಸಂಖ್ಯಾತರ ಸಮುದಾಯದ ನಿರ್ದಿಷ್ಟ ಸಮುದಾಯದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಲಭ್ಯವಿರುವ ಇತರೆ ಅಲ್ಪಸಂಖ್ಯಾತರ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಬಹುದು. ಶೇ. 25 ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ನೀಡತಕ್ಕದ್ದು.

 • ಸಾಧ್ಯವಾದಷ್ಟು ಶೇ. 80% ರಷ್ಟು ಸ್ಥಾನಗಳನ್ನು ಗ್ರಾಮೀಣ ಅಭ್ಯರ್ಥಿಗಳಿಗೆ ನೀಡಬೇಕು.

 

 ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ವಿವರ

 

ಕ್ರ.ಸಂ

ತಾಲ್ಲೂಕ

ವಸತಿ ಶಾಲೆಗಳ ಹೆಸರು ಮತ್ತು ವಿಳಾಸ

ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ

ಪ್ರಾಂಶುಪಾಲರ ಹೆಸರು ಮತ್ತು ಮೊಬೈಲ್ ಸಂಖ್ಯೆ

ನಿಲಯಪಾಲಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆ

1

ತಿಕೋಟಾ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಅರಕೇರಿ.

300

ಶ್ರೀಮತಿ ರೇಖಾ ಬಾರ್ಕಿ

8971459683

ಶ್ರೀ ಮಾಳವ್ವ ಯ. ಹುಲ್ಯಾಳ (ಪ್ರಭಾರ)

8971716591

2

ವಿಜಯಪುರ

ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಟಕ್ಕೆ, ವಿಜಯಪುರ

250

ಶ್ರೀಮತಿ ಎ.ಎಸ್.ಕಾಜಿ

8951293112

ಶ್ರೀ ಗವಿಸಿದ್ದಪ್ಪ ಸಜ್ಜನ (ಪ್ರಭಾರ)

9972782693

3

ಮುದ್ದೇಬಿಹಾಳ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಂ-1, ಮಾರುತಿ ನಗರ, ಮುದ್ದೇಬಿಹಾಳ

250

ಶ್ರೀ ಪ್ರಕಾಶಕುಮಾರ ಕೆ.ಎಮ್.

9591280287

ಶ್ರೀಮತಿ ಭಾಗ್ಯಶ್ರೀ ಬಿ. ಮಾಗಿ

7829822649

4

ಮುದ್ದೇಬಿಹಾಳ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ  ವಸತಿ ಶಾಲೆ, ನಂ-2, ಪೋಲಿಸ್ ಠಾಣೆ ಹಿಂದುಗಡೆ, ಮುದ್ದೇಬಿಹಾಳ

250

ಶ್ರೀ ಮುತ್ತಪ್ಪ ಕೂಡಗಿ (ಪ್ರಭಾರ)

9844363166

ಶ್ರೀ ಸದಾಶಿವ ಕನಸೆ

7619685635

5

ಸಿಂದಗಿ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಿಂದಗಿ

250

ಶ್ರೀ ಸಿದ್ದಪ್ಪಾ ಕಾರಿಮುಂಗಿ

9980952960

ಶ್ರೀ ಸತೀಶ ಗೋಟೊರ

9902556663

6

ಚಡಚಣ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಾಲಹಳ್ಳಿ ಚಡಚಣ 

300

ಶ್ರೀ ಮಲ್ಲಿಕಾರ್ಜುನ ಹೆಬ್ಬಳ್ಳಿ

9620828185

ಶ್ರೀ ಮಲ್ಲಿಕಾರ್ಜುನ ಹುಬ್ಬಳಿ

7676315171

7

ಇಂಡಿ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಂಡಿ

250

ಶ್ರೀ ಆನಂದಕುಮಾರ ಚನ್ನಪ್ಪಾ ಕಟವಾಣಿ, (ಪ್ರಭಾರ)

9036884925

ಶ್ರೀ ಸಾಹೇಬಗೌಡ ಪಾಟೀಲ

9844458077

* ಸೂಚನೆ->> ಮೇಲ್ಕಂಡ ಶಾಲೆಗಳ ಹೆಚ್ಚಿನ ಮಾಹಿತಿ ತಿಳಿಯಲು ಶಾಲೆಗಳ ಹೆಸರುಗಳ ಮೇಲೆ ಕ್ಲೀಕ ಮಾಡಿ

 **************************************************

 

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು

 

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 21 ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಒಂದು(1) ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ.

->  ವಸತಿ ಶಾಲೆಗಳಿಗೆ ಕೆಳಕಂಡ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.

 • ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ ರೂ. 1600/-ರ ವೆಚ್ಚದಲ್ಲಿ ಆಹಾರ ನೀಡಿಕೆ.

 • ಉಚಿತ ವಸತಿ ಸೌಲಭ್ಯ

 • ಎರಡು ಜೊತೆ ಸಮವಸ್ತ್ರ, ಬೂಟು, ಕಾಲುಚೀಲ ಪೂರೈಕೆ.

 • ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.

 • ಪ್ರತಿ ವಿದ್ಯಾರ್ಥಿಗೆ ಉಚಿತ ಇತರೆ ವೆಚ್ಚಗಳು (ಟೂಥ್‌ಪೇಸ್ಟ್, ಸೋಪ್, ಬ್ರಷ್, ಎಣ್ಣೆ)

 • ವೈದ್ಯಕೀಯ ಸೌಲಭ್ಯ, ಹಾಸಿಗೆ ಹೊದಿಕೆ, ಟ್ರಂಕ್, ಮಂಚ, ಪ್ರಯೋಗಶಾಲೆ ಉಪಕರಣ, ಬೋಧನಾ ಸಲಕರಣೆ, ಕ್ರೀಡಾ ಸಾಮಗ್ರಿ, ಗ್ರಂಥಾಲಯಗಳ ಸೌಲಭ್ಯಗಳನ್ನು ಒದಗಿಸಲಾಗುವುದು.

 ->ವಸತಿ ಕಾಲೇಜಿಗೆ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು.

 • ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳನ್ನು ಆಂಗ್ಲ ಮಾಧ್ಯಮದಲ್ಲಿ ಪರಿಗಣಿಸತಕ್ಕದ್ದು.

 • ಮೊರಾರ್ಜಿ ದೇಸಾಯಿ ವಸತಿ ಕಾಲೇಜುಗಳಲ್ಲಿ ವಿವಿಧ ವರ್ಗದ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ಜಾರಿಯಲ್ಲಿರುವ ಮೀಸಲಾತಿ ಅನುಪಾತವು ಈ ಪದವಿ ಪೂರ್ವ ಕಾಲೇಜುಗಳಿಗೂ ಅನ್ವಯವಾಗುತ್ತದೆ.

 • ಯಾವುದೇ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪರೀಕ್ಷೆ ನಡೆಸಿ ಸಂಬಂಧಪಟ್ಟ ಜಿಲ್ಲೆಯಲ್ಲಿ ಪ್ರಾರಂಭಿಸುವ ಪದವಿ ಪೂರ್ವ ಕಾಲೇಜಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡತಕ್ಕದ್ದು. ಆದರೆ ಯಾವುದೇ ಜಿಲ್ಲೆಯಲ್ಲಿ ಆ ಜಿಲ್ಲೆಗೆ ಸೇರಿದ ಸಾಕಷ್ಟು ವಿದ್ಯಾರ್ಥಿಗಳು ಲಭ್ಯವಾಗದಿದ್ದಲ್ಲಿ ಇಲಾಖಾ ಪ್ರವೇಶ ಪರೀಕ್ಷೆಗೆ ಹಾಜರಾದ ಇತರೆ ಜಿಲ್ಲೆಗಳ ಅಭ್ಯರ್ಥಿಗಳನ್ನು ಪರಿಗಣಿಸಬಹುದು.

 • ಪದವಿ ಪೂರ್ವ ಕೋರ್ಸುಗಳಿಗೆ ಸಂಬಂಧಿಸಿದಂತೆ ಯಾವುದೇ ಇತರೆ ವಿಷಯದಲ್ಲಿ ಸೂಚನೆಗಳು ಇರದೇ ಇದ್ದಲ್ಲಿ ಹಾಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿರುವ ಆದೇಶ ಮತ್ತು ನಿಯಮಗಳನ್ನು ಪಾಲಿಸತಕ್ಕದ್ದು.

ಕ್ರ.ಸಂ

ತಾಲ್ಲೂಕ

ವಸತಿ ಕಾಲೇಜ ಹೆಸರು ಮತ್ತು ವಿಳಾಸ

ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ

ಪ್ರಾಂಶುಪಾಲರ ಹೆಸರು  ಮತ್ತು ಮೊಬೈಲ್ ಸಂಖ್ಯೆ

ನಿಲಯಪಾಲಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆ

1

ತಿಕೋಟಾ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು, ಅರಕೇರಿ.

200

ಶ್ರೀ ಸಂಗಣ್ಣ ಆಲಗೂರ

9591612073

ಶ್ರೀ ಮಾಳವ್ವ ಯ. ಹುಲ್ಯಾಳ  (ಪ್ರಭಾರ)

8971716591

 

ಇತ್ತೀಚಿನ ನವೀಕರಣ​ : 13-08-2021 03:02 PM ಅನುಮೋದಕರು: DISTRICT OFFICER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080